ಬಹುನಿರೀಕ್ಷೆಯ ಸಿನಿಮಾಗಳ ಪಟ್ಟಿ ಬಿಡುಗಡೆ; ಅಗ್ರಸ್ಥಾನದಲ್ಲಿ ‘ಕೆಜಿಎಫ್-2’ ಮತ್ತು ‘ಪುಷ್ಪ’: ಟಾಪ್ 5 ಚಿತ್ರಗಳು ಯಾವುವು?

0

ಹೊಸದಿಲ್ಲಿ: ಭಾರತದ ಬಹುನಿರೀಕ್ಷೆಯ ಸಿನಿಮಾಗಳ ಪಟ್ಟಿಯಲ್ಲಿ ಕನ್ನಡ ಕೆಜಿಎಫ್-2 ಮತ್ತು ತೆಲುಗಿನ ಪುಷ್ಪ ಸಿನಿಮಾಗಳು ಸ್ಥಾನ ಪಡೆದಿವೆ.

IMDb (Internet Movie Database) ಬಿಡುಗಡೆ ಮಾಡಿರುವ ಭಾರತದ ಹೆಚ್ಚು ನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ಪ್ರಶಾಂತ್ ನೀಲ್ ನಿರ್ದೇಶನದ, ಯಶ್ ನಟನೆಯ ‘ಕೆಜಿಎಫ್-2’ ಸಿನಿಮಾ ಅಗ್ರಸ್ಥಾನದಲ್ಲಿದೆ.

ವಿಶೇಷ ಎಂದರೆ ಟಾಪ್ 3ನಲ್ಲಿ ಯಾವುದೇ ಬಾಲಿವುಡ್ ಸಿನಿಮಾವಿಲ್ಲ. ಇನ್ನು ವಿಶೇಷ ಎಂದರೆ 2ನೇ ಸ್ಥಾನದಲ್ಲಿ ಅಲ್ಲು ಅರ್ಜುನ್ ನಟನೆಯ ಪುಷ್ಪ ಚಿತ್ರವಿದೆ.

27.5%ರೊಂದಿಗೆ ಕೆಜಿಎಫ್-2 ಮೊದಲ ಸ್ಥಾನದಲ್ಲಿದೆ. 24.3% ರೊಂದಿಗೆ ಪುಷ್ಪ ಸಿನಿಮಾ 2ನೇ ಸ್ಥಾನದಲ್ಲಿದೆ. ಕುತೂಹಲಕಾರಿ ವಿಚಾರವೆಂದರೆ ಅಲ್ಲು ಅರ್ಜುನ್ ನಟನೆಯ ಪುಷ್ಪ ಸಿನಿಮಾ ಕೊನೆಯ ಕ್ಷಣದ ವರೆಗೂ ಮೊದಲ ಸ್ಥಾನದಲ್ಲಿತ್ತು. ಬಳಿಕ ಕೆಜಿಎಫ್-2 ಸಿನಿಮಾ ಹೆಚ್ಚು ಮತಗಳಿಸುವ ಮೂಲಕ ಮೊದಲ ಸ್ಥಾನಕ್ಕೆ ಏರಿದೆ.

ಟಾಪ್ 5 ಚಿತ್ರಗಳು:

ಇನ್ನು ಮೂರನೆ ಸ್ಥಾನದಲ್ಲಿ ಮೋಹನ್ ಲಾಲ್ ನಟನೆಯ ‘ಮರಕ್ಕರ್: ಅರೇಬಿಯನ್ ಸಿ ಲಯನ್’ ಸಿನಿಮಾವಿದೆ. ಈ ಸಿನಿಮಾ 8.7% ರಷ್ಟು ಮತ ಪಡೆದಿದೆ. 4ನೇ ಸ್ಥಾನದಲ್ಲಿ ಪ್ರಭಾಸ್ ಮತ್ತು ಪೂಜಾ ಹೆಗ್ಡೆ ನಟನೆಯ ರಾಧೆ ಶ್ಯಾಮ್ ಸಿನಿಮಾವಿದೆ. 5ನೇ ಸ್ಥಾನದಲ್ಲಿ ತಾಪ್ಸಿ ಪನ್ನು ನಟನೆಯ ಹಸೀನ್ ದಿಲ್ ರುಬಾ ಸಿನಿಮಾವಿದೆ. ಇದು ಟಾಪ್ 5 ನಲ್ಲಿರುವ ಏಕೈಕ ಬಾಲಿವುಡ್ ಸಿನಿಮಾ ಆಗಿದೆ.

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');