ಪತಿಯ ಕಿರುಕುಳಕ್ಕೆ ಬೆಸತ್ತು ಪತ್ನಿ ಆತ್ಮಹತ್ಯೆಗೆ ಶರಣು: ಇನ್ಸ್​ಪೆಕ್ಟರ್​ ಅಂದರ್

0

ಕೆರಳ:  ಪತಿಯ ಕಿರುಕುಳಕ್ಕೆ ಬೆಸತ್ತು ಪತ್ನಿ ಶೌಚಗೃಹದಲ್ಲಿ ಆತ್ಯಹತ್ಯೆಗೆ ಶರಣಾಗಿರುವ ದುರ್ಘಟನೆ ಕೆರಳದಲ್ಲಿ ಸೋಮವಾರ ಬೆಳಗಿನ ಜಾವ ನಡೆದಿದೆ.

ತನ್ನ ಪತ್ನಿಯ ಸಾವಿನ ಪ್ರಕರಣದಲ್ಲಿ ಕೇರಳದ ಸಹಾಯಕ ಮೋಟಾರು ವಾಹನ ನಿರೀಕ್ಷಕ ಇನ್ಸ್​ಪೆಕ್ಟರ್​ ಕಿರಣ್​ಕುಮಾರ್ ರನ್ನು ಬಂಧಿಸಲಾಗಿದ್ದು, ಈತನ ವಿರುದ್ಧ ಕೌಟುಂಬಿಕ ದೌರ್ಜನ್ಯ ಪ್ರಕರಣದಡಿಯಲ್ಲಿ ಕೇಸು ದಾಖಲಿಸಲಾಗಿದೆ.

ಕಿರಣ್​ಕುಮಾರ್ ಪತ್ನಿ ವಿಸ್ಮಯ ಮನೆಯಲ್ಲಿ ಶವವಾಗಿ ಪತ್ತೆಯಾದ ಬಳಿಕ ತನಿಖೆ ಚುರುಕುಗೊಳಿಸಿದ ಪೊಲೀಸರು, ಮಂಗಳವಾರ ಕಿರಣ್​ರನ್ನು ಅನೇಕ ಸಮಯದವರೆಗೆ ವಿಚಾರಣೆ ನಡೆಸಿದರು. ಈ ವೇಳೆ ಆತ ತಪ್ಪೊಪ್ಪಿಕೊಂಡಿದ್ದು, ತಾನು ವಿಸ್ಮಯಳಿಗೆ ಥಳಿಸುತ್ತಿದ್ದೆ ಎಂದು ಹೇಳಿದ್ದಾನೆ. ಜೊತೆಗೆ ವಿಸ್ಮಯ ತವರು ಮನೆಗೆ ಕಳುಹಿಸಿರುವ ಫೋಟೋಗಳಲ್ಲಿರುವ ಗಾಯಗಳು ಸಹ ನಾನೇ ಮಾಡಿದ್ದು ಎಂದು ಒಪ್ಪಿಕೊಂಡಿದ್ದಾನೆ.

ಈ ಹಿನ್ನೆಲೆ ಆರೋಪಿ ಇನ್ಸ್​ಪೆಕ್ಟರ್​ ಕಿರಣ್​ಕುಮಾರ್​ರನ್ನು ಪೊಲೀಸ್​ ಕಸ್ಟಡಿ ತೆಗೆದುಕೊಂಡಿದ್ದಾರೆ.
ಸೋಮವಾರ ಮುಂಜಾನೆ ನಾನು ಮತ್ತು ವಿಸ್ಮಯ ಜಗಳ ಆಡಿದೆವು. ಇದಾದ ಬಳಿಕ ತವರು ಮನೆಗೆ ಹೋಗುವುದಾಗಿ ಹೇಳಿದಳು. ತದನಂತರದಲ್ಲಿ ಇಬ್ಬರ ನಡುವಿನ ವೈಮನಸ್ಸು ಹಿರಿಯರ ಸಮ್ಮುಖದಲ್ಲಿ ಬಗೆಹರಿಯಿತು. ಆದರೆ, ತುಂಬಾ ನೊಂದಿದ್ದ ವಿಸ್ಮಯ ತನ್ನ ಜೀವನಕ್ಕೆ ತಾನೇ ಅಂತ್ಯವಾಡಿದಳು.

ಶೌಚಗೃಹಕ್ಕೆ ತೆರಳಿದ ವಿಸ್ಮಯ ಅನೇಕ ಸಮಯದವರೆಗೂ ಮರಳಿ ಬರಲಿಲ್ಲ. ಸುಮಾರು 20 ನಿಮಿಷವಾದರು ಬರಲಿಲ್ಲ. ಅನುಮಾನದಿಂದ ಬಾಗಿಲು ಮುರಿದು ನೋಡಿದಾಗ ಆಕೆ ಸತ್ತು ಬಿದ್ದಿದ್ದಳು ಎಂದು ಕಿರಣ್​ ಹೇಳಿಕೆ ನೀಡಿದ್ದಾನೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಿರಣ್​ ಮತ್ತು ವಿಸ್ಮಯ ಪಾಲಕರನ್ನು ವಿಚಾರಣೆ ಮಾಡುತ್ತಿದ್ದಾರೆ. ಕಿರಣ್​ ತಾಯಿಯು ಕೂಡ ವಿಸ್ಮಯ ಮೇಲೆ ಹಲ್ಲೆ ಮಾಡಿದ್ದರು ಎಂದು ವಿಸ್ಮಯ ಪಾಲಕರು ಆರೋಪಿಸಿದ್ದಾರೆ.////

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');