ಲಸಿಕೆ ಹಾಕಿಸಿಕೊಂಡವರಿಗೆ ಹೂವು ಕೊಟ್ಟ ಗ್ರಾ.ಪಂ. ಸದಸ್ಯರು

0
ಬೆಳಗಾವಿ:  ಅಥಣಿ: ತಾಲೂಕಿನ ಸತ್ತಿ ಗ್ರಾಮದಲ್ಲಿ ೧೮ ವರ್ಷ ಮೇಲ್ಪಟ್ಟವರಿಗೆ ಲಸಿಕೆ ದೊರೆಯುವಂತೆ ಮಾಡಿದ ದೇಶದ ಪ್ರಧಾನ ಮಂತ್ರಿ  ನರೇಂದ್ರ ಮೊದಿ ಅವರಿಗೆ ದೇಶದ ಎಲ್ಲ ಜನರೂ ಚೀರ ಋಣಿಯಾಗಿದ್ದೇವೆ.
 ಕೊರೊನಾ ಸೊಂಕಿನಿಂದ ಮುಕ್ತವಾಗಲು ಲಸಿಕೆ ಪಡೆಯುವುದೊಂದೆ ಪರಿಹಾರವಾಗಿದೆ. ಯುವಕರು ತಾವೂ ಲಸಿಕೆ ಹಾಕಿಸಿಕೊಂಡು ಇತರರು ಲಸಿಕೆ ಹಾಕಿಸಿಕೊಳ್ಳುವಂತೆ ಪ್ರೇರಣೆ ನೀಡಬೇಕೆಂದು ಗ್ರಾಮ ಪಂಚಾಯತ ಉಪಾಧ್ಯಕ್ಷ ಬಸವರಾಜ ಭಜರಂಗಿ ಹೇಳಿದರು.
 ಸಮೀಪದ ಸತ್ತಿ ಗ್ರಾಮದ ಶ್ರೀ ಬಾಳಕೃಷ್ಣ ರಂಗ ಮಂಟಪದಲ್ಲಿ ಸೋಮವಾರ ಆಯೋಜಿಸಿದ ೧೮ ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿ ಸತ್ತಿ ಗ್ರಾಮದಲ್ಲಿ ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷೆ ಜ್ಯೋತಿ ಹಳ್ಳೂರ, ಉಪಾಧ್ಯಕ್ಷ ಬಸವರಾಜ ಭಜರಂಗಿ, ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ನಿರೀಕ್ಷಕ ಬಸವರಾಜ ಕಕಮರಿ, ಪಿ.ಡಿ.ಒ ಬಿ.ಎಸ್.ಹಿರೇಮಠ, ಗ್ರಾಮ ಪಂಚಾಯತ ಸಿಬ್ಬಂದಿ, ಆಶಾ ಅಂಗನವಾಡಿ ಕಾರ್ಯಕರ್ತರು, ಆರೋಗ್ಯ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು. ಲಸಿಕೆ ಹಾಕಿಸಿಕೊಂಡ ೧೮ ವರ್ಷದ ಮೇಲ್ಪಟ್ಟ ಜನರಿಗೆ ಗ್ರಾಮ ಪಂಚಾಯತ ಸದಸ್ಯರು ಹೂವು, ಪೆನ್ನು ಊಡುಗೋರೆಯಾಗಿ ಕೊಟ್ಟು ಅಭಿನಯಿಸಿದರು.
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');