ಮದುವೆಯಾದ ಮೂರನೇಯ ದಿನಕ್ಕೆ ಪತಿಗೆ ಕೈಕೊಟ್ಟ ಪತ್ನಿ ಪ್ರಿಯಕರನೊಂದಿಗೆ ಹೋಗಿದ್ದು ಪೋನಿನ ಮೂಲಕ ತಿಳಿದು ಬಂದಿದೆ.

0

ಹೈದರಾಬಾದ್:  ಚಿನ್ನಾಭರಣದೊಂದಿಗೆ  ಪತ್ನಿ  ಪರಾರಿಯಾಗಿರುವ ಘಟನೆ ಹೈದರಾಬಾದ್​ನ ನಲ್ಲಕುಂಟದಲ್ಲಿ ನಡೆದಿದೆ. ಮದುವೆಯಾದ ಮೂರನೇಯ ದಿನಕ್ಕೆ ಪತಿಗೆ ಕೈಕೊಟ್ಟ ಪತ್ನಿ ಪ್ರಿಯಕರನೊಂದಿಗೆ ಹೋಗಿದ್ದು ಪೋನಿನ ಮೂಲಕ ತಿಳಿದು ಬಂದಿದೆ.

ಅದಿಕ್ಮೆಟ್​ ಬಾಲಾಜಿನಗರದ ಖಾಸಗಿ ಕಂಪನಿ ಉದ್ಯೋಗಿಯಾಗಿದ್ದ ಸಾಯಿಕುಮಾರ್​ ಮೇ 30ರಂದು ಸಿದ್ದಿಪೇಟೆಯ ತೌಗುಟಾ ಗ್ರಾಮದ ನಾಗ್ರಾಣಿ (20) ಎಂಬಾಕೆಯನ್ನು ಮದುವೆಯಾಗಿದ್ದಾನೆ. ಬೆಳಗ್ಗೆ ಎಂದಿನಂತೆ ಸಾಯಿಕುಮಾರ್​ ಕೆಲಸಕ್ಕೆಂದು ಮನೆಬಿಟ್ಟಿದ್ದಾನೆ. ಈ ವೇಳೆ ಮನೆಯಲ್ಲಿದ್ದ ನಾಗ್ರಾಣಿ, ಯಾರಿಗೂ ಹೇಳದೆ ಬಟ್ಟೆ, ಚಿನ್ನಾಭರಣದೊಂದಿಗೆ ನಾಪತ್ತೆಯಾಗಿದ್ದಾಳೆ.

ನಾಗ್ರಾಣಿ ಮನೆ ಬಿಟ್ಟು ಹೋಗುವುದನ್ನು ನೋಡಿದ ಸ್ಥಳೀಯರೊಬ್ಬರು ಸಾಯಿಕುಮಾರ್​ಗೆ ಫೋನ್​ ಮೂಲಕ ಮಾಹಿತಿ ನೀಡಿದ್ದಾರೆ. ತಕ್ಷಣ ಆತ ಮನೆಗೆ ಮರಳಿದ್ದಾನೆ. ಆದರೆ, ಪತ್ನಿ ಮನೆಯಲ್ಲಿರಲಿಲ್ಲ. ಬದಲಾಗಿ ಆಕೆಯ ಫೋನ್​ ಅಲ್ಲಿಯೇ ಬಿದ್ದಿತ್ತು.ಸ್ವಿಚ್​ ಆಫ್​ ಆಗಿದ್ದ ಫೋನ್​ ಅನ್ನು ಆನ್​ ಮಾಡಿದಾಗ ಆತನಿಗೆ ಶಾಕ್​ ಆಗಿದೆ.

ನಾಗ್ರಾಣಿಗೆ ಆಕೆ ಬಾಯ್​ಫ್ರೆಂಡ್​ ಮಾಡಿದ್ದ ಮಸೇಜ್​ಗಳು ಫೋನ್​ನಲ್ಲಿತ್ತು. ಇದರಿಂದ ಆತಂಕಕ್ಕೀಡಾದ ಸಾಯಿಕುಮಾರ್​ ತಕ್ಷಣ ಪೊಲೀಸ್​ ಠಾಣೆಗೆ ತೆರಳಿ ದೂರು ನೀಡಿದ್ದಾನೆ. ಮದುವೆಗೂ ಮುನ್ನ ಪರಿಚಯವಿದ್ದ ಯುವಕನೊಂದಿಗೆ ನಾಗ್ರಾಣಿ ಮನೆಬಿಟ್ಟು ಹೋಗಿದ್ದಾಳೆಂದು ದೂರಿನಲ್ಲಿ ಉಲ್ಲೇಖಿಸಿದ್ದಾನೆ. ಸದ್ಯ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');