ತೈಲ ಬೆಲೆ ಏರಿಕೆ ಖಂಡಿಸಿ ಜೆಡಿಎಸ್ ಪ್ರತಿಭಟನೆ

0

 

ಸವದತ್ತಿ : ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಏರಿಕೆ ಖಂಡಿಸಿ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ಮಾಡಿ ಗ್ರೇಡ್-2 ತಹಸೀಲ್ದಾರ ಎಮ್.ವಿ. ಗುಂಡಪ್ಪಗೋಳ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.

ಇದೆ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ ಮಾತನಾಡಿ, ಲಾಕ್ ಡೌನ್ ನಿಂದಾಗಿ ಬಡವರು ಸಂಕಷ್ಟವನ್ನು ಅನುಭವಿಸುತ್ತಿದ್ದು, ಕೇಂದ್ರ ಸರಕಾರ ತೈಲ ಬೆಲೆಯೊಂದಿಗೆ ರಸಗೊಬ್ಬರಗಳ ಬೆಲೆಯನ್ನು ಕೂಡಲೆ ಇಳಿಸಬೇಕು, ಸಂಕಷ್ಟದಲ್ಲಿರುವ ರೈತರಿಗೆ 10 ಸಾವಿರ ರೂಗಳ ಪರಿಹಾರವನ್ನು ನೀಡಬೇಕೆಂದು ಒತ್ತಾಯಿಸಿದರು.

ಎ.ಆರ್.ನದಾಫ, ಪ್ರಕಾಶ ಸೋನವಾಲಕರ, ರಿಯಾಜ ಪಟಾದ, ಭೀಮಸಿ ಕಂಬಾರ ಸಿದ್ದನಗೌಡ ಪಾಟೀಲ, ಜಾವೀದ ಬಾಂದಾರ, ಮುನ್ನಾ ಕೆಂಗಾನೂರ ಹಾಗೂ ಜೆಡಿಎಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');