‘ಮೇಘಾ ಕೋವಿಡ್ ಲಸಿಕಾ ಅಭಿಯಾನ’ಕ್ಕೆ ಚಾಲನೆ ಸಾರ್ವಜನಿಕರ ನೆರವಿಗೆ ನಿಂತ ಸುರೇಶ ಯಾದವ ಪೌಂಡೇಶನ್

0

ಬೆಳಗಾವಿ: ಕೊರೋನಾ ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಿರಂತರವಾಗಿ ಯುದ್ದೋಪಾದಿಯಲ್ಲಿ ಕೆಲಸ ಮಾಡುತ್ತಿವೆ. ಅಂತರಾಷ್ಟ್ರೀಯಯೋಗ ದಿನವಾದ ಇಂದಿನಿಂದ ದೇಶದ ಹದಿನೆಂಟು ವರ್ಷ ಮೇಲ್ಪಟ್ಟವರಿಗೆಲ್ಲ ಉಚಿತ ಕಾವ್ಯಾಕ್ಸಿನೇಶನ್ ನೀಡುವ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ಸಾರ್ವಜನಿಕರು ವ್ಯಾಕ್ಸಿನ್ ಪಡೆದುಕೊಳ್ಳುವ ಮೂಲಕ ನಮ್ಮ ದೇಶವನ್ನು ಕೊರೋನಾ ಮುಕ್ತ ಮಾಡಬೇಕಾಗಿದೆ. ಹೀಗಾಗಿ ಬೆಳಗಾವಿ ನಗರದಲ್ಲಿ ಮೂವತ್ತು ಕೇಂದ್ರಗಳಲ್ಲಿ ಮೇಘಾ ಕೋವಿಡ್ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿದ್ದು ರಾಮತೀರ್ಥ ನಗರದ ಅಭಿಯಾನದ ಜವಾಬ್ದಾರಿಯನ್ನು ಸಮಾಜ ಸೇವಕ ಸುರೇಶ ಯಾದವ ಹಾಗೂ ಅವರ ಗೆಳೆಯರ ಬಳಗ ವಹಿಸಿಕೊಂಡು ವ್ಯವಸ್ಥಿತವಾಗಿ ಏರ್ಪಡಿಸಿ ಸಾರ್ವಜನಿಕರ ನೆರವಿಗೆ ನಿಂತಿರುವುದು ಅನುಕರಣೀಯ” ಎಂದು ಹೇಳಿದರು.
ಬೆಳಗಾವಿ ಆಟೋನಗರದ ಪ್ಯಾರಡೈಸ್ ಹಾಲ್ ನಲ್ಲಿಆಯೋಜಿಸಲಾದ ‘ಮೇಘಾ ಕೋವಿಡ್ ಲಸಿಕಾ ಅಭಿಯಾನ’ಕ್ಕೆ ಚಾಲನೆ ನೀಡಿಅವರು ಮಾತನಾಡಿದರು.
ಅಭಿಯಾನದಲ್ಲಿಕಣಬರಗಿ ನಗರಕುಟುಂಬ ಕಲ್ಯಾಣಕೇಂದ್ರದಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರಾದನಾಗರತ್ನ ಮಾಕಿ, ಪ್ರಿಯಾಂಕಾಉಂಡಿ, ವಿನೋದಾಕುಂಬಾರ ವ್ಯಾಕ್ಸಿನೇಶನ್‍ಕಾರ್ಯ ನಿರ್ವಹಿಸಿದರು.
ಅಭಿಯಾನದಲ್ಲಿಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಐ.ಪಿ. ಗಡಾದ, ತಾಲೂಕಾಆರೋಗ್ಯಅಧಿಕಾರಿ ಶಿವಾನಂದ ಮಾಸ್ತಿಹೊಳಿ, ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿ ಸಂಜಯ ಡುಮ್ಮಗೋಳ, ವಿಶ್ವಆರೋಗ್ಯ ಸಂಸ್ಥೆಯರಾಜ್ಯಎಸ್.ಎಂ.ಓ. ಸಿದ್ದಲಿಂಗಯ್ಯ, ವಂಟಮುರಿ ನಗರಆರೋಗ್ಯಕೇಂದ್ರದ ವೈದ್ಯಾಧಿಕಾರಿಡಾ. ಜಯಾನಂದಧನವಂತ, ಕಣಬರಗಿಯ ನಗರಕುಟುಂಬ ಕಲ್ಯಾಣಕೇಂದ್ರದವೈದ್ಯಾಧಿಕಾರಿಡಾ.ಪೂಜಾರೆಡ್ಡಿ, ಕರ್ನಾಟಕರಾಜ್ಯಅಲ್ಪಸಂಖ್ಯಾತರಅಭಿವೃದ್ಧಿ ನಿಗಮದಅಧ್ಯಕ್ಷ ಮುಖ್ತಾರಹುಸೇನ್ ಪಠಾಣ, ಅಶೋಕ ಧನವಡೆ, ವಿ.ಬಿ. ಪಾಟೀಲ, ಮಲ್ಹಾರ ದೀಕ್ಷಿತ್, ನಾನಾಗೌಡ ಬಿರಾದಾರ, ಅಶೋಕ ಧರಿಗೌಡರ, ಶಂಕರ ಬಾಗೇವಾಡಿ ಮುಂತಾದವರು ಪಾಲ್ಗೊಂಡಿದ್ದರು.

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');