ವಲಸಿಗರಿಂದಲೇ ಬಿಜೆಪಿಗೆ ಡ್ಯಾಮೇಜ್ : ಶಾಸಕ ರಾಜಗೌಡ

0

ಬೆಂಗಳೂರು : ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕಸರತ್ತು ಮುಂದುವರೆದಿದ್ದು, ವಲಸಿಗರಿಂದಲೇ ಬಿಜೆಪಿ ಡ್ಯಾಮೇಜ್ ಆಗುವು ಹೇಳಿಕೆ ನೀಡಲಾಗುತ್ತಿದೆ ಎಂದು ಶಾಸಕ ರಾಜುಗೌಡ ತಿಳಿಸಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಮೂಲ ಬಿಜೆಪಿಗರು ಪಕ್ಷಕ್ಕೆ ಡ್ಯಾಮೇಜ್ ಆಗುವ ಹೇಳಿಕೆಗಳನ್ನು ನೀಡುತ್ತಿಲ್ಲ. ಬೇರೆ ಪಕ್ಷಗಳಿಂದ ಬಂದವರೇ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ನಾನೂ ಸಹ ವಲಸಿಗನೆ ಆದರೆ ನಾನು ಎಂದೂ ಪಕ್ಷದ ವಿರೋಧಿ ಹೇಳಿಕೆ ನೀಡಿಲ್ಲ ಎಂದರು.

ಬಿಜೆಪಿಯಲ್ಲಿದ್ದೇವೆ ಎಂದರೆ ಪಕ್ಷ ನಮಗೆ ತಾಯಿ ಇದ್ದಂತೆ. ತಾಯಿಗೆ ಅವಮಾನವಾಗುವ ರೀತಿ ಹೇಳಿಕೆ ನೀಡಬಾರದು. ನಮ್ಮ ಲಾಭಕ್ಕಾಗಿ ಪಕ್ಷವನ್ನೇ ಬಲಿಕೊಡುವ ಕೆಲಸ ಮಾಡಬಾರದು ಎಂದು ವಿರೋಧಿ ಬಣಗಳಿಗೆ ತಿರುಗೇಟು ನೀಡಿದ್ದಾರೆ.////

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');