7 ದಿನಗಳ ಅಂತರ್‍ರಾಷ್ಟ್ರೀಯ ಯೋಗ ತರಬೇತಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವನ್ನು ಅಂತರ್ಜಾಲದಲ್ಲಿ ಆಯೋಜಿಸಲಾಗಿತ್ತು.

0

ಬೆಳಗಾವಿ:  7ನೇ ಅಂತರ್‍ರಾಷ್ಟ್ರೀಯ ಯೋಗದಿನದ ಪ್ರಯುಕ್ತ ದಿನಾಂಕ 21-06-2021 ರಂದು ಕೆ.ಎಲ್.ಇ. ಸಂಸ್ಥೆಯ ರಾಜಾ ಲಖಮಗೌಡ ವಿಜ್ಞಾನ (ಸ್ವಾಯತ್ತ) ಮಹಾವಿದ್ಯಾಲಯದಲ್ಲಿ ಎನ್‍ಸಿಸಿ, ಎನ್‍ಎಸ್‍ಎಸ್, ಕ್ರೀಡಾ ಹಾಗೂ ಐಕ್ಯೂಎಸಿ ಘಟಕಗಳ ವತಿಯಿಂದ ದಿನಾಂಕ 21-06-2021 ರಿಂದ 27-06-2021 ರ ವರೆಗೆ ಹಮ್ಮಿಕೊಂಡಿರುವ 7 ದಿನಗಳ ಅಂತರ್‍ರಾಷ್ಟ್ರೀಯ ಯೋಗ ತರಬೇತಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವನ್ನು ಅಂತರ್ಜಾಲದಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಮುಖ್ಯ ಅತಿಥಿಗಳು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಎಂ. ರಾಮಚಂದ್ರಗೌಡ ಅವರು ಯೋಗದ ಇತಿಹಾಸ, ಪ್ರಾಮುಖ್ಯತೆ ಮತ್ತು ಯೋಗದಿಂದ ಒದಗುವ ಪ್ರಯೋಜನಗಳ ಕುರಿತು ಮಾತನಾಡಿದರು.

ಮತ್ತೋರ್ವ ಅತಿಥಿಗಳಾದ ಮನ್ಮಥ ಘರೋಟೆ ಅವರು ಯೋಗವು ಭಾರತದ ಪ್ರಾಚೀನ ಸಂಪ್ರದಾಯದ ಅಮೂಲ್ಯ ಕೊಡುಗೆಯಾಗಿದೆ ಮತ್ತು ಋಗ್ವೇದದಂತಹ ಪ್ರಾಚೀನ ಪೌರಾಣಿಕ ಗ್ರಂಥಗಳಲ್ಲಿ ಇದನ್ನು ಉಲ್ಲೇಖಿಸಲಾಗಿದೆ ಎಂದು ವಿವರಿಸುತ್ತ ಯೋಗದ ಮಹತ್ವವನ್ನು ವಿವರಿಸಿದರು.
ಕಾರ್ಯಕ್ರಮದ ಸಂಘಟನಾ ಕಾರ್ಯದರ್ಶಿಗಳಾದ ಡಾ. ಎಸ್.ಎಮ್. ಬುಲಬುಲಿ ಅವರು ಸರ್ವರನ್ನು ಸ್ವಾಗತಿಸಿದರು.

ಪ್ರಾಚಾರ್ಯರಾದ ಡಾ.(ಶ್ರೀಮತಿ) ಜೆ.ಎಸ್. ಕವಳೇಕರ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶ್ರೀಮತಿ ಮೇಘಾ ಗಲಗಲಿ ಮತ್ತು ಶ್ರೀಮತಿ ಪೂಜಾ ಮೆಳವಂಕಿ ಅತಿಥಿಗಳಾದ ಪ್ರೊ. ಎಂ. ರಾಮಚಂದ್ರಗೌಡ, ಕರ್ನಲ್ ಅಭಯ ಅವಸ್ತಿ, ಕಮಾಂಡಿಂಗ್ ಆಫೀಸರ್ 25 ಕರ್ನಾಟಕ ಬಿ.ಎನ್. ಎನ್‍ಸಿಸಿ ಬೆಳಗಾವಿ ಮತ್ತು ಡಾ. ಬಿ.ಎಸ್. ನಾವಿ, ಮುಖ್ಯಸ್ಥರು, ಮಾಣಿಜ್ಯಶಾಸ್ತ್ರ ವಿಭಾಗ ಮತ್ತು ಎನ್‍ಎಸ್‍ಎಸ್ ಸಂಯೋಜಕರು, ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ ಹಾಗೂ ಡಾ. ಮನ್ಮಥ ಘರೊಟೆ ನಿರ್ದೇಶಕರು ಲೋನಾವ್ಲಾ ಯೋಗ ಸಂಸ್ಥೆ, ಅವರುಗಳ ಪರಿಚಯ ಮಾಡಿದರು.

ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಯೋಜಕರು ಮತ್ತು ಕೆ.ಎಲ್.ಇ. ಸಂಸ್ಥೆಯ ಆಜೀವ ಸದಸ್ಯರಾದ ಡಾ. ಸತೀಶ ಎಂ.ಪಿ. ಎಲ್ಲ ವಿಭಾಗಗಳ ಮುಖ್ಯಸ್ಥರು ಮತ್ತು ಸಂಯೋಜಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದರು. ಎನ್‍ಎಸ್‍ಎಸ್ ಅಧಿಕಾರಿಗಳಾದ ಶ್ರೀ. ಎಚ್.ಎನ್. ಬನ್ನೂರ ವಂದಿಸಿದರು. ಮಿಸ್ ದಿವ್ಯಾ ಪರುಲೇಕರ್ ಕಾರ್ಯಕ್ರಮ ನಿರೂಪಿಸಿದರು.

ಭಾವಚಿತ್ರದಲ್ಲಿ: ಮುಖ್ಯ ಅತಿಥಿಗಳಾದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಎಂ. ರಾಮಚಂದ್ರಗೌಡ. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');