ವಿಧಾನ ಸೌಧ ಆವರಣದಲ್ಲಿ ಬಸವೇಶ್ವರ ಪುತ್ಥಳಿ ನಿರ್ಮಾಣ ಸ್ವಾಗತಾರ್ಹ : ಪತ್ರಕರ್ತ ಸುಭಾನಿ ಹುಕ್ಕೇರಿ

0

ಬೆಳಗಾವಿ : ಯರಗಟ್ಟಿ: ವಿಧಾನಸೌಧದ ಆವರಣದಲ್ಲಿ ವಿಶ್ವ ಗುರು 12 ಶತಮಾನದ ಜಗಜ್ಯೋತಿ ಬಸವಣ್ಣನವರ ಪುತ್ಥಳಿ ಸ್ಥಾಪನೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚನೆ ನೀಡಿರುವುದು ಸ್ವಾಗತಾರ್ಹ ನಿರ್ಣಯವಾಗಿದೆ.

ಇವನಾರವ ಇವನಾರವ ಇವನಾರವ ನೆಂದಿನಸದಿರಯ್ಯಾ

ಇವ ನಮ್ಮವ ಇವ ನಮ್ಮವ ಇವ ನಮ್ಮವನೆಂದಿನಸಯ್ಯಾಕೂಡಲಸಂಗಮದೇವಾ ನಿಮ್ಮ ಮಹಾಮನೆಯ ಮಗನೆಂದೆನಿಸಯ್ಯ

ಎಂದು 12 ನೇ ಶತಮಾನದಲ್ಲಿಯೇ ಸಾಮಾಜಿಕ ಕ್ರಾಂತಿಗೆ ನಾಂದಿಹಾಡಿದವರು ವಿಶ್ವಗುರು ಬಸವಣ್ಣನವರು. ಅಂದಿನ ಕಾಲಕ್ಕೆ ಪ್ರಜಾಪ್ರಭುತ್ವ, ಕಾಯಕ, ಸ್ತ್ರೀ ಸಮಾನತೆ ಮಹತ್ವ ಕೊಡುವ ಮೂಲಕ ಜಾತೀಯತೆ ಅಳಿಸಲು ಪ್ರಧಾನ ಆದ್ಯತೆಯನ್ನು ನೀಡಿ ಭಕ್ತಿ ಮಾರ್ಗವನ್ನು ಪ್ರತಿಪಾದಿಸಿದ ಅಪರೂಪದ ವಿಶ್ವಗುರು ಬಸವಣ್ಣನವರು. ಅಣ್ಣ ಬಸವಣ್ಣ ಕೇವಲ ಸಾಮಾಜಿಕ ಕ್ರಾಂತಿಗೆ ಮಾತ್ರ ರಾಜಕೀಯವಾಗಿಯೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ನಾಂದಿ ಹಾಡಿದವರು. ಜನಸಾಮಾನ್ಯರಿಗೆ ಸರಳವಾಗಿ ಅರ್ಥವಾಗುವ ವಚನ ಸಾಹಿತ್ಯದ ಮೂಲಕ ಜನರಲ್ಲಿನ ಅಂಧ ಶ್ರದ್ಧೆ ತೊಡೆಹಾಕಲು ಪ್ರಯತ್ನಿಸಿದ್ದವರು. ಅನುಭವ ಮಂಟಪದ ಮೂಲಕ ಲಿಂಗ, ಜಾತಿ ಸಮಾನತೆಗೆ ಒತ್ತು ಕೊಟ್ಟವರು. ಸಮಾಜದಲ್ಲಿ ಮೇಲು ಕೀಳೆಂಬ ಭಾವನೆ ಇರಬಾರದು, ಎಲ್ಲರೂ ಸಮಾನರು ಎಂದು ಬೋಧಿಸಿ, ಆಚರಣೆ ಮಾಡಿದವರು.ಈಗಿನ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು 12ನೇ ಶತಮಾನದಲ್ಲಿಯೆ ಅನುಭವ ಮಂಟಪದ ಮೂಲಕ ಜಾರಿಗೆ ತಂದಿದ್ದು ವಿಶ್ವಗುರು ಅಣ್ಣ ಬಸವಣ್ಣನವರು. ವಿಚಾರ, ವಾಕ್, ಆಚಾರ ಸ್ವಾತಂತ್ರ್ಯ, ಸಮುದಾಯಿಕ ಚಿಂತನೆ ಪ್ರಜಾಪ್ರಭುತ್ವದ ವಿಶೇಷ. ನಮ್ಮ ಲೋಕಸಭೆ ಆ ಅನುಭವ ಮಂಟಪವನ್ನು ಹೋಲುತ್ತದೆ ಎಂದರೂ ತಪ್ಪಾಗಲಾರದು. ಅಲ್ಲಿ ಪ್ರತಿಯೊಬ್ಬ ಶರಣ-ಶರಣೆಗೂ ವಿಚಾರ ಸ್ವಾತಂತ್ರ್ಯವಿತ್ತು, ತನಗೆ ಸರಿಕಂಡದ್ದನ್ನು ಪ್ರತಿಪಾದಿಸುವ ವಾಕ್ ಸ್ವಾತಂತ್ರ್ಯವಿತ್ತು. ತನಗೆ ಸಮ್ಮತವಾದ ಆಚಾರವನ್ನು ಅಳವಡಿಸಿಕೊಳ್ಳಲು ಅವಕಾಶವಿತ್ತು.
ಶರಣರು ಧಾರ್ಮಿಕ, ಸಾಮಾಜಿಕ, ಆರ್ಥಿಕ ಸಮಸ್ಯೆಗಳೆಲ್ಲವನ್ನು ಮುಕ್ತಮನದಿಂದ ಚರ್ಚಿಸುತ್ತಿದ್ದರು. ಈಗಿನ ಪ್ರಜಾಪ್ರಭುತ್ವಕ್ಕೆ ಭಿನ್ನವಾದ ಅಂಶವೊಂದಿತ್ತು, ಅದು ನುಡಿದಂತೆ ನಡೆಯುವುದು. ತಾವು ತಾವು ನುಡಿಯುವುದನ್ನೇ ಶರಣರು ತಮ್ಮ ಬದುಕಿನಲ್ಲಿ ಆಳವಡಿಸಿಕೊಂಡಿದ್ದರು, ಅದನ್ನು ಜನಸಾನ್ಯರಿಗೆ ಅಳವಡಿಸಿಕೊಳ್ಳುವಂತೆ ಹೇಳುತ್ತಿದ್ದರು. ಹೀಗಾಗಿ ಅನುಭವ ಮಂಟಪವು ಜಗತ್ತಿನ ಎಲ್ಲ ಪಾರ್ಲಿಮೆಂಟ್‌ಗಳಿಗೂ ಮಾದರಿಯಾಗಿದೆ ಎನ್ನಬಹುದು.

ಇಂತಹ ಮಹಾನ್ ಗುರು ಜಗಜ್ಯೋತಿ ವಿಶ್ವ ಗುರು ಬಸವಣ್ಣನವರ ಪುತ್ಥಳಿ ವಿಧಾನಸೌಧದ ಆವರಣದಲ್ಲಿ ನಿರ್ಮಾಣ ವಾಗುತ್ತಿರುವುದು ಎಲ್ಲರಿಗೂ ಸಂತಸ ತಂದಿದೆ..

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');