ಬೆಳಗಾವಿಯಲ್ಲಿ 143 ಮಂದಿಗೆ ಕೊರೊನಾ : 6 ಜನರು ಸಾವು

0

ಬೆಳಗಾವಿ : ಜಿಲ್ಲೆಯಲ್ಲಿ ಭಾನುವಾರ 143 ಜನರಿಗೆ ಕೊರೊನಾ ಸೋಂಕು ತಗುಲಿದ್ದು,  ಸೋಂಕಿತರ ಸಂಖ್ಯೆ 75524ಕ್ಕೆ ಏರಿಕೆಯಾಗಿದೆ. 6 ಜನರು ಮೃತಪಟ್ಟಿದ್ದಾರೆ‌.

ಇಂದು ಪತ್ತೆಯಾದ 143ರ ಪೈಕಿ ಅಥಣಿ – 02, ಬೈಲಹೊಂಗಲ-02, ಬೆಳಗಾವಿ- 83, ಚಿಕ್ಕೋಡಿ-37, ಗೋಕಾಕ-02, ಹುಕ್ಕೇರಿ -03, ಖಾನಾಪುರ-02, ರಾಮದುರ್ಗ-01, ರಾಯಬಾಗ -05, ಸವದತ್ತಿ- 04 ಜನರಿಗೆ ಕೋವಿಡ್ ವಕ್ಕರಿಸಿದೆ.

ಗೋಕಾಕ, ಬೆಳಗಾವಿ, ಬೈಲಹೊಂಗಲ ತಲಾ ಒಬ್ಬರು, ಚಿಕ್ಕೋಡಿ ಮೂವರು ಒಟ್ಟು ಆರು ಜನರು ಕೋವಿಡ್ ಗೆ ಬಲಿಯಾಗಿದ್ದಾರೆ.

ಇನ್ನೂ ರಾಜ್ಯದಲ್ಲಿ 3604 ಜನರಲ್ಲಿ ಕೊರೊನಾ ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 2834630 ಕ್ಕೆ ಏರಿಕೆಯಾಗಿದೆ.

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');