ಜನತೆ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ನಿರ್ಲಕ್ಷ್ಯ

0

ಬೆಳಗಾವಿ: 52 ದಿನಗಳ ಬಳಿಕ ಸರ್ಕಾರ ಬೆಳಗಾವಿ ಸೇರಿದಂತೆ 16 ಜಿಲ್ಲೆಗಳ ಬೀಗ ಓಪನ್ ಮಾಡಲಾಗಿದ್ದು, ಆದರೆ. ಜನತೆ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ನಿರ್ಲಕ್ಷ್ಯ ತೋರುತ್ತಿದೆ. ನಗರದ ಮಾರ್ಕೇಟ್ ನಲ್ಲಿ  ದಿನಸಿ ಖರೀದಿಸಲು ನಾಗರೀಕರು ಗುಂಪು ಗುಂಪಾಗಿ ಸೇರಿಕೊಂಡಿದ್ದಾರೆ.

2020 ರಿಂದ ಲಾಕ್ ಮೇಲೆ ಲಾಕ್ ಹೇರಿದರು, ಜನತೆ ಮಾತ್ರ ಕೊರೋನಾ ಬಗ್ಗೆ ದಿವ್ಯ ನಿರ್ಲಕ್ಷ್ಯ ವಹಿಸುತ್ತಿದೆ. 2021 ಆರಂಭವಾದ ಬಳಿಕ ನಾಲ್ಕೈದು ತಿಂಗಳು ರಾಜ್ಯಕ್ಕೆ ಬೀಗ ಹಾಕಲಾಯಿತು.  ಜನತೆ ಸಂಕಷ್ಟ- ದುಡಿಮೆ ಇಲ್ಲದೇ ಒಂದು ಹೊತ್ತು ಊಟಕ್ಕೂ ಪರದಾಟ ನಡೆಸಿದ ಜನತೆ ಸ್ಥಿತಿಗತಿ ಇದೆ. ಆದರೆ, ಜನತೆ ಮಾತ್ರ ಸಾಮಾಜಿಕ ಅಂತರ ಕಾಯ್ದಯಕೊಂಡು ಮಾರಾಟ, ಜೀವನ ನಡೆಸುವ ಲಕ್ಷಣಗಳೇ ಕಾಣುತ್ತಿಲ್ಲ. ಜನತೆ ಮತ್ತೆ ಕಂಡೆಲೆಲ್ಲ ಅಲೆದಾಡಿದರೆ ಸರ್ಕಾರ  ಮತ್ತೆ ರಾಜ್ಯಕ್ಕೆ ಬೀಗ ಹಾಕಿದರೂ ಯಾವುದೇ ಆಶ್ಚರ್ಯ  ಪಡಬೇಕಿಲ್ಲ.

ಇನ್ನಾದರೂ ಸಾಮಾಜಿಕ ಅಂತರ ಕಾಯ್ದುಕೊಳ್ಳಿ:  ಸೋಮವಾರ ಇಲ್ಲಿನ ತರಕಾರಿ ಮಾರುಕಟ್ಟೆ ಆವರಣದಲ್ಲಿ ವಹಿವಾಟು ನಡೆಯಿತು. ಈ ಸಂದರ್ಭದಲ್ಲಿ ತರಕಾರಿ ವ್ಯಾಪಾರಿಗಳು ಮತ್ತು ಕೊಳ್ಳವವರು ಸೇರಿದಂತೆ ಇತರೆ ವ್ಯಾಪಾರಿಗಳು ಮಾಸ್ಕ್‌ ಹಾಕಿದೇ,  ಸಾಮಾಜಿಕ ಅಂತರವನ್ನೂ ಕೂಡ ಕಾಯ್ದು​ಕೊಂಡಿ​ರ​ಲಿ​ಲ್ಲ.

ಸರ್ಕಾರ ಕೊರೋನಾ ಜಾಗೃತಿಗಾಗಿ ಸಾಕಷ್ಟು ಮುಂ​ಜಾ​ಗ್ರ​ತಾ ಕ್ರಮಗಳನ್ನು ಅನುಸರಿಸಿ ಎಂದು ಸಾಕಷ್ಟುಪ್ರಚಾರ ಮತ್ತು ಜಾಗೃತಿ ಮೂಡಿಸುತ್ತಿದ್ದರೂ ಸಾರ್ವಜನಿಕರು ಮಾತ್ರ ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿಲ್ಲ. ಇದ​ಕ್ಕೆ ಪಟ್ಟಣದಲ್ಲಿ ಸೋಮವಾರ ನ​ಡೆ​ದ ವಹಿವಾಟು ಸಾಕ್ಷಿಯಾಗಿತ್ತು.

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');