ಲೆಕ್ಕ ಪರಿಶೋಧಕರ ನೇಮಕಾತಿ ಮಾಹಿತಿ ಸಲ್ಲಿಸಲು ಸೂಚನೆ

0

ಬೆಳಗಾವಿ, ಜೂ.24: ಕರ್ನಾಟಕ ಸಹಕಾರ ಸಂಘಗಳ ನಿಯಮಗಳು 1960 ನಿಯಮ 29-ಬಿ(8) ರನ್ವಯ ಯಾವುದೇ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕರು ಹಾಗೂ ಕರ್ನಾಟಕ ಸೌಹಾರ್ಧ ಸಹಕಾರಿ ನಿಯಮಗಳು 2004 ನಿಯಮ 8-ಬಿ(8) ರನ್ವಯ ಯಾವುದೇ ಸೌಹಾರ್ದ ಸಹಕಾರಿಯ ಮುಖ್ಯ ಕಾರ್ಯನಿರ್ವಾಹಕರು ವಾರ್ಷಿಕ ಮಹಾ ಸಭೆಯಲ್ಲಿ ಲೆಕ್ಕಪರಿಶೋಧಕರ ಅಥವಾ ಲೆಕ್ಕಪರಿಶೋಧನಾ ಫರ್ಮ್‍ನ್ನು ನೇಮಕ ಮಾಡಿಕೊಂಡ ಬಗ್ಗೆ ವಾರ್ಷಿಕ ಮಹಾಸಭೆಯ ದಿನಾಂಕದಿಂದ 7 ದಿನಗಳೊಳಗಾಗಿ ಲೆಕ್ಕಪರಿಶೋಧಕರಿಗೆ, ಲೆಕ್ಕಪರಿಶೋಧನಾ ಫರ್ಮಗಳಿಗೆ ಮತ್ತು ಸಹಕಾರಿ ಲೆಕ್ಕಪರಿಶೋಧನಾ ನಿರ್ದೇಶಕರಿಗೆ ತಿಳಿಸಬೇಕಾಗಿರುತ್ತದೆ.

ಆದರೆ ಜಿಲ್ಲೆಯ ಬಹುಪಾಲು ಸಹಕಾರ ಸಂಘಗಳು ಮತ್ತು ಸೌಹಾರ್ದ ಸಹಕಾರಿಗಳು ಲೆಕ್ಕಪರಿಶೋಧಕರ/ ಲೆಕ್ಕಪರಿಶೋಧನಾ ಫರ್ಮಿನ ನೇಮಕಾತಿ ಬಗ್ಗೆ ಈ ಕಚೇರಿಗೆ ಮಾಹಿತಿ ಸಲ್ಲಿಸಿರುವುದಿಲ್ಲ. ಆದ್ದರಿಂದ ಈವರೆಗೂ ಸದರಿ ಮಾಹಿತಿಯನ್ನು ಸಲ್ಲಿಸದ ಸಹಕಾರ ಸಂಘಗಳು ಈ ಪ್ರಕಟಣೆಯ ಪ್ರಕಟನೆಯಾದ 7 ದಿನಗಳೊಳಗಾಗಿ ವಾರ್ಷಿಕ ಮಹಾ ಸಭೆಯಲ್ಲಿ ಲೆಕ್ಕಪರಿಶೋಧಕರನ್ನು/ ಲೆಕ್ಕಪರಿಶೋಧನಾ ಫರ್ಮ್‍ನ್ನು ನೇಮಕಾತಿ ಮಾಡಿಕೊಂಡಿರುವ ಬಗ್ಗೆ ಮಾಹಿತಿಯನ್ನು ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಅಧ್ಯಕ್ಷರ ರುಜುವಿನೊಂದಿಗೆ ವಾರ್ಷಿಕ ಮಹಾಸಭೆಯ ನಡವಳಿಯೊಂದಿಗೆ ಜಂಟಿ ನಿರ್ದೇಶಕರ ಕಛೇರಿ ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆ, ಬೆಳಗಾವಿ ಜಿಲ್ಲೆ, ಬೆಳಗಾವಿ ಸುವರ್ಣ ಸೌಧ ಕೊಠಡಿ ಸಂಖ್ಯೆ 17, 17ಎ, ದಕ್ಷಿಣ ಧ್ವಾರ, ಬೆಳಗಾವಿ – 590020 ದೂರವಾಣಿ ಸಂಖ್ಯೆ; 0831-2432579 ಇ-mail: ddca-belgaum-ka@nic.in ಕಚೇರಿಗೆ ಸಲ್ಲಿಸಬೇಕು.

-ಇಲ್ಲವಾದಲ್ಲಿ ಲೆಕ್ಕಪರಿಶೋಧನೆಯ ವಿಳಂಬಕ್ಕೆ ಸಂಬಂಧಿಸಿದ ಸಂಘಗಳ/ಸಹಕಾರಿಗಳ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳೇ ಹೊಣೆಗಾರರೆಂದು ತಿಳಿಯುವುದು ಎಂದು ಬೆಳಗಾವಿ ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');