ಜಲಸಮಾಧಿ ಆಗಿದ್ದ ಒಂದೆ ಕುಟುಂಬ ನಾಲ್ಕು ಜನರ ಶವಪತ್ತೆ.ಹಲ್ಯಾಳದಲ್ಲಿ ನೆರವೇರಿದ ಅಂತ್ಯ ಸಂಸ್ಕಾರ

0
ಅಥಣಿ: ತಾಲೂಕಿನ ಹಲ್ಯಾಳ ಗ್ರಾಮದ ಕೃಷ್ಣಾ ನದಿಯಲ್ಲಿ ನಡೆದಿದ್ದ ನಾಲ್ಕು ಜನ ಸಹೋದರರ ಜಲಸಮಾಧಿ ಪ್ರಕರಣದಲ್ಲಿ ನಾಲ್ಕು ಶವಗಳು ಪತ್ತೆಯಾಗುವ ಮೂಲಕ ಇಂದು ಶೋಧ ಕಾರ್ಯ ಮುಕ್ತಾಯವಾಗಿದೆ.
ಊರಿನಲ್ಲಿ ಜಾತ್ರೆ ನಿಮಿತ್ಯ ಬಟ್ಟೆ ತೊಳೆಯಲು ಹೋದ ವೇಳೆ ತಮ್ಮ ಸಹೋದರನೊಬ್ಬ ನೀರಿನಲ್ಲಿ ಹರಿದು ಹೊಗುವದನ್ನು ನೋಡಿ ಅವನನ್ನು ಉಳಿಸಲು ಹೋದ ಸಮಯದಲ್ಲಿ ನಡೆದ ಆಕಸ್ಮಿಕ ಘಟನೆಯಲ್ಲಿ ನಾಲ್ಕು ಜನ ಜಲಸಮಾಧಿ ಆಗಿದ್ದರು.ಎರಡು ದಿನಗಳ ಸತತ ಕಾರ್ಯಾಚರಣೆ ಬಳಿಕ ಜಲಸಮಾಧಿ ಆಗಿದ್ದ ಪರಸಪ್ಪ ಬನಸೋಡೆ ನಿನ್ನೆ ಶವವಾಗಿ ಪತ್ತೆ ಆಗಿದ್ದರೆ ಇಂದು ಅವನ ಸಹೋದರರಾದ ಸದಾಶಿವ ಬನಸೋಡೆ, ಶಂಕರ್ ಬನಸೋಡೆ ಮತ್ತು ಧರೆಪ್ಪ ಬನಸೋಡೆ ಶವಗಳು ಕೃಷ್ಣಾ ನದಿಯಲ್ಲಿ ಪತ್ತೆಯಾಗಿವೆ.
ಎದೆ ಎತ್ತರ ಬೆಳೆದ ಮಕ್ಕಳು ಬದುಕಿಗೆ ಆಸರೆ ಆಗುತ್ತಾರೆ ಅಂದುಕೊಂಡಿದ್ದ ದಂಪತಿಗಳಾದ ಶರಣವ್ವ ಬನಸೋಡೆ ಮತ್ತು ಗೋಪಾಲ ಬನಸೋಡೆ ಇವರಿಗೆ ತಮ್ಮ ಮಕ್ಕಳು ಬದುಕು ಕಟ್ಟಿಕೊಳ್ಳಲು ಆಸರೆಯಾಗಿದ್ದ ಕೃಷ್ಣಾ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದು ಬರಸಿಡಿಲು ಬಡಿದಂತಾಗಿದೆ.ಇನ್ನೂ ಕಳೆದ ಎರಡು ದಿನಗಳ ಕಾಲ ಎನ್. ಡಿ. ಆರ್. ಎಪ್, ಕೆ. ಡಿ. ಆರ್. ಎಪ್ ಮತ್ತು ಅಗ್ನಿಶಾಮಕ ದಳದ ಮೂಲಕ ಶೋಧ ಕಾರ್ಯ ಮುಂದುವರೆಸಿದ್ದು ಇಂದು ಮೂರು ಜನರ ಶವಗಳು ಪತ್ತೆಯಾಗುತ್ತಿದ್ದಂತೆಯೆ ಪರಿಹಾರಕ್ಕಾಗಿ ಪ್ರತಿಭಟನೆಯೂ ನಡೆದ ಘಟನೆ ಜರುಗಿದೆ.
ನದಿಯಲ್ಲಿ ಮುಳುಗಿ ಮೃತಪಟ್ಟ ಸಹೋದರರ ಅವಲಂಬಿತರಿಗೆ ಪರಿಹಾರ ಘೋಷಣೆ ಆಗುವವರೆಗೂ ಶವಸಂಸ್ಕಾರ ನಡೆಸುವದಿಲ್ಲ ಎಂದು ಕೆಲವರು ಪಟ್ಟು ಹಿಡಿದಿದ್ದು ಹದಿನೈದು ದಿನಗಳ ಅವಧಿಯಲ್ಲಿ ಪರಿಹಾರ ಕೊಡುವ ಭರವಸೆಯನ್ನು ಅಥಣಿ ತಹಶಿಲ್ದಾರ ದುಂಡಪ್ಪ ಕೋಮಾರ ನೀಡಿದ್ದರಿಂದ ಪ್ರತಿಭಟನೆ ಹಿಂಪಡೆಯಲಾಗಿದ್ದು ಸ್ಥಳಕ್ಕೆ ಭೇಟಿ ನೀಡಿದ ಸಿಪಿಐ ಶಂಕರಗೌಡ ಬಸನಗೌಡರ ಮತ್ತು ಡಿವೈಎಸ್ಪಿ ಎಸ್. ವಿ ಗಿರೀಶ್ ಪ್ರತಿಭಟನೆಗೆ ಮುಂದಾದವರ ಮನವೊಲಿಸುವ ಮೂಲಕ ಮುಂದಿನ ಕಾರ್ಯಗಳಿಗೆ ಅನುವು ಮಾಡಿಕೊಟ್ಟಿದ್ದಾರೆ.
ಒಟ್ಟಾರೆ ಆಗಿ ವೃದ್ದ ತಂದೆ ತಾಯಿಯ ಎದುರಲ್ಲೆ ಆಸರೆ ಆಗ ಬೇಕಿದ್ದ ಮಕ್ಕಳು ಇಹಲೋಕ ತ್ಯಜಿಸಿದ್ದು ಎರಡು ದಿನಗಳ ಕಾಲ ಎನ್. ಡಿ. ಆರ್. ಎಪ್, ಕೆ ಡಿ ಆರ್ ಎಪ್ ಮತ್ತು ಕೊಲ್ಲಾಪುರದ ಸ್ಕೂಬಾ ಡೈವ್ ಟೀಮ್ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಸ್ಥಳೀಯ ಮೀನುಗಾರರು ಶೋಧಕಾರ್ಯದಲ್ಲಿ ಭಾಗವಹಿಸಿದ್ದು ಹಲ್ಯಾಳ ಗ್ರಾಮದಲ್ಲಿ ಶೋಕ ಮಡುಗಟ್ಟಿದೆ. ಸೋಮವಾರ ನಡೆದ ಘಟನೆಯಲ್ಲಿ ಒಟ್ಟು ನಾಲ್ಕು ಜನರು ಜಲಸಮಾಧಿ ಆಗಿದ್ದು ನದಿಯಲ್ಲಿ ಮುಳುಗಿ ಮೃತಪಟ್ಟಿದ್ದ ಪರಸುರಾಮ ಬನಸೋಡೆ ಶವ ಮಂಗಳವಾರ ಸಂಜೆಯ ವೇಳೆಗೆ ಪತ್ತೆಯಾದರೆ ಬುಧವಾರ ಬೆಳಗಿನ ಜಾವ ಸಹೋದರರಾದ ಶಂಕರ ಬನಸೋಡೆ,ಸದಾಶಿವ ಬನಸೋಡೆ ಮತ್ತು ಧರೆಪ್ಪ ಬನಸೋಡೆ ಶವಗಳು ಕೃಷ್ಣಾ ನದಿಯಲ್ಲಿ ತೇಲಿಬಂದಿವೆ. ಶೋಧ ಕಾರ್ಯದಲ್ಲಿ ಅಥಣಿ ಡಿವೈಎಸ್ಪಿ ಎಸ್ ವಿ ಗಿರೀಶ, ಸಿಪಿಐ ಶಂಕರಗೌಡ ಬಸನಗೌಡರ, ಪಿಎಸ್ಐ ಕುಮಾರ ಹಾಡಕಾರ,ತಾಲೂಕು ಪಂಚಾಯತ ಅಧಿಕಾರಿ ರವಿ ಬಂಗಾರಪ್ಪನವರ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಪ್ರವೀಣ ಪಾಟೀಲ ಮತ್ತು ಅಗ್ನಿಶಾಮಕ ಇಲಾಖೆ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು. ಘಟನೆಯ ಮಾಹಿತಿ ತಿಳಿದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಜನಪ್ರತಿನಿಧಿಗಳಾದ ಡಿಸಿಎಂ ಹಾಗೂ ಸಾರಿಗೆ ಸಚೀವ ಲಕ್ಷ್ಮಣ ಸವದಿ ಮತ್ತು ಅಥಣಿ ಶಾಸಕ ಮಹೇಶ ಕುಮಠಳ್ಳಿ ಸಂತಾಪ ವ್ಯಕ್ತಪಡಿಸಿದ್ದು ಕೃಷ್ಣಾ ನದಿಯಲ್ಲಿ ಮೃತಪಟ್ಟ ಬನಸೋಡೆ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ.
ಕಾರ್ಯ ನಿಮಿತ್ತವಾಗಿ ನಾನು ಬೆಂಗಳೂರಿನಲ್ಲಿ ಇರುವದರಿಂದ ಹಲ್ಯಾಳ ಗ್ರಾಮಕ್ಕೆ  ಬರಲು ಆಗಿಲ್ಲ. ಈ ಘಟನೆಯ ಬಗ್ಗೆ ನನಗೆ ವಿಷಾದವಿದೆ.
ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ.ಗೋಪಾಲ ಬನಸೋಡೆ ಮತ್ತು ಶರಣವ್ವ ಬನಸೋಡೆ ಕುಟುಂಬದ ನೋವು ನಮಗೆ ಅರ್ಥವಾಗುತ್ತದೆ. ಜೀವಗಳನ್ನು ಮರಳಿ ತರುವ ಶಕ್ತಿ ಯಾರಿಗೂ ಇಲ್ಲ ಅವರ ದುಃಖ ದಲ್ಲಿ ನಾನೂ ಕೂಡ ಭಾಗಿಯಾಗಿದ್ದೇನೆ.ದೇವರು ನಾಲ್ಕು ಜನ ಸಹೋದರರು ಮೃತಪಟ್ಟ ಬನಸೋಡೆ ಕುಟುಂಬಕ್ಕೆ ದುಃಖ ತಡೆಯುವ ಶಕ್ತಿ ಕೊಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೆನೆ. ಸರ್ಕಾರ ಮಟ್ಟದಲ್ಲಿ ಚರ್ಚಿಸಿ ಮೃತರ ಕುಟುಂಬಕ್ಕೆ ಪರಿಹಾರ ಕೊಡಿಸಲಿದ್ದೇವೆ.
-ಮಹೇಶ ಕುಮಠಳ್ಳಿ-ಅಥಣಿ ಶಾಸಕ
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');