ಆರ್ಥಿಕ ಸಂಕಷ್ಟ: 5 ಸಾವಿರ ರೂ.ಗೆ ತನ್ನ ಹೆತ್ತ ಕರಳನ್ನು ಮಾರಾಟ ತಾಯಿ ಕೆಲಸವಿಲ್ಲದೇ ಜೀವನ ನಿರ್ವಹಣೆ ಅಸಾಧ್ಯ ಎಂದ ಮಹಿಳೆ

0

ಒಡಿಶಾ:  ಕೊರೋನಾದಿಂದ ಕೆಲಸ ಕಳೆದುಕೊಂಡು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ತಾಯಿಯೊಬ್ಬಳು  ತನ್ನ 10 ತಿಂಗಳ ಹೆತ್ತ ಕರಳನ್ನು 5 ಸಾವಿರ ರೂಪಾಯಿಗೆ ಮಾರಾಟ ಮಾಡಿರುವ ಕರುಣಾಜನಕ ಘಟನೆ ಬುಧವಾರ ನಡೆದಿದೆ.

ಒಡಿಶಾದ ಕೇಂದ್ರ ಪಾರಾ ಜಿಲ್ಲೆಯಲ್ಲಿ ನೇದಿದೆ, ರಾಜ್ಕನಿಕಾ ಪೊಲೀಸ್ ವ್ಯಾಪ್ತಿಯ ಮಾಹುರಿಯ ನಿವಾಸಿ ಅರುಂಧತಿ ಎಂಬ 34 ವರ್ಷದ ತಾಯಿ ತನ್ನ ಹೆಣ್ಣು ಮಗುವನ್ನು ಹತ್ತಿರದ ಹಳ್ಳಿಯ ಮಕ್ಕಳಿಲ್ಲದ ದಂಪತಿಗೆ ಮಾರಿದ್ದಾಳೆ ಎಂದು ತಿಳಿದು ಬಂದಿದೆ.

ಕೋವಿಡ್ ಸಾಂಕ್ರಾಮಿಕದಿಂದಾಗಿ ಅರುಂಧತಿ ಕೆಲಸ ಕಳೆದುಕೊಂಡಿದ್ದರು. ಕೆಲಸವಿಲ್ಲದೇ ಜೀವನ ನಿರ್ವಹಣೆ ಸಾಧ್ಯವಾಗದೇ ಆರ್ಥಿಕ ಸಂಕಷ್ಟದಿಂದಾಗಿ ತಾವು ಈ ಕಠಿಣ ನಿರ್ಧಾರ ತಳೆದಿದ್ದಾಗಿ ಅರುಂಧತಿ ಹೇಳಿಕೊಂಡಿದ್ದಾರೆ.

ವಿಷಯ  ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಜಿಲ್ಲಾ ಮಕ್ಕಳ ರಕ್ಷಣಾ ಕಚೇರಿ ಮತ್ತು ಪೊಲೀಸರು ಪರಿಶೀಲನೆ ನಡೆಸಿ ಮಗುವನ್ನು  ವಶದಲ್ಲಿರಿಸಿಕೊಂಡಿದ್ದಾರೆ.

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');