“ಮಾದಕ ದ್ರವ್ಯ ಸೇವನೆ ಮತ್ತು ಅಕ್ರಮ ಕಳ್ಳಸಾಗಣೆ ವಿರುಧ್ದ ಅಂತರರಾಷ್ರೀಯ ದಿನಾಚರಣೆ” 26ಜೂನ್ 2021 ಘೋಷ ವಾಕ್ಯ: “

0

“ಮಾದಕ ದ್ರವ್ಯ ಸೇವನೆ ಮತ್ತು ಅಕ್ರಮ ಕಳ್ಳಸಾಗಣೆ ವಿರುಧ್ದ ಅಂತರರಾಷ್ರೀಯ ದಿನಾಚರಣೆ” 26ಜೂನ್ 2021
ಘೋಷ ವಾಕ್ಯ: “ಮಾದಕ ವಸ್ತುಗಳ ಕುರಿತು ಸತ್ಯ ಸಂಗತಿ ಹಂಚಿಕೊಳ್ಳಿ – ಜೀವ ಉಳಸಿ”
ಪ್ರತಿ ವರ್ಷ ಜೂನ್ 26 ರಂದು ಮಾದಕ ದ್ರವ್ಯ ದುರ್ಬಳಕೆಯ ಅಪಾಯಗಳು ಮತ್ತು ದುಷ್ಪರಿಣಾಮಗಳನ್ನು ಕುರಿತು ಸಮಾಜದಲ್ಲಿ ಜಾಗೃತಿಯನ್ನು ಮೂಡಿಸುವುದರೊಂದಿಗೆ ಈ ದಿನವನ್ನು ಜಾಗತಿಕವಾಗಿ ಆಚರಿಸಲಾಗುತ್ತದೆ.ಈ ವರ್ಷದ ಘೋಷವಾಕ್ಯ “ಮಾದಕ ವಸ್ತುಗಳ ಕುರಿತು ಸತ್ಯ ಸಂಗತಿಗಳನ್ನು ಹಂಚಿಕೊಳ್ಳಿ –ಜೀವ ಉಳಿಸಿ”
ಮಿನಿಸ್ಟರಿ ಆಪ್ ಸೋಷಿಯಲ್ ಜಸ್ಟಿಸ್ ಆ್ಯಂಡ್ ಎಂಪವರಮೆಂಟ ಗರ್ವನ್‍ಮೆಂಟ್ ಆಪ್ ಇಂಡಿಯಾ ಇತ್ತಿಚ್ಚಿನ ಅದ್ಯಯನ ಪ್ರಕಾರ ನಮ್ಮ ಭಾರತ ದೇಶದಲ್ಲಿ ಅಂದಾಜು 16 ಕೋಟಿ ಜನ ಮದ್ಯಪಾನ (ಸಾರಾಯಿ) ಬಳಕೆ ಮಾಡುತ್ತಾರೆ. ಅದರಲ್ಲಿ 5.7 ಕೋಟಿಯಷ್ಟು ಜನರು ಅತಿ ಹೆಚ್ಚಿನ ಪ್ರಮಾಣದಲ್ಲಿ ಹಾನಿಕಾರಕ ಸೇವನೆ ಮಾಡುತ್ತಿದ್ದಾರೆ ಹಾಗೂ ಅದರಲ್ಲಿ 3 ಕೋಟಿ ಜನ ವ್ಯಸನಕ್ಕೆ ಅವಲಂಬಿತ(ಅಡಿಕ್ಷನ್) ರಾಗಿರುತ್ತಾರೆ. ಅದೇ ರೀತಿ ಇನ್ನುಳಿದವರು ಬೇರೆ ಬೇರೆ ಮಾದಕ ದ್ರವ್ಯಗಳನ್ನು ಸೇವಿಸುತ್ತಿದ್ದಾರೆ.

• ವ್ಯಸನ ಎಂದರೇನು ಮತ್ತು ಲಕ್ಷಣಗಳೇನು?
ತಾತ್ಕಾಲಿಕ ಆನಂದ ನೀಡುವ ಮಾದಕ –ದ್ರವ್ಯಗಳ (ಮದ್ಯ, ಸಿಗರೇಟು, ಡ್ರಗ್ಸ್ ಇತ್ಯಾದಿ) ಅವಲಂಬನೆಗೆ ಒಳಗಾಗುವುದನ್ನು ವ್ಯಸನ ಎನ್ನಬಹುದು ಹಾಗೂ ಇದು ದೈಹಿಕ , ಮಾನಸಿಕ ಮತ್ತು ಸಾಮಾಜಿಕ ಅಂಶಗಳ ಮೇಲೆ ಪರಿಣಾಮ ಬೀರುತ್ತವೆ.
• ವ್ಯಸನವನ್ನು ಸೂಚಿಸುವ ಸೂಚನೆಗಳು?
ವ್ಯಕ್ತಿಯು ಮಾದಕ ವಸ್ತುಗಳ ಬಗ್ಗೆ ಪದೇ ಪದೇ ಯೋಚಿಸುತ್ತಿದ್ದರೆ. ಅಂದರೆ (ನಾನು ಮತ್ತೆ ಯಾವಾಗ ಕುಡಿಯುತ್ತೇನೆ /ಧೊಮಪಾನ ಮಾಡಿತ್ತೆನೆ ಇದರ ಬದಲಿಗೆ ಏನನ್ನು ಸೇವಿಸಲಿ ಅದನ್ನು ಹೇಗೆ ಪಡೆಯಲ್ಲಿ ಇತ್ಯಾದಿ ಚಿಂತನೆಗಳು). ಅದರಲ್ಲಿ ವಿತ್‍ಡ್ರಾಲ್ ಲಕ್ಷಣಗಳು ಕೂಡ ಕಂಡು ಬರುತ್ತವೆ.ಅಂದರೆ ಒಂದಿಷ್ಟು ದಿನ ಮಾದಕ ವಸ್ತುಗಳನ್ನು ಸೇವಿಸದೇ ಇದ್ದಾಗ ಅವರಲ್ಲಿ ನಡುಕ, ಮನಸಿಗೆ ಬೇಜಾರು,ತಿವ್ರ ಬಯಕೆ,ನಿದ್ದೆ ಬಾರದೆ ಇರುವುದು, ಬೇವರು ಬರುವುದು,ಇತ್ಯಾದಿ ಲಕ್ಷಣಗಳು ಕಂಡು ಬರುವುದು ಒಂದು ವೇಳೆ ಅವರು ಮಾದಕ ವಸ್ತುಗಳನ್ನು ತೆಗೆದುಕೋಳದೆಯೇ ಇರಬೇಕೇಂದು ನರ್ಧರಿಸಿದ್ದು ಅದಕ್ಕೆ ಬದ್ದರಾಗದ್ದೆ ವಿಫಲರಾಗುತ್ತಾರೆ.ಇದರ ಸೇವನೆ ಮಾಡುವುದರಿಂದ ತನಗು ತನ್ನ ಕುಂಟುಬಕ್ಕೂ ತೋಂದರೆಗಳು ಆಗುವುದು ಗೋತ್ತಿದ್ದರು ಕೂಡ ನಿಯಂತ್ರಣ ಮಾಡದೇ ಅದು ಬೇಕೇ ಬೇಕು ಎಂದು ಹಂಬಲಿಸುತ್ತಾರೆ.
• ಮಾದಕ ದ್ರವ್ಯಗಳಿಂದ ಆರೋಗ್ಯದ ಮೇಲೆ ಆಗುವ ಪರಿಣಾಮಗಳು?
ಕಾಮಾಲೆ , ಯಕೃತ್ (ಲಿವರ್) ಸಮಸ್ಯೆ, ಮಿದುಳಿನ ಜೀವಕೋಶಗಳ ಕುಗ್ಗುವಿಕೆ, ಮೊರ್ಛೆ ಕಾಯಿಲೆ, ಅಧಿಕ ರಕ್ತದೊತ್ತಡ, ಅಕಾಲಿಕ ಮುಪ್ಪು, ಹೃದಯ ಸ್ನಾಯುಗಳ ದೌರ್ಬಲ್ಯ, ಲೈಂಗಿಕ ಸಮಸ್ಯೆಗಳು, ಖಿನ್ನತೆ ಇತ್ಯಾದಿ ಸಮಸ್ಯೆಗಳು ಆಗಬಹುದು.ಕೇವಲ ದೈಹಿಕ ಸಮಸ್ಯೆಗಳಲ್ಲದೇ ಆರ್ಥಿಕ, ಮಾನಸಿಕ, ಕೌಟುಂಬಿಕ, ಸಾಮಾಜಿಕ, ಸಮಸ್ಯೆಗಳಿಗೆ ತುತ್ತಾಗುತ್ತಾರೆ.

• ವ್ಯಸನದಿಂದ ಹೊರಬರುವ ವಿಧಾನಗಳು?
ವ್ಯಸನದಿಂದ ಹೊರಬರುವ ಮೋದಲ ಹೆಜ್ಜೆ ಎಂದರೆ ನಿಮಗೆ ತೋಂದರೆ ಇದೇ ಎಂದು ಒಪ್ಪಿಕೂಳ್ಳುವುದು ಮತ್ತು ಸಹಾಯ ಪಡೆಯುವುದು ವ್ಯಸನದಿಂದಾಗುವ ಸಮಸ್ಯೆಗಳನ್ನು ವೈದ್ಯರಲ್ಲಿ/ಆಪ್ತಸಮಾಲೋಚಕರಲ್ಲಿ ಚರ್ಚೆ ಮಾಡಿ ಅದಕ್ಕೆ ಸೂಕ್ತ ಸಲಹೆ ಪಡೆಯುವುದು,ಜೀವನ ಶೈಲಿಯನ್ನು ಬದಲಾಯಿಸಿ ಪರ್ಯಾಯ ಚಟುವಟಿಕೆಗಳಲ್ಲಿ ಸಂತೃಪ್ತಿಯನ್ನು ಪಡೆಯುವುದು ಹಾಗೂ ಹೊಸ ಚಟುªಟಿಕೆಗಳಲ್ಲಿ ಮನಸು ತೊಡಗಿಸುವುದು ಮತ್ತು ಕುಟುಂಬದವರ ಜೊತೆ ಹೆಚ್ಚು ಕಾಲ ಕಳೆಯುವುದರಿಂದ ಸಹಾಯವಾದುತ್ತದೆ.ವ್ಯಸನದಿಂದ ಮುಕ್ತರಾಗಲು ಕುಟುಂಬದವರ ಪಾತ್ರ ತುಂಬಾ ಮುಖ್ಯವಾಗಿರುತ್ತದೆ. ಚಿಕೆತ್ಸೆ ನಂತರವೂ ವ್ಯಸನ ಮರುಕಳುಹಿಸಿತೆಂದರೆ ಚಿಕೆತ್ಸೆ ವಿಫಲವಾಯಿತ್ತೆಂದಲ್ಲ ಬದಲಿಗೆ ಆ ವ್ಯಕ್ತಿಗೆ ಮಾದಕ ವಸ್ತುವಿನ ವ್ಯಸನದಿಂದ ಹೊರಬರಲು ಹೆಚ್ಚಿನ ಸಹಾಯ ಅಗತ್ಯ ಇದೇ ಎಂದರ್ಥ.

ಈ ಮೇಲ್ಕಡ ಸಮಸ್ಯೆ ಇದ್ದಲಿ ತಾವುಗಳು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದಡಿಯಲ್ಲಿ ನಡೆಯುವ ಪ್ರತಿ ತಿಂಗಳಿನ ಆಯ್ದ ಮಂಗಳವಾರಗಳಂದು ಮನೋಚೈತನ್ಯ ಕ್ಲಿನಿಕ್‍ಗೆ ಬೇಟಿನೀಡುವ ಮನೋವೈದ್ಯರು ಮತ್ತು ತಂಡದವರಿಂದ ಸಹಾಯ ಪಡೆಯಬಹುದು ಹಾಗೂ ಜಿಲ್ಲಾ ಆಸ್ಪತ್ರೆ ,ತಾಲೂಕಾ ಸಾರ್ವಜನಿಕ ಆಸ್ಪತ್ರೆ,ಸಮುದಾಯ ಆರೋಗ್ಯ ಕೇಂದ್ರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಚಿಕೆತ್ಸೆಯನ್ನು ಪಡೆಯಬಹುದು.
ಸಂದೇಶ : ಮಾದಕ ದ್ರವ್ಯ ನಿಮ್ಮನ್ನು ಸ್ವರ್ಗ ಎನ್ನುವ ಮಾರುವೇಶದಲ್ಲಿ ಇರುವ ನರಕಕ್ಕೆ ಕೊಂಡೊಯ್ಯೂತ್ತದೆ ಆದ್ದರಿಂದ ಅದನ್ನು ತಡೆಯಲು ಎಲ್ಲರು ಕೈ ಜೋಡಿಸೋಣ.

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');