ಇಂದು ಬೆಳಗಾವಿ ಜಿ.ಪಂ.ಸಭಾಂಗಣದಲ್ಲಿ ಸಚಿವೆ ಶಶಿಕಲಾ ಜೊಲ್ಲೆ ನೇತೃತ್ವದಲ್ಲಿ ಸಭೆ ನಡೆಯುತ್ತಿತ್ತು ಆದರೆ ಸಭೆಯಲ್ಲಿ ಕೆಲ ಅಧಿಕಾರಿಗಳು ಮೊಬೈಲ್ನಲ್ಲಿ ಫುಲ್ ಬಿಜಿಯಾಗಿದ್ದರು

0

ಬೆಳಗಾವಿ:ಹೀಗೆ ಈ ಮಹಿಳಾ ಅಧಿಕಾರಿ ಮಣಿಗಳು ಇಷ್ಟೊಂದು ಮೂಬೈಲಗಳಲ್ಲಿ ಬ್ಯೂಸಿ ಇರೋದ ಅವರ ಮನೆಗಳಲ್ಲಿ ಅಲ್ಲ, ಈ ಅಧಿಕಾರಿಗಳು ಕೋವಿಡ್ ಸಂಭಾವ್ಯ 3ನೇ ಅಲೆಯಿಂದ ಮಕ್ಕಳ ರಕ್ಷಣೆ ಹಾಗು ಸ್ಥಿತಿಗತಿಗಳ ತಯಾರಿ ಬಗ್ಗೆ ತಿಳಿಯಲು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಅವರು ಕರೆದಿದ್ದ ಸಭೆಯಲ್ಲಿ.

ಇಂದು ಬೆಳಗಾವಿ ಜಿ.ಪಂ.ಸಭಾಂಗಣದಲ್ಲಿ ಸಚಿವೆ ಶಶಿಕಲಾ ಜೊಲ್ಲೆ ನೇತೃತ್ವದಲ್ಲಿ ಸಭೆ ಆಯೋಜಿಸಲಾಗಿತ್ತು, ಆದರೆ ಜಿಪಂ ಸಿಇಓ ಹಾಗು ಸಚಿವೆ ಯವರು ಸಭೆ ಆರಂಭದಲ್ಲಿ ಸಭೆಗೆ ಬಂದಿದ್ದ ಅಧಿಕಾರಿಗಳಿಗೆ ಮೂಬೈಲ ಬಳಕೆ ಮಾಡಬಾರದು ಎಂದು ತಾಕೀತು ಮಾಡಿದ್ದರು.

 

ಆದರೆ ಸಭೆಯಲ್ಲಿ ಸಿಇಓ ದರ್ಶನ‌ ಎಚ್.ವಿ. ಅವರು ಮಕ್ಕಳ ಆರೋಗ್ಯ, ಪೌಷ್ಟಿಕ ಆಹಾರ, ಅವರ ಆರೈಕೆಗೆ ವೈದ್ಯರ ನಿಯೋಜನೆ, ಹೀಗೆ ಮೂರನೆಯ ಅಲೆಯ ವಿಷಯದ ಬಗ್ಗೆ ಪೂರ್ವಸಿದ್ದತೆಗಳ ಬಗ್ಗೆ ಪಿಪಿಟಿ ಪ್ರಸೆಂಟೆಷನ್ ಮಾಹಿತಿ ನೀಡ್ತಾ ಇದ್ದರೆ, ಇತ್ತ ಭಾಗಿಯಾದ ಅಧಿಕಾರಿಗಳು‌ ಮೊಬೈಲ್‌ನಲ್ಲಿ ಫುಲ್ ‌ಬ್ಯುಸಿ ಆಗಿರುವ ದೃಷ್ಯಗಳು ಕಂಡು ಬಂದವು, ಸಭೆ ಆರಂಭದಲ್ಲೇ ಮೊಬೈಲ್ ಬಳಸದಂತೆ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಜಿ.ಪಂ ಸಿಇಒ ಅವರು ಎಚ್ಚರಿಕೆ ನೀಡಿದರು, ಸಚಿವೆ ಶಶಿಕಲಾ ಜೊಲ್ಲೆ ಎಚ್ಚರಿಕೆ ನೀಡಿದರೂ ಅಧಿಕಾರಿಗಳು ಅವರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ಕೊಡದೆ ಫೋನ್ ನಲ್ಲಿ ಫುಲ್ ಬ್ಯುಸಿ ಆಗಿರುವ ಘಟನೆ ನಡೆದಿದೆ.‌

ಇತ್ತ, ಸಚಿವೆಯವರು ಮೂರನೆ ಅಲೆಯಲ್ಲಿ ಕ್ರುರಿ ಕರೋನಾ ಮಕ್ಕಳಿಗೆ ಹೆಚ್ಚು ಹಾನಿ ಉಂಟಾಗುತ್ತದೆ, ಮನಗೊಂಡು ಮುಂದಾಲೋಚನೆ ಮಾಡಿ  ರಾಜ್ಯದಲ್ಲಿ ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಾಲ ಜೊಲ್ಲೆ ಅವರು ರಾಜ್ಯದ ಹಲವಾರು ಎಲ್ಲ ಜಿಲ್ಲೆಗಳಲ್ಲಿ ಸಭೆ ಮಾಡಿ ಕಾಳಜಿವಹಿಸುತ್ತಿದ್ದಾರೆ,

 

ಈ ಕಾರಣ ಬೆಳಗಾವಿಯಲ್ಲೂ ಅವರು ಇಂದು ಕರೋನಾ ದಿಂದ ಮಕ್ಕಳನ್ನು ರಕ್ಷಣೆ ಮಾಡುವ ಕುರಿತು ಗಂಭೀರವಾದ ಸಭೆಯಲ್ಲಿ ವಿಷಯಗಳನ್ನು ಚರ್ಚೆ ಮಾಡುತ್ತಿದ್ದರೆ, ಇತ್ತ ನಾಯಿ ಬಾಲ ಡೊಂಕೆ ಅನ್ನು ತರಹ ಈ ಅಧಿಕಾರಿಗಳ ತಮ್ಮ ಕಾಯಕ ಮುಂದುವರಿಸಿದ್ದು ಮಾತ್ರ ದುರದೃಷ್ಟಕರ.

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');