ಒಂದೆ ಕುಟುಂಬದ ನಾಲ್ಕು ಜನ ಜಲಸಮಾಧಿ

0

ಅಥಣಿ: ತಾಲೂಕಿನ ಹಲ್ಯಾಳ ನದಿಯಲ್ಲಿ ಬಟ್ಟೆ ತೊಳೆಯಲು ಹೊಗಿ ಒಂದೇ ಕುಟುಂಬದ ನಾಲ್ಕು ಜನ ಜಲಸಮಾಧಿ ಪಾಲಾದ ಹೃದಯವಿದ್ರಾವಕ ಘಟನೆ ಅಥಣಿ ತಾಲೂಕಿನ ಹಲ್ಯಾಳ ಗ್ರಾಮದಲ್ಲಿ ನಡೆದಿದೆ.


ಲಾಕ್ ಡೌನ್ ಸಡಿಲಿಕೆ ಆಗುತ್ತಿದ್ದಂತೆಯೆ ಮನೆಯಲ್ಲಿನ ಹಾಸಿಗೆ ಮತ್ತು ಬಟ್ಟೆಗಳನ್ನು ತೊಳೆಯಲು ಹೋದ ಸಮಯದಲ್ಲಿ ಈ ದುರಂತ ಘಟನೆ ಸಂಭವಿಸಿದ್ದು ಹಲ್ಯಾಳ ಗ್ರಾಮದ ಬನಸೊಡೇ ಕುಟುಂಬದ ನಾಲ್ಕು ಜನ ಮೃತಪಟ್ಟಿದ್ದಾರೆ. ಕಳೆದ ಒಂದು ವಾರದ ಹಿಂದಷ್ಟೇ ಅಬ್ಬರಿಸಿ ಹರಿದು ಪ್ರವಾಹ ಭೀತಿಯನ್ನು ಸೃಷ್ಟಿಸಿದ್ದ ಕೃಷ್ಣಾ ನದಿಯಲ್ಲಿ ಮೂರು ನಾಲ್ಕು ದಿನಗಳಿಂದ ಹರಿವು ಕಡಿಮೆ ಆಗಿದೆ.ಆದರೆ ಬಟ್ಟೆ ತೊಳೆಯುತ್ತಿದ್ದ ಸಮಯದಲ್ಲಿ ಪರಸುರಾಮ ಬನಸೊಡೆ ಕಾಲು ಜಾರಿ ಬಿದ್ದು ಮುಳುಗುತ್ತಿರುವದನ್ನು ಕಂಡು ಈಜು ಬರುತ್ತಿದ್ದ ಸದಾಶಿವ ಮತ್ತು ಧರೆಪ್ಪ ಹಾಗೂ ಶಂಕರ ಮೂವರು ಪರಸಪ್ಪನ ರಕ್ಷಣೆಗೆ ಪ್ರಯತ್ನಿಸಿ ನದಿಗೆ ಹಾರಿದ್ದು ಉಳಿಸಲು ಹೋದವರು ಕೂಡ ನೀರು ಪಾಲಾಗಿದ್ದಾರೆ.

ಘಟನೆಯ ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಮತ್ತು ಅಥಣಿ ಪೋಲಿಸರು ಸ್ಥಳಕ್ಕೆ ದೌಡಾಯಿಸಿದ್ದು ಸ್ಥಳಿಯ ಮೀನುಗಾರರು, ಅಗ್ನಿಶಾಮಕ ಇಲಾಖೆಯ ಸಿಬ್ಬಂದಿ ನದಿಯಲ್ಲಿ ಮುಳುಗಿದ ನಾಲ್ಕು ಜನರ ಶೋಧ ಕಾರ್ಯವನ್ನು ಮುಂದುವರೆಸಿದ್ದಾರೆ.ಸ್ಥಳಕ್ಕೆ ಎನ್ ಡಿ ಆರ್ ಎಪ್ ತಂಡದ ಲೀಮಾ ಟಿನ ಸೊ ಅವರ ನೇತೃತ್ವದಲ್ಲಿ ಇಪ್ಪತ್ತು ಜನರ ತಂಡದಿಂದಲೂ ಶೋಧ ಕಾರ್ಯ ನಡೆದಿದೆ
ಈ ಬಗ್ಗೆ ಮಾಹಿತಿ ನೀಡಿರುವ ಅಥಣಿ ತಹಶಿಲ್ದಾರ ದುಂಡಪ್ಪ ಕೋಮಾರ ಮದ್ಯಾಹ್ನ ಮೂರು ಘಂಟೆಯ ವೇಳೆ ಘಟನೆ ನಡೆದಿದ್ದು ನದಿಯಲ್ಲಿ ಮುಳುಗುತ್ತಿದ್ದ ಓರ್ವನ ರಕ್ಷಣೆಗೆ ತೆರಳಿದ ಒಂದೆ ಕುಟುಂಬದ ಮೂವರು ಕೂಡ ನೀರಿನಲ್ಲಿ ಮುಳುಗಿದ್ದು ಅವರ ಶೋಧ ಕಾರ್ಯ ನಡೆಯುತ್ತಿದ್ದು ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದಿಂದ ಎನ್ ಡಿ ಆರ್ ಎಪ್ ತಂಡವನ್ನು ಕರೆಸಿದ್ದೇವೆ ಎಂದಿದ್ದಾರೆ.

ಇನ್ನೂ ಘಟನೆ ಬಗ್ಗೆ ತಿಳಿಯುತ್ತಿದ್ದಂತೆಯೆ ಸ್ಥಳಕ್ಕೆ ಆಗಮಿಸಿದ ಬನಸೋಡೆ ಕುಟುಂಬದ ಆಕ್ರಂದನ ಮುಗಿಲುಮುಟ್ಟಿದ್ದು ಆದಷ್ಟು ಬೇಗ ಶೋಧ ಕಾರ್ಯ ನಡೆಸುವಂತೆ ಪಂಚಾಯತಿ ಅಧ್ಯಕ್ಷ ಮುದುಕಣ್ಣ ಸೇಗುಣಸಿ ಮನವಿ ಮಾಡಿದ್ದಾರೆ.ದುರಂತ ಘಟನೆ ಇಂದಾಗಿ ಗ್ರಾಮದಲ್ಲಿ ಮಸಣ ಮೌನ ನೆಲೆಸಿದ್ದು ಬನಸೋಡೆ ಕುಟುಂಬದ ಸಂಭಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಈ ಸಂಧರ್ಭದಲ್ಲಿ ಅಥಣಿ ಡಿವೈಎಸ್ಪಿ ಎಸ್. ವಿ ಗಿರೀಶ್, ರಾಯಬಾಗ ಸಿಪಿಐ ಎಚ್.ಡಿ ಮುಲ್ಲಾ,

ಇಂದು ಮಧ್ಯಾಹ್ನ ಈ ದುರಂತ ಘಟನೆ ನಡೆದಿದೆ.ಸದ್ಯ ಸ್ಥಳದಲ್ಲಿ ಶೋಧ ಕಾರ್ಯ ನಡೆಯುತ್ತಿದೆ. ಸ್ಥಳೀಯ ಮೀನುಗಾರರು ಮತ್ತು ಅಗ್ನಿಶಾಮಕ ಸಿಬ್ಬಂದಿ ಸಹಕಾರದೊಂದಿಗೆ ಶೋಧ ಕಾರ್ಯ ನಡೆದಿದ್ದು ಸರ್ಕಾರದ ನಿಯಮಾವಳಿ ಪ್ರಕಾರ ಪರಿಹಾರ ನೀಡಲಾಗುವದು.

“ದುಂಡಪ್ಪ ಕೋಮಾರ
ಅಥಣಿ ತಹಶಿಲ್ದಾರ”

 

ಘಟನೆ ವಿವರವನ್ನು ಡಿಸಿಎಂ ಸವದಿ ಅವರ ಗಮನಕ್ಕೆ ತರುತ್ತಿದ್ದಂತೆ ಅಧಿಕಾರಿಗಳು ಸ್ಥಳಕ್ಕೆ ಬಂದಿದ್ದು ಶೊಧ ಕಾರ್ಯ ನಡೆಯುತ್ತಿದೆ. ನೀರಿನಲ್ಲಿ ಮುಳುಗಿದ ಪರಸುರಾಮ,ಶಂಕರ,ಸದಾಶಿವ ಮತ್ತು ಧರೆಪ್ಪ ಬನಸೋಡೆ ಅವರ ಕುಟುಂಬ ಆರ್ಥಿಕವಾಗಿ ಹಿಂದುಳಿದ ಕುಟುಂಬ ಆಗಿದ್ದು ಸರ್ಕಾರ ಕೂಡಲೇ ಪರಿಹಾರ ಘೋಷಿಸುವ ಮೂಲಕ ಸಾಂತ್ವನ ನೀಡಬೇಕು.

“ಮುದುಕಣ್ಣ ಶೇಗುಣಸಿ ಹಲ್ಯಾಳ ಪಂಚಾಯತಿ ಅಧ್ಯಕ್ಷ”

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');