ಮೂರನೆ ಅಲೆಯ ಹಿನ್ನೆಲೆಯಲ್ಲಿ ಗಡಿಭಾಗದ ಚೆಕ್ ಪೋಸ್ಟನಲ್ಲಿ ಹೈ ಅಲರ್ಟ್

0
ಅಥಣಿ:ಮಹಾರಾಷ್ಟ್ರ ದಲ್ಲಿ ಕೊರೊನಾ ಮೂರನೇ ಅಲೆ ಕಾಣಿಸೊಕೊಂಡಿದ್ದು  ಮಕ್ಕಳಲ್ಲಿ ಡೆಲ್ಟಾ ಪ್ಲಸ್ ವೈರಸನ ಹಾವಳಿ ಹೆಚ್ಚಾಗಿರುವದರಿಂದ ಕರ್ನಾಟಕದ ಸಿಎಂ ಬಿಎಸ್ವೈ ಗಡಿಭಾಗದ ಚೆಕಪೊಸ್ಟಗಳಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಶಿಫಾರಸು ಮಾಡಿದ್ದು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬಾಳಿಗೇರಿ ಮತ್ತು ಅನಂತಪೂರ,ಕೊಟ್ಟಲಗಿ ಚೆಕಪೊಸ್ಟಗಳಿಗೆ ಅಥಣಿ ಟಾಸ್ಕ ಫೊರ್ಸ ಕಮೀಟಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಸರ್ಕಾರದ ನಿಯಮಾವಳಿಗಳನ್ನು ಸಮರ್ಪಕವಾಗಿ ಜಾರಿಗೊಳಿಸುವಂತೆ ಅಥಣಿ ತಹಶಿಲ್ದಾರ ದುಂಡಪ್ಪಾ ಕೋಮಾರ ಚೆಕಪೋಸ್ಟ ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ
ಈ ವೇಳೆ ಮಾತನಾಡಿದ ಅಥಣಿ ತಹಶಿಲ್ದಾರ ದುಂಡಪ್ಪಾ ಕೋಮಾರ ಈಗಾಗಲೇ ಎರಡನೇ ಅಲೆ ಅಥಣಿ ತಾಲೂಕಿನಲ್ಲಿ ಕೋವಿಡ್ ಹೆಚ್ಚಾಗಿ ಹರಡದಂತೆ ಟಾಸ್ಕ್ ಫೋರ್ಸ್‌ ಕಮೀಟಿ ವತಿಯಿಂದ ಹಲವಾರು ನಿಯಮಾವಳಿಗಳನ್ನು ಜಾರಿಗೊಳಿಸುವ ಮೂಲಕ ಕೊರೊನಾ ಮುಂಜಾಗ್ರತಾ ವಹಿಸಲಾಗಿದ್ದು ಸಾವುನೋವುಗಳನ್ನು ತಡೆಹಿಡಿಯಲಾಗಿತ್ತು ಸದ್ಯದ ಪರಿಸ್ಥಿತಿಯಲ್ಲಿ ಮಹಾರಾಷ್ಟ್ರದಲ್ಲಿ ಡೆಲ್ಟಾ ಪ್ಲಸ ವೈರಸ್ ಹೆಚ್ಚಾಗಿದ್ದು ಅದರಿಂದ ಹೆಚ್ಚಿನ ನಿಗಾ ವಹಿಸಿಲಾಗುವದು ಎಂದು ಹೇಳಿದರು
ಇದೆ ವೇಳೆ ಮಾತನಾಡಿದ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರವಿ ಬಂಗಾರೆಪ್ಪನವರ ಮಾತನಾಡಿ,ಅಥಣಿ ತಾಲೂಕಿನ ಗಡಿಭಾಗದ ಎಲ್ಲ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪಿಡಿಒ ಮತ್ತು ಕಾರ್ಯದರ್ಶಿಗಳ ನೇತೃತ್ವದಲ್ಲಿ ಶೀಸ್ತುಬದ್ದವಾದ ಕ್ರಮಗಳನ್ನು ಕೈಗೊಳ್ಳಲು ಮಾಹಿತಿ ನೀಡಲಾಗಿದ್ದು ಗ್ರಾಮಗಳಿಗೆ ಆಗಮಿಸುವ ಅಪರಿಚಿತ ವ್ಯಕ್ತಿಗಳ ಮಾಹಿತಿ ನೀಡಲು ಕೋರಲಾಗಿದ್ದು ಕಡ್ಡಾಯವಾಗಿ ಕೋವಿಡ್ ಟೆಸ್ಟಗೆ ಒಳಪಡಿಸಲು ತಿಳಿಸುವ
ಮೂಲಕ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ಹೇಳಿದರು
ಈ ವೇಳೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರವಿ ಬಂಗಾರೆಪ್ಪನವರ,ಅಥಣಿ ಉಪ ತಹಶಿಲ್ದಾರ ಮಹದೇವ ಬಿರಾದಾರ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');