ಜನರ ಸಮಸ್ಯೆಗೆ ಸ್ಪಂದಿಸಿದ ಡಿಸಿಎಮ್ ಸವದಿ

0
ಅಥಣಿ: ಸಂಕಷ್ಟದ ಸಮಯದಲ್ಲಿ ಜನರ ಕೈ ಹಿಡಿದು ನಿಮ್ಮೊಂದಿಗೆ ನಾನಿದ್ದೇನೆ ಎಂದು ಭರವಸೆ ತುಂಬುವ ಮತ್ತು ಮುಕ್ತ ಮನಸ್ಸಿನಿಂದ ಸಾಧ್ಯವಾದಷ್ಟು ಸಹಾಯ ಮಾಡುವ ಅಥಣಿ ಸಾಹುಕಾರ ಎಂದೇ ಜನರ ಮನಸ್ಸಿನಲ್ಲಿ ಮನೆ ಮಾಡಿರುವ
ಡಿಸಿಎಂ ಹಾಗೂ ಸಾರಿಗೆ ಸಚೀವರಾದ ಲಕ್ಷ್ಮಣ ಸವದಿ ಅವರು ತಮ್ಮ ಸ್ವಗೃಹದಲ್ಲಿ ಇಂದು ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿದರು. ಜನಸಂಪರ್ಕ ಸಭೆಯ ವೇಳೆ ಹಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಸೂಚಿಸಿದರು.
ಅಥಣಿ ಮತಕ್ಷೇತ್ರದ ಹಲವು ಇಲಾಖೆಗಳಲ್ಲಿ ಸಾರ್ವಜನಿಕರ ಬಾಕಿ ಉಳಿದ ಕೆಲಸಗಳನ್ನು ತುರ್ತಾಗಿ ಮಾಡಿಕೊಡುವಂತೆ ಕೆಲವು ಇಲಾಖೆಗಳ ಅಧಿಕಾರಿಗಳಿಗೆ ಪೋನ್ ಮೂಲಕ ಸೂಚನೆ ನೀಡಿದರಲ್ಲದೆ ಅಥಣಿ ಶಾಸಕ ಮಹೇಶ ಕುಮಠಳ್ಳಿ ಅವರೊಂದಿಗೆ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಕೆಲಹೊತ್ತು ಸಮಾಲೋಚನೆ ನಡೆಸಿದರು.ಈಗಾಗಲೇ ಕೊರೊನಾ ಮೂರನೆಯ ಅಲೆಯ ಸಾಧ್ಯತೆ ಹಿನ್ನೆಲೆಯಲ್ಲಿ ಪೂರ್ವ ಸಿದ್ಧತೆಗಳನ್ನು ಭರದಿಂದ ಮಾಡಿಕೊಳ್ಳಲಾಗುತಿದ್ದು ಐವತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ಆಕ್ಸಿಜನ್ ಕಾನ್ಸಂಟ್ರೇಟ್ ಮಷೀನ್ ಮತ್ತು ಅಥಣಿ ತಾಲೂಕು ಆಸ್ಪತ್ರೆಗೆ ಸಚೀವರ ನಿಧಿಯಲ್ಲಿ ಐಸಿಯು ಒಳಗೊಂಡಿರುವ ಒಂದು ಹೈಟೆಕ್ ಅಂಬ್ಯುಲೆನ್ಸ ಮತ್ತು ನದಿ ಇಂಗಳಗಾಂವ ಹಾಗೂ ಅಥಣಿ ತಾಲೂಕು ಆಸ್ಪತ್ರೆಗೆ ತಲಾ ಒಂದರಂತೆ ಆಕ್ಸಿಜನ್ ಸಿಲಿಂಡರ್ ಹೊಂದಿರುವ ಎರಡು ಅಂಬ್ಯುಲೆನ್ಸ ಕೊಡಲಾಗಿದ್ದು ಪ್ರತಿ ಘಂಟೆಗೆ 290 ಲೀಟರ್ ಸಾಮರ್ಥ್ಯದ ಆಕ್ಸಿಜನ್ ಘಟಕ ಸ್ಥಾಪನೆ ಮಾಡಿದ್ದು ಕ್ಷೇತ್ರದ ಜನರ ಜೀವ ರಕ್ಷಣೆಗೆ ಮೊದಲ ಆಧ್ಯತೆಯನ್ನು ಡಿಸಿಎಂ ಸವದಿ ಅವರು ಮಾಡಿದ್ದಾರೆ.
 ಮೂರನೆಯ ಅಲೆ ಮಕ್ಕಳ ಮೇಲೆ ಪ್ರಭಾವ ಬೀರಲಿದೆ ಎಂಬ ತಜ್ಞರ ವರದಿಯ ಮೆರೆಗೆ ಮುಂಬರುವ ದಿನಗಳಲ್ಲಿ ತೊಂದರೆ ಎದುರಾಗದಂತೆ ಸಾರಿಗೆ ಇಲಾಖೆಯಿಂದ  ಮಾರ್ಪಾಡು ಮಾಡಿದ ಹಾಸ್ಪಿಟಲ್‌ ಆನ್ ವ್ಹಿಲ್ಸ ಗೂ ಕೂಡ ಚಾಲನೆ ನೀಡಿರುವ ಅವರು ಹಸಿದ ಹೊಟ್ಟೆಯಲ್ಲಿ ಯಾರೂ ಕೊರಗದಿರಲಿ ಅನ್ನುವ ದೃಷ್ಟಿಯಿಂದ ತಾಲ್ಲೂಕಿನ ಒಂದು ಲಕ್ಷ ನಲವತ್ತು ಸಾವಿರ ಕುಟುಂಬಗಳಿಗೆ ಧವಸಧಾನ್ಯಗಳನ್ನು ಒಳಗೊಂಡ ಆಹಾರ ಸಾಮಗ್ರಿಗಳ ಕಿಟ್ ಅನ್ನು ಸತ್ಯ ಸಂಗಮ ಗ್ರಾಮ ವಿಕಾಸ ಪ್ರತಿಷ್ಠಾನದ ಮೂಲಕ ಉಚಿತವಾಗಿ ಹಂಚಿದ್ದು ಕೊರೊನಾ ಸಮಯದಲ್ಲಿ ಆರ್ಥಿಕ ದುರ್ಬಲರಿಗೆ ತಮ್ಮದೆ ಆದ ರೀತಿಯಲ್ಲಿ ಸಹಾಯ ಮಾಡಿದ್ದು ಪ್ರವಾಹ ಎದುರಾದ ಸಮಯದಲ್ಲಿಯೂ ತಾಲೂಕಿನ ಜನರ ಸಂಕಷ್ಟಕ್ಕೆ ಮಿಡಿದ ಹೃದಯ ಶ್ರೀಮಂತರಾಗಿದ್ದಾರೆ ಎಂದು ಅಥಣಿ ಶಾಸಕ ಮಹೇಶ ಕುಮಠಳ್ಳಿ ಹೇಳಿದರು.
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');