ಸಿಐಡಿಯಿಂದ ಐಜಿಪಿ ರಾಘವೇಂದ್ರ ಸುಹಾಸ್‍ಗೆ ನೋಟಿಸ್

ಯಮಕನಮರಡಿ ಚಿನ್ನಕಳ್ಳತನ ಕೇಸ್‍ನಲ್ಲಿ ಬಿಗ್ ಟ್ವಿಸ್ಟ್..ಸಿಐಡಿಯಿಂದ

0

ಯಮಕನಮರಡಿ ಪೊಲೀಸ್ ಠಾಣೆಯಲ್ಲಿ 4.9 ಕೆಜಿ ಚಿನ್ನಕಳ್ಳತನ ಕೇಸ್‍ಗೆ ಸಂಬಂಧಪಟ್ಟಂತೆ ಐಜಿಪಿ ರಾಘವೇಂದ್ರ ಸುಹಾಸ್‍ಗೆ ಸಿಐಡಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.

ಹೌದು ವಿಚಾರಣೆಗೆ ಹಾಜರಾಗುವಂತೆ ಸಿಐಡಿ ಅಧಿಕಾರಿಗಳು ಐಜಿಪಿ ರಾಘವೇಂದ್ರ ಸುಹಾಸ್ ಅವರಿಗೆ ನೋಟಿಸ್ ನೀಡಿದ್ದಾರೆ. ಆದರೆ ವಿಚಾರಣೆಗೆ ಹಾಜರಾಗಲು ರಾಘವೇಂದ್ರ ಸುಹಾಸ್ ಆರೋಗ್ಯದ ನೆಪವೊಡ್ಡಿದ್ದಾರೆ ಎನ್ನಲಾಗುತ್ತಿದೆ.

ತಮ್ಮ ಮನೆ ಸದಸ್ಯರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಗುಣಮುಖರಾದ ನಂತರ ವಿಚಾರಣೆಗೆ ಹಾಜರಾಗುತ್ತೇನೆ ಎಂದು ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ.

ಈಗಾಗಲೇ ಕೇಸ್‍ನ ಪ್ರಮುಖ ರೂವಾರಿ ಕಿರಣ ವೀರಣಗೌಡರನನ್ನು ವಶಕ್ಕೆ ಪಡೆದುಕೊಂಡಿರುವ ಸಿಐಡಿ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ಈತನ ಹೇಳಿಕೆ ಆಧಾರದ ಮೇಲೆಯೇ ರಾಘವೇಂದ್ರ ಸುಹಾಸ್ ಅವರಿಗೆ ನೋಟಿಸ್ ನೀಡಲಾಗಿದೆಯಾ ಎಂಬ ಅನುಮಾನ ಮೂಡುತ್ತಿದೆ.

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');