ಮೂಡಲಗಿಯಲ್ಲಿ ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ : ಬೈಕ್ ಸವಾರನ ದೇಹದ ರುಂಡವೇ ಬೇರ್ಪಟ್ಟು ಸ್ಥಳದಲ್ಲೇ ಸಾವು

0

ಮೂಡಲಗಿ : ದ್ವಿಚಕ್ರ ವಾಹನಕ್ಕೆ ಲಾರಿ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ  ದಾರುಣ ಘಟನೆ ಕಲ್ಲೋಳ್ಳಿ ಬಳಿ ನಡೆದಿದೆ.

ಶಕೀಲ ಜಮಾದಾರ್ ( 50) ಮೃತಪಟ್ಟ ದುರ್ದೈವಿ

ಬೈಕ್ ಸವಾರ ಮೂಡಲಗಿಯಿಂದ ಗೋಕಾಕಕ್ಕೆ ದ್ವಿಚಕ್ರ ವಾಹನದ ಮೇಲೆ ಹೋಗುವ ಸಂದರ್ಭದಲ್ಲಿ ಲಾರಿ ಹಿಂಬದಿಯಿಂದ ಗುದ್ದಿ, ಆತನ ಮೇಲೆ ಹರಿದಿದೆ. ಇದರಿಂದ ಬೈಕ್ ಸವಾರನ ದೇಹದ ರುಂಡವೇ ಬೇರ್ಪಟ್ಟು ಸ್ಥಳದಲ್ಲಿ ಕೊನೆಯುಸಿರೆಳೆದಿದ್ದಾನೆ. ಮೃತ ವ್ಯಕ್ತಿ  ಚಹಾಪುಡಿ ವ್ಯಾಪಾರಿ ಎಂದು ತಿಳಿದು ಬಂದಿದೆ.

ಸ್ಥಳದಲ್ಲಿದ್ದವರು ಲಾರಿಯನ್ನು ಅಟ್ಟಿಸಿಕೊಂಡು ಹೋಗಿದ್ದು, ಚಾಲಕ ಪರಾರಿಯಾಗಿದ್ದಾನೆ.ಸ್ಥಳಕ್ಕೆ ಘಟಪ್ರಭಾ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');