ಅಥಣಿ ಮತ ಕ್ಷೇತ್ರದ ಅಭಿವೃದ್ಧಿಗೆ ರಮೇಶ ಜಾರಕಿಹೊಳಿ ಅವರ ಕೊಡುಗೆ ಅಪಾರ ಕೊಳಗೇರಿ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷ ಮಹೇಶ ಕುಮಠಳ್ಳಿ ಅಭಿಮತ

0
ಅಥಣಿ: ಮತ ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ಮಾಜಿ ಸಚಿವರಾದ ರಮೇಶ ಜಾರಕಿಹೊಳಿ ಅವರ ಕೊಡುಗೆ ಅಪಾರವಾಗಿದೆ. ನೀರಾವರಿ ಇಲಾಖೆಯಡಿ ಅವರು ಅನೇಕ ಅಭಿವೃದ್ದಿ ಕಾರ್ಯಗಳಿಗೆ ಅನುದಾನ ನೀಡಿಲು ಸಹಕಾರ ನೀಡಿದ್ದಾರೆ. ಅವರ ಬೆಳವಣಿಗೆ ಸಹಿಸದೇ  ರಾಜಕೀಯ ಶೆಡ್ಯಂತ್ರದಿAದ ಈ  ಎಲ್ಲ ಬೆಳವಣಿಗೆಗಳು ನಡೆದಿವೆ.  ಆದಷ್ಟು ಬೇಗನೆ ಅವರು ಆರೋಪ ಮುಕ್ತರಾಗಲಿದ್ದಾರೆಂದು ಕೊಳಗೇರಿ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷ ಮಹೇಶ ಕುಮಠಳ್ಳಿ ಹೇಳಿದರು.
ಗ್ರಾಮದ ನಂದೇಶ್ವರ-ಜನವಾಡ ರಸ್ತೆ ಕಾಮಗಾರಿಗೆ ಗುರುವಾರ ಶಂಕುಸ್ಥಾಪನೆ ನೆರವೆರಿಸಿ ಮಾತನಾಡುತ್ತಾ ಅಥಣಿ ಮತಕ್ಷೇತ್ರದಲ್ಲಿ ಶಿಕ್ಷಣ, ರಸ್ತೆ, ಕುಡಿಯುವ ನೀರು, ವಿದ್ಯತ್ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಿ ಸುಧಾರಣೆ ಕೈಗೊಳ್ಳಲಾಗುತ್ತಿದೆ.
 ಮುಂಬರುವ ದಿನಗಳಲ್ಲಿ ನದಿ ದಂಡೆಯ ಗ್ರಾಮಗಳಿಗೆ ಶಾಪವಾಗಿರುವ ಸವಳು ಜವಳು ಸಮಸ್ಯ ಹೋಗಲಾಡಿಸಲು ಯೋಜನೆ ಹಾಕಿ ಕೊಳ್ಳಲಾಗಿದೆ. ಮತ ಕ್ಷೇತ್ರದ ಪ್ರತಿಯೊಂದು ಗ್ರಾಮಗಳಿಗೂ ಆದ್ಯತೆ ನೀಡಿ ಅಭಿವೃಧಿ ಪಡಿಸಲಾಗುವುದೆಂದು ಹೇಳಿದ ಕರೊನಾ ನಿಯಂತ್ರಣಕ್ಕೆ ಬಂದಿದೆ ಎಂದು ಯಾರು ನಿರ್ಲಕ್ಷೆ ಮಾಡಬೇಡಿ, ಯಾವ ರೂಪದಲ್ಲಿ ಬರುತ್ತದೆ ಎಂಬುದು ಗೊತ್ತಾಗುವುದಿಲ್ಲ, ಕುಟುಂಬದ ಮುಖ್ಯಸ್ಥರು ಮನೆಯಲ್ಲಿರುವ ಹಿರಿಯರ ಮಕ್ಕಳ ಕಾಳಜಿ ವಹಿಸಬೇಕೆಂದು ಹೇಳಿದರು.
ಗ್ರಾಮದ ಹಿರಿಯ ಮುಖಂಡ ರಮೇಶಗೌಡ ಪಾಟೀಲ ಮಾತನಾಡಿ ಗ್ರಾಮದ ಎಸ್.ಸ್ಸಿ.ಎಸ್.ಟಿ ಕಾಲನಿಯಲ್ಲಿ ಚರಂಡಿ ನೀರು ನೀಲ್ಲತ್ತಿದ್ದು ಸಾರ್ವಜನಿಕರಿಗೆ ತೊಂದರೆಯಾಗದAತೆ ಚರಂಡಿ ನಿರ್ಮಾಣ ಮಾಡಲು ಅನುದಾನ ನೀಡಬೇಕೆಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯೇ ನೀಡಿದ ಶಾಸಕ ಮಹೇಶ ಕುಮಠಳ್ಳಿ ಆದಷ್ಟು ಬೇಗನೆ ಸುಧಾರಣೆಗೆ ಅನುದಾನ ನೀಡುವ ಬರವಸೆ ನೀಡಿದರು.
 ಈ ಸಂದರ್ಭದಲ್ಲಿ ಗ್ರಾಮದ ಹಿರಿಯ ಮುಖಂಡ ರಮೇಶಗೌಡ ಪಾಟೀಲ, ವಿರುಪಾಕ್ಷ ಹಿರೇಮಠ, ರಾಮಣ್ಣ ದೇವಣ್ಣವರ, ಬಾಳಾಸಾಹೇಬ ಪಾಟೀಲ, ಪಿ.ಕೆ.ಪಿ.ಎಸ್. ಅಧ್ಯಕ್ಷ ಬಸಪ್ಪ ಮುಧೋಳ, ಶಿವಾನಂದ ಪಾಟೀಲ, ಬಸಪ್ಪ ಚಂಡಕಿ, ಮಹೇಶಗೌಡ ಪಾಟೀಲ, ಶ್ರೀಧರ ಭೋಜನ್ನವರ, ಧರೇಪ್ಪ ಮಗದುಮ್, ಮಲ್ಲು ಅರಗೋಡಿ, ಗಂಗಪ್ಪ ಪರಟಿ, ಬಸಪ್ಪ ಬಿರಡಿ, ಷಣ್ಮುಖ ಲಾಲಸಿಂಗಿ, ಕೆಂಚಪ್ಪ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');