ಅಥಣಿಯಲ್ಲಿ ರೂ 86 ಕೋಟಿ ವೆಚ್ಚದಲ್ಲಿ ಪಶು ವೈದ್ಯಕೀಯ ಕಾಲೇಜು ನಿರ್ಮಾಣ : ಡಿಸಿಎಂ ಲಕ್ಷ್ಮಣ ಸವದಿ

0
ಅಥಣಿ ತಾಲೂಕಿನ ರೈತರ ಬಹುದಿನಗಳ ಕನಸಾದ ಪಶುವೈದ್ಯಕೀಯ ಕಾಲೇಜು ಕಟ್ಟಡ ನಿರ್ಮಾಣಕ್ಕೆ  50 ಕೋಟಿ ರೂಪಾಯಿ ವೆಚ್ಚದಲ್ಲಿ ಈಗಾಗಲೇ ಕಾಮಗಾರಿ ಪ್ರಗತಿಯಲ್ಲಿದೆ.
ಎರಡನೇ ಹಂತದ ಕಾಮಗಾರಿಯನ್ನು ಪೂರ್ಣಗೊಳಿಸಲು ಅವಶ್ಯವಿರುವಂತಹ ರೂ 36 ಕೋಟಿ ರೂಪಾಯಿಗಳ ಅನುದಾನಕ್ಕೆ ಇಂದಿನ ಸಚಿವ ಸಂಪುಟ ಸಭೆಯಲ್ಲಿ  ಆಡಳಿತಾತ್ಮಕ  ಅನುಮೋದನೆ ನೀಡಲಾಗಿದೆ
ಬಹುದಿನಗಳ ಕನಸಾಗಿರುವ ಪಶು ವೈದ್ಯಕೀಯ ಕಾಲೇಜಿನ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸಿ ಅಥಣಿ ಜನತೆಯ ಉಪಯೋಗಕ್ಕೆ ಬರುವಂತೆ ಲೋಕಾರ್ಪಣೆ ಗೊಳಿಸಲಾಗುವುದು ಎಂದು ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚೀವರಾದ ಲಕ್ಷ್ಮಣ ಸವದಿ ತಿಳಿಸಿದರು.
ಬೆಂಗಳೂರಿನಲ್ಲಿ ಮಾತನಾಡಿದ ಅವರು ಹಲವು ವರ್ಷಗಳಿಂದ ಬರ ಮತ್ತು ನೆರೆಯಿಂದ ಭಾದಿತವಾದ ಅಥಣಿ ತಾಲೂಕಿನಲ್ಲಿ ಈಗಾಗಲೇ ಬರ ಪೀಡಿತ ಪ್ರದೇಶಗಳಲ್ಲಿ ನೀರಾವರಿ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದ್ದು ದೇಶದ ಬೆನ್ನೆಲುಬಾದ ರೈತರ ಹಿತವನ್ನು ಕಾಯುವ ದೃಷ್ಟಿಯಿಂದ ಅವರಿಗೆ ಅನುಕೂಲವಾಗುವಂತೆ ಪಶುವೈದ್ಯಕೀಯ ಕಾಲೇಜು ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ಹೊರವಲಯದಲ್ಲಿ ಕಾಮಗಾರಿ ನಡೆಯುತ್ತಿದ್ದು
ಕೊರತೆಯ ಅನುದಾನವನ್ನು ಸರಿದೂಗಿಸಲು ಒಟ್ಟು 86 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಯ ಬಾಕಿ ಉಳಿದ 36 ಕೋಟಿರೂಪಾಯಿಗಳಿಗೆ ಸಚಿವ ಸಂಪುಟ ದಲ್ಲಿ ಅನುಮೋದನೆ ನೀಡಲಾಗಿದೆ ಎಂದು ಅವರು ತಿಳಿಸಿದರು.
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');