ರಾಜ್ಯಾದ್ಯಂತ ಬೆರಳೆಣಿಕೆಯಷ್ಟು ಜನರಿಗೆ ಕೊರೋನಾ ಪತ್ತೆ: ಜಿಲ್ಲೆಯಲ್ಲಿ 68 ಜನರಿಗೆ ತಗುಲಿದ ಸೋಂಕು

0

ಬೆಳಗಾವಿ: ರಾಜ್ಯಾದ್ಯಂತ ಸೋಂಕಿನ ಅಲೆ ತೀರಾ ವಿರಳವಾಗಿದ್ದು, 30 ಜಿಲ್ಲೆಗಳಲ್ಲಿ ಬೆರಳೆಣಿಕೆಯಷ್ಟು ಜನರಿಗೆ ಕೊರೋನಾ ಸೋಂಕು ಪತ್ತೆಯಾಗಿದೆ.

ಆರೋಗ್ಯ ಇಲಾಖೆ ಬುಲೆಟಿನ್ ಪ್ರಕಾರ, ಜಿಲ್ಲೆಯಲ್ಲಿಂದು ಸೋಮವಾರ  68 ಜನರಿಗೆ ಸೋಂಕು ತಗುಲಿದೆ. ನಾಲ್ವರು ಸೋಂಕಿಗೆ ಬಲಿಯಾಗಿದ್ದಾರೆ.‌

ರಾಜ್ಯದಲ್ಲಿ 2,576 ಜನರಿಗೆ ಹೊಸದಾಗಿ ಕೊರೋನಾ ಸೋಂಕು ತಗುಲಿದ್ದು, 93 ಜನ ಮುೃತಪಟ್ಟಿದ್ಧಾರೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 28,37,206 ಆಗಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 34,836 ಆಗಿದೆ.

ಇಂದು 5,933 ಸೋಂಕಿತರು ಗುಣಮುಖರಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 27,04,755 ಆಗಿದೆ. ರಾಜ್ಯದಲ್ಲಿ ಇನ್ನೂ ಕೂಡ 97,592 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಂದು ಮೃತಪಟ್ಟವರು

ಬೆಂಗಳೂರು ನಗರ 18

ದಕ್ಷಿಣ ಕನ್ನಡ 14

ಬಳ್ಳಾರಿ 9

ಮೈಸೂರು 8

ಧಾರವಾಡ 5

ಹಾಸನ 5

ಬೆಳಗಾವಿ 4

ದಾವಣಗೆರೆ 4

ಹಾವೇರಿ 3

ಮಂಡ್ಯ 3

ಶಿವಮೊಗ್ಗ 3

ಬೆಂಗಳೂರು ಗ್ರಾಮಾಂತರ 2

ಚಿಕ್ಕಮಗಳೂರು 2

ಗದಗ 2

ತುಮಕೂರು 2

ಉಡುಪಿ 2

ಬೀದರ್ 1

ಚಿಕ್ಕಬಳ್ಳಾಪುರ 1

ಕೊಡಗು 1

ಕೋಲಾರ 1

ರಾಯಚೂರು 1

ರಾಮನಗರ 1

ಉತ್ತರ ಕನ್ನಡ 1

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');