ಮಾನವೀಯತೆಮೆರೆದಅತಿಥಿಉಪನ್ಯಾಸಕರು

0

ಬೆಳಗಾವಿ: ಕೋವಿಡ್ ಮಹಾಮಾರಿಯ ಪರಿಣಾಮ ಕಳೆದ 15 ತಿಂಗಳಿಂದ ಬಹುತೇಕ ಎಲ್ಲ ಖಾಸಗಿ ಮತ್ತು ಸರ್ಕಾರಿ ಕಾಲೇಜುಗಳ ಅತಿಥಿ ಉಪನ್ಯಾಸಕರು ಸಂಬಳವಿಲ್ಲದೆ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಖಾಸಗಿ ಶಾಲಾ ಕಾಲೇಜುಗಳ ಶಿಕ್ಷಕ ವೃಂದ ಸಹಾಯ ನೀಡಲು ಕರ್ನಾಟಕ ರಾಜ್ಯ ಮಹಾವಿದ್ಯಾಲಯಗಳ ಶಿಕ್ಷಕ ಸಂಘ (ಕೆ.ಆರ್.ಎಂ.ಎಸ್.ಎಸ್) ಗುರು ಸ್ಪಂದನ ಕಾರ್ಯಕ್ರಮ ಆಯೋಜಿಸಿ, ಖಾಸಗಿ ಶಾಲಾ ಕಾಲೇಜುಗಳ ಶಿಕ್ಷಕರಿಗೆ ಕೋವಿಡ್ ಮೆಡಿಸಿನ್ ಕಿಟ್ ಮತ್ತು ಕಿರಾಣಿ ಸಾಮಾಗ್ರಿ ಕಿಟ್ ವಿತರಣೆ ಮಾಡುವ ಯೋಜನೆ ರೂಪಿಸಿತ್ತು.

ಈ ಕಾರ್ಯಕ್ರಮಕ್ಕೆ ಅನೇಕ ಸಮಾಜದ ಗಣ್ಯರು, ದಾನಿಗಳ ಜೊತೆಗೆ ಸರ್ಕಾರಿ ಕಾಲೇಜುಗಳ ಮತ್ತು ವಿಶ್ವವಿದ್ಯಾಲಯದ ಪ್ರಾಧ್ಯಪಕರು ಹಣ ದೇಣಿಗೆ ನೀಡಿದ್ದರು. ಆದರೆ ತಾತ್ಕಾಲಿಕವಾಗಿ ಸೇವೆ ಸಲ್ಲಿಸುತ್ತಿರುವ ಸಂಗೊಳ್ಳಿ ರಾಯಣ್ಣ ಮಹಾವಿದ್ಯಾಲಯದ 21 ಅತಿಥಿ ಉಪನ್ಯಾಸಕರು ತಾವೆ ಸ್ವಪ್ರೇರಣೆಯಿಂದ ಹಣ ಸಂಗ್ರಹಿಸಿ, ಕಷ್ಟದಲ್ಲಿರುವ ಖಾಸಗಿ ಶಾಲಾ – ಕಾಲೇಜುಗಳ ಶಿಕ್ಷಕರಿಗೆ ಸಹಾಯ ನೀಡಲು ಮುಂದಾಗುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಹಣದ ಚೆಕ್ ವಿತರಣೆ ಸಂದರ್ಭದಲ್ಲಿ ಪ್ರಾಚಾರ್ಯ ಡಾ.ಎಂ.ಜಯಪ್ಪ ಮಾತನಾಡಿ,

ರಾಚವಿ ಯಲ್ಲಿ ತಾತ್ಕಾಲಿಕ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರ ಸಾಮಾಜಿಕ ಕಳಕಳಿ ಮತ್ತು ಸೇವಾ ಮನೋಭಾವ ಹೆಮ್ಮೆ ತರುವಂತಹದ್ದಾಗಿದೆ. ತಾತ್ಕಾಲಿಕ ಸೇವೆ ಸಲ್ಲಿಸುವ ಅತಿಥಿ ಉಪನ್ಯಾಸಕರ ವರಮಾನ ಬಹಳವಿಲ್ಲ. ಆದರೂ ಕೂಡಾ ಕಷ್ಟದಲ್ಲಿ ಖಾಸಗಿ ಶಾಲಾ ಕಾಲೇಜು ಶಿಕ್ಷಕರ ಸಹಾಯಕ್ಕೆ ಮುಂದಾಗಿರುವುದು ಮತ್ತು ತಮ್ಮ ಕೈಲಾದ ಸಹಾಯ ಮಾಡಿದ್ದು ಶ್ಲಾಘನೀಯ ಎಂದರು.

ಈ ಸಂದರ್ಭದಲ್ಲಿ ಮಹಾದೇವ ಧರಿಗೌಡರ, ಸಚಿನ ಹಿರೇಮಠ, ವಿಕ್ರಂ ಗುಡಗೋಡಿ, ಮಲ್ಲೇಶ ದೊಡ್ಡಲಕ್ಕನ್ನವರ್ ಮತ್ತು ಸಾಗರ ಇದ್ದರು.

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');