ಆತ್ಮಹತ್ಯೆ ಮಹಾಪಾಪ ಈ ಪಾಪ

0

 

ಆತ್ಮಹತ್ಯೆ ಮಹಾಪಾಪ ಈ ಪಾಪಕ್ಕೆ ಹೊಣೆ ಯಾರು, ಆತ್ಮಹತ್ಯೆಯನ್ನು ಮಾಡಿಕೊಂಡವರಾ ಅಥವಾ ಅದಕ್ಕೆ ಪ್ರೇರೆಪಿಸಿದವರಾ?ಯಾರು?
ಸರಿಯಾಗಿ ವಿಚಾರ ಮಡಿದರೆ ಇನ್ನೋಬ್ಬರ ಬದುಕಿಗೆ ಪ್ರೇರಣೆ ಆಗಬೇಕೆ ಹೋರತು ಸಾವಿಗಲ್ಲ ವಿಷಾದದಿಂದ ಬರೆಯಬೇಕಾಗಿದೆ, ಒಂದು ಕಾಲದ ವಿಶಾಲ ಮನೋಭಾವ ಎಲ್ಲರನ್ನು -ಎಲ್ಲವನ್ನು ಒಪ್ಪಿಕೊಳ್ಳುವ ಪ್ರೀತಿಯಿಂದ ಅಪ್ಪಿಕೊ:ಳ್ಳುವ ಹರಸುವ ಮತ್ತು ಎಲ್ಲಾ ಕಾಲದಲ್ಲೂ -ಎಲ್ಲಾ ವಿಷಯಗಳಲ್ಲೂ ಒಳ್ಳೆಯದನ್ನೇ ಬಯಸುವ ಜನರು ಈಗಿನ ಕಾಲಮಾನದಲ್ಲಿ ಸಿಗದಿರುವುದು ವಿಷಾಧನೀಯ.
ಒಬ್ಬರೋನ್ನೋಬ್ಬರು ಅರ್ಥಮಡಿಕೊಂಡು ಅನುಸರಿಸಿಕೊಂಡ, ತಪ್ಪುಗಳನ್ನು ಸರಿಮಾಡಿಕೊಂಡು ಕಷ್ಠಗಳಲ್ಲಿ ಸರಿಸವನಾಗಿ, ಜೋತೆಯಾಗಿ ನಿಲ್ಲುವ ಮನೋಭಾವ ಇಂದು ಯಾರಿಗೂ ಇಲ್ಲದಾಗಿದೆ, ಇಂದು ನಾವು ಆರ್ಥಿಕವಾಗಿ, ಸಾಮಾಜಿಕವಾಗಿ,ಶ್ಯಕ್ಷಣಿಕವಾಗಿ ಬೆಳೆದಿದ್ದೇವೆ,ಸುಖಕ್ಕೆ ಬೇಕಾಗುವ ಎಲ್ಲಾ ವ್ಯವಸ್ಥೆಗಳ ಮಾಡಲು ಸಾಕು -ಬೇಕಾಗುವಷ್ಟು ಹಣ ದುಡಿಯುಲು ಹಗಲು-ರಾತ್ರಿ ಎನ್ನದೇ ದುಡಿಯುತ್ತಿದ್ದೇವೆ, ಒಬ್ಬರನ್ನೋಬ್ಬರು ನಗೋಡದೆ ಮಾತನಾಡಲಾರದೇ ಹತ್ತಿರವಿದ್ದರೂ ದೂರವಾಗಿದ್ದಾರೆ ಎಲ್ಲರಿಗೂ ಎಲ್ಲ ವಿಷಯಗಳಲ್ಲೂ ಕೃತಕ ಪ್ರತೀಕ್ರಿಯೆ ಕೊಡುತ್ತಾರೆ, ಇದೇ ಕಾರಣಕ್ಕೆ ಜೀವನದ ಕೆಲಸ -ಕಾರ್ಯಗಳನ್ನು ಅವುಗಳ ಒತ್ತಡವನ್ನು ನಿಭಾಯಿಸಲು ಆಗದೇ ಇರುವುದರಿಂದ ಮಾನಸಿಕ ಖನ್ನತೆಗೆ ಒಳಗಾಗಿದ್ದಾರೆ.

ಯಾರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ
೧) ಮನೋರೋಗ ಇರುವವರು ಆತ್ಮಹತ್ಯೆ ಮಡಿಕೊಳ್ಳುತ್ತಾರೆ (ಮಾನಸಿಕ ರೋಗದಿಂದ ಬಳಲುತ್ತಿರುವವರು) ಅತಿಯಾದ ಖಿನ್ನತೆ,ಸ್ಕಜೋಪ್ರೇನಿಯಾ,
೨) ಅತಿಯಾದ ಮಧ್ಯಪಾನ ಮತ್ತು ಮಾದಕ ದ್ರವ್ಯ ವ್ಯಸನಿಗಳು.
೩) ಜೀವನದಲ್ಲಿ ಪದೇ ಪದೇ ಸೋಲನ್ನು ಅನುಭವಿಸುವವರು
 ಹತ್ತಿರದ ಸಂಭಂಧಗಳ ಸಾವು ನೋವು.
 ವಿಧ್ಯಾಭ್ಯಾಸದಲ್ಲಿ ಹಿನ್ನಡೆ.
 ಕೆಲಸ ಕಾರ್ಯಗಳಲ್ಲಿ ನಷ್ಠ.
 ಮಾನಹಾನಿ ವಿಷಯಗಳನ್ನು ಅತಿಯಾಗಿ ಮನಸ್ಸಿಗೆ ಪರಿಣಾಮ ಬೀರಿದಾಗ.
 ಪ್ರೇಮ ವೈಪಲ್ಯ.
 ಉದ್ಯೋಗವಿಲ್ಲದಿರುವಿಕೆ.
೪) ಕೆಲವು ಗುಣಪಡಿಸಲಾಗದ ಕಾಯಿಲೆಗಳು ಮತ್ತು ಅದಕ್ಕೆ ಬೇಕಾದ ಅನುಕೂಲ ಇಲ್ಲದೇ ಇರುವುದು.
೫) ಮನೆಯ ವಾತಾವರಣ-ಸದಾ ಜಗಳವಾಡುವ ತಂದೆ-ತಾಯಿ ಮನಸ್ಸಿಗೆ ಚುಚ್ಚಿ ಮಾತನಾಡುವುದು ಅಥವಾ ಹಿಯಾಳಿಸಿ ತೆಗಳಿಕೆಯಿಂದ ಮಾತನಾಡುವುದು,ಬಂಧು-ಬಾಂಧವರ ಎದುರಲ್ಲೂ ಮಕ್ಕಳ ಬಗ್ಗೆ÷ ನಕಾರಾತ್ಮಕ ವಿಷಯಗಳ ಬಗ್ಗೆ ಮಾತನಾಡುವುದು. ಕೆಲವರ ಮಾತಿನ ಮೇಲೆ ಹಿಡಿತವಿಲ್ಲದಿರವ ಕಾರಣ ಇನ್ನೋಬ್ಬರಿಗೆ ಪ್ರಚೋದನೆ ಆಗಬಹುದು.
೬) ಹಿರಿಯರಿಂದ ,ಮನೆಯವರಿಂದ ಸಿಗಬೇಕಾದ ಕಾಳಜಿ-ಪ್ರೀತಿ ಆಸರೆ ಸಿಗದೇ ಇರುವುದು ಯಾರು ಇಲ್ಲ ಎಂಬ ಭಾವನೆ ಆತ್ಮಹತ್ಯೆಗೆ ಪ್ರಚೋಧನೆ ಆಗಬಹುದು.
೭) ಮನೆಯಲ್ಲಿ,ಶಾಲೆ-ಕಾಲೇಜುಗಳಲ್ಲಿ ಹಿರಿಯರಿಂದ ಗುರುಗಳೊಇಂದ ತಂದೆ-ತಾಯಿಯರಿಂದ ಸರಿಯಾದ ಮಾರ್ಗದರ್ಶನ ಸಿಗದೇ ಇರುವುದು ಮತ್ತು ಮಕ್ಕಳನ್ನು ವಿನಾಕಾರಣ ಹಿಂಸಿಸುವುದರಿಂದ ಆತ್ಮಹತ್ಯೆಗೆ ಕಾರಣವಾಗಬಹುದು.
೮) ಅತಿಯಾದ ಒತ್ತಡ ಅದನ್ನು ಹೇಗೆ ನಿಭಾಯಿಸಬೇಕು ಎಂಬುದರ ಅರಿವು ಇಲ್ಲದಿರುವ ಮಕ್ಕಳು.
೯) ಪ್ರೀತಿ ಪಾತ್ರರಿಂದ ನಿಲಕ್ಷö್ಯ ಮಾಡುವುದು ಮತ್ತು ಹಿಯಾಳಿಸುವುದು.
೧೦) ಆಲೋಚನೆಗಳ ಮೇಲೆ -ವಿಚಾರಗಳ ಮೇಲೆ ಒತ್ತಡ ಮತ್ತು ಹಿಡಿತ ಇಲ್ಲದಿರುವಿಕೆ,ತುಂಬಾ ಅವಸರದ ನಿರ್ದಾರಗಳನ್ನು ತೆಗೆದುಕೊಳ್ಳುವುದರಿಂದ ಆಗುವ ತೊಂದರೆ ಆತ್ಮಹತ್ಯೆಗೆ ಕಾರಣ ಆಗುತ್ತದೆ.
೧೧) ಮನೆಯಲ್ಲಿ ಭಯದ ವಾತಾವರಣ ಮತ್ತು ಮಕ್ಕಳನ್ನು ಶಾರೀರಿಕ – ಮಾನಸಿಕವಾಗಿ ಹಿಂಸೆ ಕೊಡುವುದು ಮುಖ್ಯವಾದ ಕಾರಣವಾಗಿರುತ್ತದೆ.
ಆತ್ಮಹತ್ಯೆಯನ್ನು ತಡೆಗಟ್ಟುವ ಬಗೆ
“ಮಾತು ಬಲ್ಲವನಿಗೆ ರೋಗವಿಲ್ಲ- ಇತರರಿಗೂ ರೋಗವಿಲ್ಲ”.
 ಮನೆಯಲ್ಲಿ ಎಲ್ಲರು ಕುಳಿತು ,ಬೆರೆತು ಮನ ಬಿಚ್ಚಿ ಮಾತನಾಡುವ ವಾತಾವರಣ ಇರಬೇಕು.
 ಮಕ್ಕಳಲ್ಲಿ ಕಷ್ಠಗಳನ್ನು ಎದುರಿಸಿ ಬಧುಕುವ ಗುಣ ಬೆಳೆಸಬೇಕು.
 ಕಷ್ಠ-ತೊಂದರೆಗಳನ್ನು ಹೇಳಿಕೊಳ್ಳುವಾಗ ಅದನ್ನು ತಾಳ್ಮೆಯಿಂದ ಕೇಳಿಸಿ ಕೊಳ್ಳಬೇಕು ಮತ್ತು ಆದಕ್ಕೆ ಸರಿಯಾದ ಮಾರ್ಗ ಹಿರಿಯರಾದವರು ತೋರಿಸಬೇಕು.
 ಎಂಥ ಕಷ್ಠ ಬಂದರೂ ಮತ್ತು ಏನೇ ತೊಂದರೆ ಆದರೂ ಸಹಾಯಕ್ಕೆ ನಾವಿದ್ದೆವೆ ಎಂಬುದನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಡಬೇಕು.
 ಮಕ್ಕಳು –ವಯಸ್ಸಿನವರು ಮನೋಭಾವವನ್ನು ಅರ್ಥಮಾಡಿಕೊಂಡು ಅವರಿಗೆ ಸಲಹೆ-ಸೂಚನೆಗಳನ್ನು ಕೊಡಬೇಕು.
 ಮನೆಯಲ್ಲಿ ಭಯದ ವಾತಾವರಣ ಮಕ್ಕಳನ್ನು ವಿನಾಕಾರಣ ಗಧರಿಸುವುದು,ಹೆದರಿಸುವುದು ಮಾಡಬಾರದು.
 ಅತಿಯಾಗಿ ದಂಡಿಸುವುದು, ಕೆಟ್ಟಮಾತುಗಳನ್ನಾಡುವುದು ಒಳ್ಳೆಯದಲ್ಲ
 ಮಕ್ಕಳಲ್ಲಿ ದರ‍್ಯ ತುಂಬುವುದು ಮತ್ತು ಆತ್ಮ ಶಕ್ತಿಯನ್ನು ಹೆಚ್ಚಿಸುವ ಎಲ್ಲಾ ಕೆಲಸದಲ್ಲೂ ಪ್ರೋತ್ಸಾಹವನ್ನು ಗುರುಗಳು,ಹಿರಿಯರು ಕೊಡಬೇಕು.
 ಉತ್ತಮ ವಿಚಾರ ಆಚಾರಗಳ ಜೊತೆಗೆ ಬಧುಕಲು ಬೇಕಾಗುವ ಪ್ರೇರಣೆಯನ್ನು ಗುರು-ಹಿರಿಯರು ತಿಳಿಸಿಕೊಡಬೇಕು.
 ಮನಸ್ಸಿಗೆ ಚುಚ್ಚುವಂತ ಮಾತನ್ನು ಆಡಬೇಡಿ ಮತ್ತು ಪದೇ-ಪದೇ ಅವರ ವಿಕೋಪಗಳನ್ನು ಸೋಲಿನ ಬಗ್ಗೆ ಮಾತನಾಡಬೇಡಿ.

ಕೋನೆಯ ಮಾತು
ಬಧುಕು ಒಂದು ಸುಂದರ ಹಾಡು, ಅದನ್ನು ಸುಂದರವಾಗಿ, ಸುಲಲಿತವಾಗಿ ಹಾಡಿ ನೀನು ಬದುಕಿ ಇನ್ನೋಬ್ಬರ ಬದುಕಿಗೆ ಪ್ರೇರಣೆಯಾಗು. ಸಾವು ಸಹಜ, ಆದು ಬಂದಾಗ ಬರಲಿ ಬರುವವರೆಗೂ ಬದುಕಲು ಕಲಿ,ಇತರರಿಗೂ ಕಲಿಸು.

ಲೇಖನ:  ದಿಲೀಪ ಕುಮಾರ. ಎಸ್.ಹಂಚಿನಾಳ

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');