ನೊಂದವರ ಕಣ್ಣೀರು ಒರೆಸುವುದೇ ನಿಜವಾದ ದೇವರ ಪೂಜೆ: ಡಿಸಿಎಂ ಲಕ್ಷ್ಮಣ ಸವದಿ

0
ಅಥಣಿ: ದಾಸೋಹ ಮತ್ತು ದಾನ ಧರ್ಮಗಳಿಗೆ
ಎತ್ತಿದ ಕೈ ನಮ್ಮ ದೇಶ. ಭಾರತೀಯ ಸಂಸ್ಕೃತಿಯಲ್ಲಿ ದಾನ ಧರ್ಮಕ್ಕೆ ಅದರದ್ದೆ ಆದ ಮಹತ್ವ ನೀಡಲಾಗಿದೆ. ದುಡಿಮೆಯ ಸ್ವಲ್ಪ ಭಾಗವನ್ನು ಸಮಾಜದ ಒಳಿತಿಗಾಗಿ ದಾನ ಮಾಡಲೇ ಬೇಕು ಮತ್ತೊಬ್ಬರ ಸಂಕಷ್ಟದಲ್ಲಿ ಭಾಗಿ ಆಗಿ ಜನರ ಸೇವೆ ಮಾಡಿದಾಗ ಸಿಗುವಷ್ಟು ಸಂತೋಷ ಮತ್ತು ನೆಮ್ಮದಿ ಬೇರೆ ಯಾವುದರಲ್ಲಿಯೂ ಸಿಗುವದಿಲ್ಲ ಎಂದು ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದರು. ಅಥಣಿ ತಾಲೂಕಿನ ಸಂಕೋನಟ್ಟಿ ಗ್ರಾಮದಲ್ಲಿ ಸತ್ಯ ಸಂಗಮ ಗ್ರಾಮ ವಿಕಾಸ ಪ್ರತಿಷ್ಠಾನ ವತಿಯಿಂದ ದವಸಧಾನ್ಯಗಳ ಕಿಟ್ ವಿತರಣಾ ಕಾರ್ಯಕ್ರಮದ ಸಮಾರೋಪ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿ ಸಮಯದಲ್ಲಿ ತಮ್ಮ ಸತ್ಯ ಸಂಗಮ ಗ್ರಾಮ ವಿಕಾಸ ಪ್ರತಿಷ್ಠಾನದ ವತಿಯಿಂದ ಹಸಿದವರಿಗೆ ಅನ್ನದಾನ ಮಾಡಲು ಧವಸ ಧಾನ್ಯಗಳನ್ನು ವಿತರಿಸಲು ತಮ್ಮ ಅಮೂಲ್ಯವಾದ ಸಮಯವನ್ನು ನೀಡಿದ ನಮ್ಮ ಅಭಿಮಾನಿಗಳನ್ನು ಅಭಿನಂದಿಸಿ ಮಾತನಾಡುತ್ತ ಇಂತಹ ಕಷ್ಟಕರ ಪರಿಸ್ಥಿತಿಯಲ್ಲಿ ನೀವು ಮಾಡಿರುವ ಸಹಾಯವನ್ನು ಎಂದೂ ಮರೆಯಲು ಸಾಧ್ಯವಿಲ್ಲ ಎಲ್ಲರಿಗೂ ಹೃತೂರ್ವಕ ಧನ್ಯವಾದಗಳನ್ನು ಹೇಳುತ್ತೇನೆ. ನಾನು ಒಬ್ಬ ಸಾಮಾನ್ಯ ಕುಟುಂಬದಿಂದ ಬಂದ ರೈತನ ಮಗ ಜನ ಸಾಮಾನ್ಯರ ಕಷ್ಟ ಏನು ಅನ್ನುವದು ನನಗೂ ಗೊತ್ತು.ಈ ಕ್ಷೇತ್ರದ ಜನ ನನಗೆ ಶಾಸಕ ಸಚಿವ ಅಷ್ಟೇ ಅಲ್ಲ ಉಪ ಮುಖ್ಯಮಂತ್ರಿ ಯಾಗುವವರೆಗೆ ಆಶಿರ್ವಾದ ಮಾಡಿದ್ದಾರೆ ಅದನ್ನು ಎಂದಿಗೂ ನಾನು ಮರೆಯುವದಿಲ್ಲ.ನನ್ನ ಕ್ಷೇತ್ರದ ನಾನು ಕ್ಷೇತ್ರದ ಜನತೆಗೆ ಚಿರ ಋಣಿಯಾಗಿದ್ದೇನೆ ನನ್ನ ಕ್ಷೇತ್ರದ ಜನರಿಗೆ ಯಾವದೇ ಸಂಕಷ್ಟ ಬಂದರೂ ಯಾವತ್ತೂ ನಿಮ್ಮ ಜೊತೆ ಇದ್ದು ನಿಮ್ಮ ಸೇವೆ ಹಾಗೂ ಸಹಾಯ ಸಹಕಾರಕ್ಕೆ ಸದಾ ಸಿದ್ಧನಿದ್ದೇನೆ ಅನ್ನಕೊಟ್ಟ ರೈತ ಜನ್ಮ ಕೊಟ್ಟ ತಂದೆ ತಾಯಿ ಮತ್ತು ಕೈ ಹಿಡಿದು ಅಧಿಕಾರ ಕೊಟ್ಟ ಕ್ಷೇತ್ರದ ಜನರಿಗೆ
ಎಷ್ಟು ಧನ್ಯವಾದ ಹೇಳಿದರು ಕಡಿಮೆ ಕಷ್ಟದಲ್ಲಿ ಇದ್ದವರ ಕಣ್ಣೀರು ಒರಿಸುವ ಕೆಲಸ ಮಾಡುವದೆ ನಿಜವಾದ ದೇವರ ಪೂಜೆ ನಮ್ಮ ಎಲ್ಲ ಕಾರ್ಯಕರ್ತರು ಹಿತೈಷಿಗಳು ಹಾಗೂ ಅಭಿಮಾನಿಗಳು
ಯಾವದೇ ಗೊಂದಲ, ಟೀಕೆಗಳು ಬಾರದಂತೆ ಸರ್ಕಾರದ ಕೋವಿಡ್ ನಿಯಮ ಪಾಲನೆ ಮಾಡುತ್ತ ಆಹಾರ ಧಾನ್ಯಗಳ ಕಿಟ್ ವಿತರಣೆ ಮಾಡಿದ್ದು ವಿಶೇಷವಾಗಿದೆ.
ಅದಕ್ಕಾಗಿ ಅವರಿಗೆ
ಅಭಿನಂದನೆಗಳು ಎಂದರು.
ಮುಂದುವರೆದು ಮಾತನಾಡಿ ಆಹಾರಧಾನ್ಯಗಳ ಕಿಟ್ ವಿತರಣೆಯಲ್ಲಿ ಜಾತಿ,ಧರ್ಮ ,ಮತ ಪಂಥ, ಪಕ್ಷ ,ಬಡವ ಶ್ರೀಮಂತ ಎಂಬ ಯಾವುದೇ ತಾರತಮ್ಯ ಮಾಡದೆ ತಾಲೂಕಿನ ಸುಮಾರು 1 ಲಕ್ಷ 15 ಸಾವಿರ ಕುಟುಂಬಳಿಗೆ ಆಹಾರ ಧಾನ್ಯಗಳ ಕಿಟ್ ಗಳನ್ನು ವಿತರಿಸುವುದಕ್ಕೆ 1 ಸಾವಿರ ಕಾರ್ಯಕರ್ತರು ಅವಿರತವಾಗಿ ಶ್ರಮಿಸಿದ್ದರಿಂದ ಅವರ ಶ್ರಮವನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.
ಈ ವೇಳೆ ಮಾತನಾಡಿದ ಬಿಜೆಪಿ ಮುಖಂಡ ಸಂತೋಷ ಸಾವಡಕರ ಸುಮಾರು 12 ಕೋಟಿ ರೂಪಾಯಿ ಖರ್ಚು ಮಾಡಿ 1 ಲಕ್ಷ 15 ಸಾವಿರ ಕುಟುಂಬಗಳಿಗೆ ಸಂಕಷ್ಟದಲ್ಲಿ ಆಹಾರ ಸಾಮಗ್ರಿಗಳ ಕಿಟ್ ಗಳನ್ನು ದಾನ ಮಾಡುವ ಮೂಲಕ ಡಿಸಿಎಂ ಸವದಿ ಅವರು ಮಾನವೀಯತೆ ಮೆರೆದಿದ್ದಾರೆ. ಉಪ-ಮುಖ್ಯಮಂತ್ರಿ ಲಕ್ಷ್ಮಣ ಸವದಿ ಮತ್ತು ಇದನ್ನು ವಿತರಣೆ ಮಾಡಲು ಭಾಗವಹಿಸಿದ್ದ ಸಾವಿರಾರು ಬಿಜೆಪಿ ಅಭಿಮಾನಿಗಳ ಬಳಗ ಕಳೆದ 26 ವಿತರಣೆಯಲ್ಲಿಯ ಸೇವಾ ಮನೋಭಾವನೆಯಿಂದ ಕೊವಿಡ್ ಸಮಯದಲ್ಲಿ ಜೀವದ ಹಂಗು ತೊರೆದು  ಕಾರ್ಯನಿರ್ವಸಿದ್ದು ಶ್ಲಾಘನೀಯ ಎಂದು ಅಭಿನಂದಿಸಿದರು.
ಈ ವೇಳೆ ಮಾತನಾಡಿ ಬಿಜೆಪಿ ಯುವ ಧುರೀಣ ಚಿದಾನಂದ ಸವದಿ
ಡಿಸಿಎಂ ಹಾಗು ಸಾರಿಗೆ ಸಚೀವರಾದ ಲಕ್ಷ್ಮಣ ಸವದಿ ಅವರು ಸುಮಾರು 50 ಲಕ್ಷ ರೂಪಾಯಿ ವೆಚ್ಚದಲ್ಲಿ ಆರೈಕೆ ಕೇಂದ್ರಕ್ಕೆ ವೈದ್ಯಕೀಯ ಉಪಕರಣಗಳನ್ನು ಕೊಡುವದರಲ್ಲಿಯೂ ಸಾಕಷ್ಟು ಶ್ರಮಿಸಿದ್ದಾರೆ. ಹಾಗೂ ಅವರು ತಮ್ಮ ವಿಧಾನ ಪರಿಷತ್ತ ಸದಸ್ಯರ ನಿಧಿಯಿಂದ ಎರಡು ಕಿಟ್ಟ ಡಯಾಲಿಸಿಸ್‌ಯಂತ್ರಗಳು. ಅದಲ್ಲದೆ ಮೂರು ಅಧುನಿಕ ಸೌಲಭ್ಯಗಳ ಹವಾ ನಿಯಂತ್ರಣ ಹೊಂದಿರುವ  ಆಂಬ್ಯುಲೆನ್ಸ್ ಗಳನ್ನು ಸರಕಾರಿ ಆಸ್ಪತ್ರೆ ನೀಡುವುದಲ್ಲದೆ, ಸರಕಾರಿ ಆಸ್ಪತ್ರೆ ಆವರಣದಲ್ಲಿ ಒಂದು ಆಕ್ಸಿಜನ್ ಉತ್ಪಾದನೆ ಘಟಕ ಪ್ರಾರಂಭ ಮಾಡಿದ್ದಾರೆ, ಅದರ ಮೂಲಕ ಅಥಣಿ ಸರಕಾರಿ ಆಸ್ಪತ್ರೆಗೆ ಹೈಟೆಕ್ ಸೌಲಭ್ಯಗಳನ್ನು ನೀಡಲು ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.
ಈ ವೇಳೆ ಕಾರ್ಯಕ್ರಮದಲ್ಲಿ ಎ.ಪಿ.ಎಮ್.ಸಿ.ಅಧ್ಯಕ್ಷ ಲಕ್ಷಣ ಮುಗಳಖೋಡ, ಮುಖಂಡರಾದ ಸಂತೋಷ ಸಾವಡಕರ, ಮಹಾಂತೇಶ ಠಕ್ಕಣ್ಣವರ, ಶಿವರುದ್ರಪ್ಪ ಗುಳಪ್ಪನ್ನವರ, ಶ್ರೀಶೈಲ ನಾಯಕ, ಧರೆಪ್ಪ ನಾಯಿಕ, ಅಮರ ದುರ್ಗಣ್ಣವರ, ರಾಜು ನಾಯಕ,  ಅಶೋಕ ಕೌಜಲಗಿ, ರಾಮನಗೌಡ ಪಾಟೀಲ, ಪ್ರದೀಪ ನಂದಗಾಂವ, ,ಅಲ್ತಾಫ್ ಗಡ್ಡೇಕರ,
ಸೇರಿದಂತೆ ಹಲವರು ಉಪಸ್ಥಿತರಿದ್ದರು.
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');