ಕೃಷ್ಣಾ ನದಿಯಲ್ಲಿ ಜಲಸಮಾಧಿ ಆಗಿದ್ದ ಓರ್ವನ ಶವ ಪತ್ತೆ ಮೂವರ ಪತ್ತೆಗೆ ಮುಂದುವರೆದ ಕಾರ್ಯಾಚರಣೆ

0
ಅಥಣಿ: ನಿನ್ನೆಯಿಂದಲೂ ಆ ಗ್ರಾಮದಲ್ಲಿ ನೆಲೆಸಿದ್ದು ನೀರವ ಮೌನ.ಆ ಕುಟುಂಬದಲ್ಲಿ ಮಡುಗಟ್ಟಿದ ದುಃಖ ಕಳೆದ ಎರಡು ದಿನಗಳಿಂದ ತಮ್ಮ ಮನೆಯ ಮಕ್ಕಳು ಮರಳಿ ಬರುವ ನಿರೀಕ್ಷೆಯಲ್ಲಿ ಕಾಯುತ್ತಿದ್ದರೂ ಕೂಡ ಇಂದು ಒಂದೊಂದಾಗಿ ಶವಗಳಾಗಿ ಪತ್ತೆಯಾಗುತ್ತಿರುವ ಸಹೋದರರ ಶವ ಕಂಡು ಜೋರಾಗಿ ಅಳುತ್ತಿರುವ ಹೆಣ್ಣುಮಕ್ಕಳು. ಇಂತಹದ್ದೊಂದು ದೃಶ್ಯ ಕಂಡು ಬಂದಿದ್ದು ಅಥಣಿ ತಾಲೂಕಿನ ಹಲ್ಯಾಳ ಗ್ರಾಮದಲ್ಲಿ.
ಒಂದೇ ಕುಟುಂಬದ ನಾಲ್ಕು ಜನ ಸಹೋದರರು ಕೃಷ್ಣಾ ನದಿಯಲ್ಲಿ ಬಟ್ಟೆ ತೊಳೆಯುವ ಸಮಯದಲ್ಲಿ ನಡೆದ ಅವಘಢದಿಂದಾಗಿ ಜಲಸಮಾಧಿಯಾಗಿದ್ದು
 ಅವರ ಶೋಧ ಕಾರ್ಯ ಭರದಿಂದ ಸಾಗಿದೆ.ಸ್ಥಳದಲ್ಲಿ ಚಿಕ್ಕೋಡಿ ಉಪವಿಭಾಗಾಧಿಕಾರಿ ಯುಕೇಶ ಕುಮಾರ,ಅಥಣಿ ಡಿವೈಎಸ್ಪಿ ಎಸ್. ವಿ ಗಿರೀಶ್ ಮತ್ತು ಸಿಪಿಐ ಶಂಕರಗೌಡ ಬಸನಗೌಡರ ಸೇರಿದಂತೆ ತಾಲೂಕು ಆಡಳಿತದ ಅಧಿಕಾರಿಗಳು ಮೊಕ್ಕಾಮ್ ಹೂಡಿದ್ದು
ಕೊಲ್ಹಾಪುರದ ಕೆ. ಡಿ. ಆರ್. ಎಪ್, ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದಿಂದ ಆಗಮಿಸಿದ ಎನ್. ಡಿ. ಆರ್. ಎಪ್. ಮತ್ತು ಅಥಣಿ ಅಗ್ನಿಶಾಮಕ ಇಲಾಖೆಯಿಂದ ನಿರಂತರವಾಗಿ ಕಾರ್ಯಾಚರಣೆ ನಡೆಯುತ್ತಿದೆ.
ಬನಸೋಡೆ ಕುಟುಂಬದ ಸಹೋದರರಾದ ಪರಸಪ್ಪ ಬನಸೋಡೆ,ಧರೆಪ್ಪ, ಶಂಕರ, ಮತ್ತು ಶಿವಾನಂದ ಬನಸೋಡೆ ಬಟ್ಟೆ ತೊಳೆಯಲು ಹೋದ ಸಮಯದಲ್ಲಿ ದುರಂತ ಸಂಭವಿಸಿದ್ದು ಕುಟುಂಬ ಸದಸ್ಯರು ಕಣ್ಣೀರು ಹಾಕುತ್ತಿದ್ದರೇ ಹಲ್ಯಾಳ ಗ್ರಾಮದಲ್ಲಿ ನೀರವ ಮೌನ ಮನೆ ಮಾಡಿದೆ.
ನಿನ್ನೆ ಮದ್ಯಾಹ್ನದಿಂದಲೂ ನಡೆಯುತ್ತಿರುವ ಕಾರ್ಯಾಚರಣೆಯಲ್ಲಿ ಎನ್ ಡಿ ಆರ್ ಎಪ್ ನ ಇಪ್ಪತ್ತು ಜನರ ತಂಡ ಐದು ಜನ ಸ್ಥಳೀಯ ಮೀನುಗಾರರ ತಂಡ ಮತ್ತು ಒಂಭತ್ತು ಜನರ ಕೊಲ್ಲಾಪುರ ಸ್ಕೂಬಾ ಡೈವ್ ತಂಡ ಕಾರ್ಯಾಚರಣೆ ನಡೆಸುತ್ತಿದ್ದು ಎರಡು ಎನ್ ಡಿ ಆರ್ ಎಪ್ ಬೋಟ್ ಮತ್ತು ಒಂದು ಸ್ಥಳೀಯ ಬೋಟ ಬಳಸಿ ಶೋಧ ಕಾರ್ಯ ನಡೆಸಲಾಗುತ್ತಿದೆ ಇಂದು ಮಧ್ಯಾಹ್ನ ಪರಸಪ್ಪ ಬನಸೋಡೆ ಶವ ಪತ್ತೆ ಆಗಿದ್ದು ಉಳಿದ ಮೂವರ ಶೋಧಕಾರ್ಯವನ್ನು ಜಂಟಿ ಕಾರ್ಯಾಚರಣೆ ಮೂಲಕ ನಡೆಸಲಾಗುತ್ತಿದೆ ಎಂದು ಸ್ಥಳಕ್ಕೆ ಭೇಟಿ ನೀಡಿದ ಚಿಕ್ಕೋಡಿ ಉಪವಿಭಾಗಾಧಿಕಾರಿ ಯುಕೇಶ ಕುಮಾರ ತಿಳಿಸಿದರು.
ನಿನ್ನೆ ನಾಪತ್ತೆಯಾಗಿದ್ದ ಸದಾಶಿವ, ಧರೆಪ್ಪ,ಶಂಕರ ಮತ್ತು ಪರಸಪ್ಪ ಇವರ ಪೈಕಿ ಪರಶುರಾಮ ಶವ ಪತ್ತೆಯಾಗಿದ್ದು ಇನ್ನುಳಿದ ಮೂವರು ಸಹೋದರರಿಗಾಗಿ ಹುಡುಕಾಟ ನಡೆಯುತ್ತಿದ್ದು ಜನರು ತಂಡೋಪ ತಂಡವಾಗಿ ಆಗಮಿಸಿ ರಕ್ಷಣಾ ಕಾರ್ಯ ನೊಡುತ್ತಿದ್ದರೆ ಬನಸೋಡೆ ಕುಟುಂಬ ಸದಸ್ಯರ ಕಣ್ಣೀರ ಕೋಡಿ ಹರಿಯುತ್ತಿರುವ ದೃಶ್ಯ ಎಂಥವರನ್ನು ಮನ ಕಲುಕಿಸುವಂತೆ ಇತ್ತು.
ಎರಡನೆಯ ದಿನವೂ ಶೋಧ ಕಾರ್ಯ ನಡೆಸುತ್ತಿರುವ ಸ್ಥಳಕ್ಕೆ ಭೇಟಿ ನೀಡಿದ ಡಿಸಿಎಂ ಲಕ್ಷ್ಮಣ ಸವದಿ ಪುತ್ರ ಚಿದಾನಂದ ಸವದಿ ಮಾಧ್ಯಮಗಳೊಂದಿಗೆ ಮಾತನಾಡಿ ಹಲ್ಯಾಳ ಗ್ರಾಮದಲ್ಲಿ ಒಂದೆ ಕುಟುಂಬದ  ನಾಲ್ಕು ಜನರು ಕೃಷ್ಣಾ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದು ಆ ಕುಟುಂಬದ ನೋವು ನಮಗೆ ಅರ್ಥವಾಗುತ್ತದೆ. ಬನಸೊಡೆ ಕುಟುಂಬಕ್ಕೆ ದೇವರು ದುಃಖ ವನ್ನು ತಡೆಯುವ ಶಕ್ತಿ ನಿಡಲಿ ಎಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇವೆ.ಡಿಸಿಎಂ ಲಕ್ಷ್ಮಣ ಸವದಿ ಅವರಿಂದ ಸರ್ಕಾರದ ಗಮನ ಸೆಳೆಯುವ ಮೂಲಕ ಮೃತರ ಕುಟುಂಬಕ್ಕೆ ಸರ್ಕಾರದಿಂದ ಬರಬೇಕಾದ ಪರಿಹಾರವನ್ನು ಆದಷ್ಟು ಬೇಗ ಕೊಡಿಸಲಾಗುವದು ಎಂದರು.
ನಿನ್ನೆ ಘಟನೆ ನಡೆದ ಬಗ್ಗೆ ತಿಳಿಯುತ್ತಿದ್ದಂತೆ ಹಲ್ಯಾಳ ಗ್ರಾಮದಲ್ಲಿ ಅಥಣಿ ತಾಲೂಕು ತಹಶಿಲ್ದಾರ ದುಂಡಪ್ಪ ಕೋಮಾರ, ತಾಲೂಕು ಪಂಚಾಯತ ಅಧಿಕಾರಿ ರವಿ ಬಂಗಾರಪ್ಪನವರ, ಮತ್ತು  ಪೋಲಿಸ್ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳದಲ್ಲೆ ಬೀಡು ಬಿಟ್ಟಿದ್ದು ನಿರಂತರವಾಗಿ
ಕಾರ್ಯಾಚರಣೆ ನಡೆಸಲಾಗುತ್ತಿದೆ.
ಇನ್ನೂ ತಮ್ಮ ಮನೆಯ ಮಕ್ಕಳಲ್ಲಿ ಒಬ್ಬರಾದರೂ ಮರಳಿ ಬರುತ್ತಾರೆ ಅನ್ನುವ ನಂಬಿಕೆಯಲ್ಲಿ ಕಾಯುತ್ತ ಕುಳಿತ ಹಿರಿಯ ಜೀವಗಳಾದ ಗೋಪಾಲ ಬನಸೋಡೆ ಮತ್ತು ಶರಣವ್ವ ಬನಸೋಡೆ ದಂಪತಿಗಳ ನಿರೀಕ್ಷೆಯೂ ಕ್ಷಣಗಳು ಕಳೆದಂತೆಲ್ಲ ಹುಸಿಯಾಗುತ್ತಿದ್ದು ವಿಧಿಯ ಕ್ರೂರ ಆಟಕ್ಕೆ ಬನಸೋಡೆ ಕುಟುಂಬ ಸದಸ್ಯರಲ್ಲಿ ಸೂತಕ ಮನೆ ಮಾಡುತ್ತಿದೆ.ಹಲ್ಯಾಳ ಗ್ರಾಮದ ಕೃಷ್ಣಾ ನದಿಯಲ್ಲಿ ಎರಡನೆಯ ದಿನ ನಡೆದ ಶೋಧ ಕಾರ್ಯಾಚರಣೆ ವೇಳೆ  ಡಿವೈಎಸ್ಪಿ ಎಸ್. ವ್ಹಿ ಗೀರಿಶ, ಸಿಪಿಐ ಶಂಕರಗೌಡ ಬಸಗೌಡರ, ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ರವಿ ಬಂಗಾರಪ್ಪ, ಉಪ ತಹಶಿಲ್ದಾರ ಮಹಾದೇವ ಬಿರಾದರ,ಸಮಾಜ ಕಲ್ಯಾಣ ಅಧಿಕಾರಿ ಪ್ರವೀಣ ಪಾಟೀಲ, ಪಿಎಸ್ಐ ಕುಮಾರ ಹಾಡಕಾರ ಎಸ್ ಬಿ ಮೇಣಸಂಗಿ, ಸೇರಿದಂತೆ ಮುಖಂಡರಾದ ಚಿದಾನಂದ ಸವದಿ,ಗಜಾನನ ಮಂಗಸೂಳಿ, ಬಸವರಾಜ ಬುಟಾಳೆ, ಮದುಕಣ್ಣ ಶೇಗುಣಶಿ, ರೈತ ಮುಖಂಡ ಮಹಾದೇವ ಮಡಿವಾಳ, ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು.
ಬಾಕ್ಸ್:
ಈ ವೇಳೆ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಆಕಸ್ಮಿಕ ಘಟನೆಗೆ ಒಂದೆ ಕುಟುಂಬದ ನಾಲ್ಕು ಜನರು ಮೃತಪಟ್ಟಿದ್ದು ರಾಜ್ಯ ಸರ್ಕಾರ ಮೃತಪಟ್ಟಿರುವ ಬನಸೋಡೆ ಕುಟುಂಬದ ಅವಲಂಬಿತರಿಗೆ ಪರಿಹಾರ ಕೊಡಬೇಕು ಸರ್ಕಾರ ಸಹಾಯಧನ ನೀಡುವ ಮೂಲಕ ಮೃತ ಸಹೊದರರ ಕುಟುಂಬಕ್ಕೆ ಸಾಂತ್ವನ ಹೇಳಬೇಕು. ಸ್ಥಳೀಯ ಶಾಸಕರ ಮತ್ತು ಉಪಮಖ್ಯಮಂತ್ರಿಗಳು ಸರ್ಕಾರದ  ಅನುದಾನ, ಘಟನಾಧಾರಿತ ಸಾವಿನ ಪ್ರಕರಣದ ಅಡಿಯಲ್ಲಿ ತಹಶಿಲ್ದಾರ ಕಚೇರಿ ಮೂಲಕ ಪರಿಹಾರ ನೀಡಿ ಆ ಕುಟುಂಬಕ್ಕೆ ಸಹಾಯ ಮಾಡಬೇಕು.
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');