ನಂದಗಾಂವ: 2004-05 ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಂದ ನಿವೃತ್ತ ಶಿಕ್ಷಕರಿಗೆ ಅದ್ದೂರಿ ಬೀಳ್ಕೊಡುಗೆ ಮಕ್ಕಳ ಶ್ರೇಯಸ್ಸಿಗಾಗಿ ಶ್ರಮಿಸಿ: ನಿವೃತ್ತ ಶಿಕ್ಷಕ ವಾಸೇದಾರ

0

ಬೆಳಗಾವಿ: ಕಲಿಸಿದ ಗುರುವನ್ನು ಮನದಲ್ಲಿ ಪೂಜಿಸದಕ್ಕೆ ನನ್ನೆಲ್ಲ ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ವಿನ ಗುರಿ ಮುಟ್ಟಿದ್ದೀರಿ. ಮಕ್ಕಳ ಶ್ರೇಯಸ್ಸಿಗಾಗಿ ಮತ್ತೊಮ್ಮೆ ಶ್ರಮಿಸಬೇಕೆಂದು ನಿವೃತ್ತ ಶಿಕ್ಷಕ ಬಿಂ.ಎಮ್. ವಾಸೇದಾರ ಕಿವಿಮಾತು ಹೇಳಿದರು.

ಗೋಕಾಕ ತಾಲೂಕಿನ ಸಾವಳಗಿಯಲ್ಲಿ ಜೆಎಸ್‍ಎಸ್ ಪ್ರೌಢಶಾಲಾ ಆವರಣದಲ್ಲಿ 2004- 05 ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಂದ ರವಿವಾರ ಆಯೋಜಿಸಿದ್ದ ನಿವೃತ್ತ ಶಿಕ್ಷಕರ ಬೀಳ್ಕೊಡುಗೆ ಸಮಾರಂಭಕ್ಕೆ ಚಾಲನೆ ನೀಡಿ, ಸನ್ಮಾನ ಸ್ವೀಕರಿಸಿ ಅವರು ಮಾತನಾಡಿ, 2005 ನೇ ಸಾಲಿನ ವಿದ್ಯಾರ್ಥಿಗಳು ನಮ್ಮ ಪ್ರೀತಿಯ ಪಾತ್ರರು. ಈ ಮಕ್ಕಳ ಭವಿಷ್ಯ ಮತ್ತಷ್ಟು ಉಜ್ವಲಗೊಳ್ಳಲಿ ಆಶೀರ್ವದಿಸಿದರು.


ಈ ವಿದ್ಯಾರ್ಥಿಗಳಲ್ಲಿರುವ ವಿನಯತೆ ಸಾಧನೆಗೆ ಕಾರಣವಾಗಿದೆ. ಗ್ರಾಮೀಣ ಬಡಮಕ್ಕಳಿಗೆ ಅಕ್ಷರದ ಜ್ಞಾನ ಉಣಬಡಿಸುವ ಜೆಎಸ್‍ಎಸ್ ಶಾಲೆಯು ಹೆಮ್ಮರವಾಗಿ ಬೆಳೆಯಲಿ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬೆಳೆಯಲು ಅವಕಾಶ ನೀಡುವ ಮೂಲಕ ಅವರಿಗೆ ಜೀವನ ರೂಪಿಸಿಕೊಳ್ಳಲು ಮುನ್ನಡಿ ಬರೆಯಲಾಗಿದೆ. ಸಾಕ್ಷ ಚಿತ್ರಗಳು ನಮ್ಮಲ್ಲೇ ಇವೆ ಎಂದರು.

ಮಾನವೀಯ ಮೌಲ್ಯ ಅಳವಡಿಸಿಕೊಳ್ಳಿ:
ಪ್ರಾಚಾರ್ಯ ಎಸ್.ಆರ್. ಮೆಳವಂಕಿ ಅವರು ಮಾತನಾಡಿ, ಶಾಲಾ ವಿದ್ಯಾರ್ಥಿಗಳು ಜೀವನ ಕಟ್ಟಿಕೊಳ್ಳಲು ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ವಿದ್ಯಾರ್ಥಿಗಳು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳವುದರ ಜತೆ ಸಮಾಜದ ಹಾಗೂ ತಂದೆ- ತಾಯಿಯ ಋಣ ತೀರಿಸಬೇಕು ಎಂದು ಹೇಳಿದರು.

ಬಹಳ ವರ್ಷಗಳ ಕನಸು ಶೀಘ್ರವೇ ಈಡೇರಿಕೆಯಾಗುತ್ತಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಸಾವಳಗಿಯಲ್ಲಿ ನಡೆಸಲು ಅಧಿಕಾರಿಗಳು ಭರವಸೆ ನೀಡಿದ್ದು, ವಿದ್ಯಾರ್ಥಿಗಳ ಮನೋಭಾವನೆಗೆ ನಾನು ಚಿರಋಣಿ, ಕೈಲಾದಷ್ಟು ಸಹಾಯ ಮಾಡಿ, ಸಮಾಜಕ್ಕೆ ಒಳ್ಳೆಯ ಕೊಡುಗೆ ನೀಡಿ ಎಂದು ಸಲಹೆ ನೀಡಿದರು.

ಸಂಸ್ಥೆಯ ಅಧ್ಯಕ್ಷ ಡಿ.ಎಸ್. ಪರವಣ್ಣಿ, ಬಿ.ಎನ್. ಪರವಣ್ಣಿ, ಸಿ.ಎಲ್. ಶಿಗಿಹೋಳಿ, ಆರ್.ಎಂ. ಪತ್ತಾರ, ಬಿ.ಕೆ. ತಳವಾರ, ಶಿಕ್ಷಕರಾದ ಎಸ್.ಆರ್. ಸಂಕರಿ, ಎನ್.ಎ. ಅತ್ತರವುತ , ಪ್ರಭಾಕರ್ ಮುಗಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿಗಳಾದ ಶಿವಾನಂದ ಶ್ಯಾಬಂದ್ರಿ, ಅಶೋಕ ಮಗದುಮ್ಮ, ಪರಪ್ಪ ಮಗದುಮ್ಮ, ರವಿ ಪಾಟೀಲ್, ಶಂಕರ ಮಗದುಮ್ಮ, ಕೆಂಪಣ್ಣಾ ದಂಡಿನ, ವಿನೋದ ಶಂಕರಲಿಂಗ್ ಮಲ್ಲಪ್ಪಾ ಕರಿಗಾರ, ಮಲ್ಲಪ್ಪಾ ಶಿರಗಾಂವಿ, ಆನಂದ ಶಿರಗಾಂವಿ, ರವಿ ಚೌದರಿ, ಧರೇಪ್ಪಾ ಮಗದುಮ್ಮ ವಿದ್ಯಾರ್ಥಿನಿಯರಾದ ಜ್ಯೋತಿ ಮಗದುಮ್ಮ, ಕಾವೇರಿ ಪಾಟೀಲ, ಜಯಶ್ರೀ ಗೋಕಾಕ, ಸುನಿತಾ ಗೋಕಾಕ, ಶಿವಲೀಲಾ ಕರಿಗಾರ, ರೇಖಾ ಮಗದುಮ್ಮ, ಕಾಶವ್ವಾ ಹುಲ್ಲೋಳ್ಳಿ ಇತರರು ಇದ್ದರು. ಸುಧಾರಾಣಿ ಪತ್ತಾರ ಹಾಗೂ ಸವಿತಾ ಮಗದುಮ್ಮ ಪ್ರಾರ್ಥನಾ ಗೀತೆ ಹಾಡಿದರು. ಸತೀಶ ಸುಣಗಾರ ಸ್ವಾಗತಿಸಿದರು. ಶಿವಾನಂದ ಮಗದುಮ್ಮ ನಿರೂಪಿಸಿದರು. ಕೆಂಪಣ್ಣಾ ನಾಯಕ ವಂದಿಸಿದರು.

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');