ಖಾನಾಪುರ : ಮಲಪ್ರಭಾ ನದಿ ಪಾಲಾಗಿದ್ದ ಇಬ್ಬರು ಬಾಲಕರ ಶವ ಪತ್ತೆ

0

ಬೆಳಗಾವಿ : ಕಳೆದ ಎರಡು ದಿನಗಳ ಹಿಂದೆ ಖಾನಾಪುರದ ಮಲಪ್ರಭಾ ನದಿಗೆ ಸ್ನೇಹಿತರೊಂದಿಗೆ ಈಜುಲು ಹೋಗಿ ನೀರು ಪಾಲಾಗಿದ್ದ ಇಬ್ಬರು ಬಾಲಕರು ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಶ್ರೇಯಸ್ ಬಾಪಶೇಟ್(13), ರೋಹಿತ್ ಪಾಟೀಲ್ (15) ಶವ ಪತ್ತೆ. ಮೃತ ಬಾಲಕರು ಖಾನಾಪುರ ಪಟ್ಟಣದ ದುರ್ಗಾನಗರ ನಿವಾಸಿಗಳಾಗಿದ್ದಾರೆ.

ಐದು ಜನ ಸ್ನೇಹಿತರು ಮಲಪ್ರಭಾ ನದಿಗೆ ಈಜಲು ಹೋದ ಸಂದರ್ಭದಲ್ಲಿ ಇಬ್ಬರು ನೀರು ಪಾಲಾಗಿದ್ದರು. ಇದರಿಂದ ಮೂವರು ಬಾಲಕರು ಹೆದರಿ ಮನೆ ಬಿಟ್ಟು ಓಡಿ ಹೋಗಿದ್ದರು.

ನಾಪತ್ತೆಯಾದ ಮಕ್ಕಳ ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮನೆಗೆ ಬಾರದೆ ಓಡಿ ಹೋದ ಮಕ್ಕಳು ಪತ್ತೆಯಾದ ಬಳಿಕ ಇಬ್ಬರು ಬಾಲಕರು ಮೃತಪಟ್ಟ ಘಟನೆ ಬೆಳಕಿಗೆ ಬಂದಿದೆ.////

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');