ಅತಿಥಿ ಉಪನ್ಯಾಸಕರಿಗೆ ಆಹಾರ ಕಿಟ್ ವಿತರಣೆ

0
ಅಥಣಿ : ದೇಶದಲ್ಲಿ ಕರೋನಾ ವ್ಯಾಪಕವಾಗಿ ಹರಡಿ ಸರ್ಕಾರವು ಸಂಪೂರ್ಣವಾಗಿ ಲಾಕಡೌನ್ ಜಾರಿ ಮಾಡಿದ್ದರಿಂದ ಪ್ರತಿಯೊಬ್ಬರು ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆ. ಅದರಲ್ಲೂ ಖಾಸಗಿ ಹಾಗೂ ಅತಿಥಿ ಶಿಕ್ಷಕರು ತುಂಬಾ ತೊಂದರೆ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಅಥಣಿ ತಾಲ್ಲೂಕಿನ ಖಾಸಗಿ ಪದವಿಪೂರ್ವ ಕಾಲೇಜುಗಳ ಹಾಗೂ ಸರಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ಆಹಾರದ ದಿನಸಿ ಕಿಟ್‍ಗಳನ್ನು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ತಮ್ಮ  ಸತ್ಯ ಸಂಗಮ ಪ್ರತಿಷ್ಠಾನದ ವತಿಯಿಂದ ವಿತರಿಸಿದ್ದಾರೆ.
ನಂತರ ಮಾತನಾಡಿದ ಚಿದಾನಂದ ಸವದಿ ಅವರು, ದೇಶದಲ್ಲಿ ಕರೋನಾ ವ್ಯಾಪಕವಾಗಿ ಹರಡಿದ್ದು ಸರ್ಕಾರವು ಸಂಪೂರ್ಣವಾಗಿ ಲಾಕಡೌನ್ ಜಾರಿ ಮಾಡುವುದ್ದರಿಂದ ಪ್ರತಿಯೊಬ್ಬರು ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆ. ಅದರಲ್ಲೂ ಅತಿಥಿ ಶಿಕ್ಷಕರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅತಿಥಿ ಶಿಕ್ಷಕರ ತೊಂದರೆಯನ್ನು ಮನಗಂಡು
ಉಪಮುಖ್ಯಮಂತ್ರಿ
ಲಕ್ಷ್ಮಣ ಸವದಿಯವರು   ಅಳಿಲು ಸೇವೆ ಮಾಡಿದ್ದಾರೆ . ಇಂತಹ ವೇಳೆಯಲ್ಲಿ ಪ್ರತಿಯೊಬ್ಬರು ಸಹಕಾರಕ್ಕೆ ಮುಂದೆ ಬರಬೇಕು ಎಂದು ಸಲಹೆ ನೀಡಿದರು.ಕೊರೊನಾ ಮಹಾಮಾರಿ ಅಲೆಯಿಂದ ಹಲವಾರು  ತಿಂಗಳಿನಿಂದ ಸಂಬಳವಿಲ್ಲದೆ ಖಾಸಗಿ ಶಾಲಾ ಶಿಕ್ಷಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರ ಕುಟುಂಬ ನಿರ್ವಹಣೆ ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನರಿತ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ತಮ್ಮ  ಸತ್ಯ ಸಂಗಮ ಪ್ರತಿಷ್ಠಾನದ   ವತಿಯಿಂದ ತಾಲೂಕಿನ ೫೦೦ ಕ್ಕೂಅಧಿಕ  ಖಾಸಗಿ ಪದವಿಪೂರ್ವ   ಕಾಲೇಜುಗಳ ಹಾಗೂ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸ
ಕರಿಗೆ ಆಹಾರದ ದಿನಸಿ ಕಿಟ್‍ಗಳನ್ನು ನೀಡುವ ಮೂಲಕ ಮಾನವಿಯತೆ ಮೆರೆದಿದ್ದಾರೆ.
ಈ ಸಂದರ್ಭದಲ್ಲಿ ಪ್ರಾಂಶುಪಾಲ ಡಾ  ಶಾಂತಿನಾಥ ಬಳೋಜ,ಬಸವರಾಜ ತೇಲಿ,ಅಮಿತ ಹರೋಲಿ, ಆರ್ ಎಸ್ ಅಂಬಿ, ಪ್ರವೀಣ ತುಬಚಿ, ಪ್ರಾಚಾರ್ಯ ಹಣಮಂತ ಅಜೂರ, ಎಸ್ ಜೆ ಕಮತಗಿ, ಪಿ ಎನ್ ಮಾದರ, ಸೇರಿದಂತೆ ವಿವಿಧ ಶಾಲಾ-ಕಾಲೇಜುಗಳ ಖಾಸಗಿ ಹಾಗೂ  ಅತಿಥಿ  ಉಪನ್ಯಾಸಕರು ಇದ್ದರು.
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');