ಅಂಕಲಗಿ ಗ್ರಾಮ ಪಂಚಾಯತ ನೂತನ ಕಟ್ಟಡ ಉದ್ಘಾಟಿಸಿದ ಕೆಎಂಎಫ್ ನಿರ್ದೇಶಕ ಅಮರನಾಥ ಜಾರಕಿಹೊಳಿ

0

ಗೋಕಾಕ: ತಾಲೂಕಿನ ಅಂಕಲಗಿ ಗ್ರಾಮ ಪಂಚಾಯತ ನೂತನ ಕಟ್ಟಡವನ್ನು ಕೆಎಂಎಫ್ ನಿರ್ದೇಶಕ ಹಾಗೂ ಯುವ ನಾಯಕರಾದ ಅಮರನಾಥ ರಮೇಶ ಜಾರಕಿಹೊಳಿ ಅವರು ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು,”ನೂತನ ಕಟ್ಟಡವನ್ನು ಸಿಬ್ಬಂದಿ ಸದುಪಯೋಗ ಪಡಿಸಿಕೊಳ್ಳಬೇಕು. ಗ್ರಾಮಸ್ಥರಿಗೆ ಸರ್ಕಾರದ ಸೌಲಭ್ಯಗಳನ್ನು ಸಮರ್ಪಕವಾಗಿ ತಲುಪಿಸಬೇಕು” ಎಂದು ತಿಳಿಸಿದರು.

ಅಂಕಲಗಿ ಮಠದ ಗುರುಸಿದ್ದಣ್ಣ ಸ್ವಾಮೀಜಿ, ಆಪ್ತ ಸಹಾಯಕರಾದ ಭೀಮಗೌಡ ಪೊಲೀಸಗೌಡರ, ಶಿವಾನಂದ ಡೋಣಿ, ರಾಜು ತಳವಾರ ಸೇರಿ ಜಿ.ಪಂ ಸದಸ್ಯರು, ತಾ.ಪಂ. ಸದಸ್ಯರು, ಅಂಕಲಗಿ ಗ್ರಾಮ ಪಂಚಾಯತ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಮುಖಂಡರು ಹಾಜರಿದ್ದರು.

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');