ಮತ್ತೆ ತಾಪಂ ಕಾಂಗ್ರೆಸ್ ತೆಕ್ಕೆಗೆ ತರೋಣ ಎಂದ ಶಾಸಕಿ

0

ಬೆಳಗಾವಿ : ಬೆಳಗಾವಿ ತಾಲೂಕ ಪಂಚಾಯತಿಯ ಸದಸ್ಯರ ಅಧಿಕಾರ ಅವಧಿಯ ಕೊನೆಯ ದಿನವಾದ ಇಂದು ಎಲ್ಲ ಸದಸ್ಯರನ್ನು ಅಭಿನಂದಿಸಿದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್, ಮರಳಿ ತಾಲೂಕು ಪಂಚಾಯಿತಿಯನ್ನು ಕಾಂಗ್ರೆಸ್ ತೆಕ್ಕೆಗೆ ತರೋಣ ಎನ್ನುವ ಆಶಯ ವ್ಯಕ್ತಪಡಿಸಿದರು.

ಎಲ್ಲ ಸದಸ್ಯರನ್ನು ಭೇಟಿಮಾಡಿ ಅವರ ಆರೋಗ್ಯದ ಬಗ್ಗೆ ವಿಚಾರಿಸಿ, ಅವರ ಅಧಿಕಾರ ಅವಧಿಯ ಬಗ್ಗೆ ಅವಲೋಕಿಸಿ ಅಭಿನಂದನೆಗಳನ್ನು ಸಲ್ಲಿಸಿದ ಅವರು, ಸದಸ್ಯರ ಆತ್ಮೀಯ ಸನ್ಮಾನವನ್ನು ಸ್ವೀಕರಿಸಿದರು.

ಬರುವ ದಿನಗಳಲ್ಲಿ ನಿಮ್ಮೆಲ್ಲರ ಸಹಕಾರದೊಂದಿಗೆ ಕಾಂಗ್ರೆಸ್ ಪಕ್ಷವನ್ನು ತಾಲೂಕ ಪಂಚಾಯತ್ ತೆಕ್ಕೆಗೆ ತೆಗೆದುಕೊಳ್ಳೋಣ. ನಿಮ್ಮೆಲ್ಲರ ಸಂಘಟನೆ, ಆಶೀರ್ವಾದ, ಪ್ರೋತ್ಸಾಹ ಇದೆ ರೀತಿ ಇರಲಿ. ನಿಮ್ಮೆಲ್ಲರ ಅಧಿಕಾರದ ಅವಧಿಯಲ್ಲಿ ಸಾಕಷ್ಟು ದುಡಿದಿದ್ದೀರಿ, ನನ್ನ ಕ್ಷೇತ್ರವನ್ನು ಸಮರ್ಪಕವಾಗಿ ಪ್ರತಿನಿಧಿಸಿದ್ದೀರಿ, ಬೆಂಬಲ ಕೊಟ್ಟಿದ್ದೀರಿ, ನಿಮ್ಮ ಸಹಾಯ ಹಾಗೂ ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ ನೀಡಿದಂತ ಸೇವೆ ನಿಜಕ್ಕೂ ಅಪಾರ. ನಿಮ್ಮ ಸಹಕಾರ, ಪ್ರೀತಿ, ಪ್ರೋತ್ಸಾಹ ಸದಾಕಾಲವೂ ಹೀಗೆಯೇ ಇರಲಿ ಎಂದು ಕೋರಿದರು.

ಅಧ್ಯಕ್ಷ ಶಂಕರಗೌಡ ಪಾಟೀಲ ಹಾಗೂ ಸರ್ವ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');