ಜನೆವರಿ 26 ಹಾಗೂ ಅಗಸ್ಟ್ 15 ರಂದು ಕ್ರಾಂತಿವೀರ ಸಂಗೋಳ್ಳಿ ರಾಯಣ್ಣನವರ ಭಾವಚಿತ್ರಕ್ಕೆ ಸರ್ಕಾರದಿಂದ ವಿಶೇಷ ಗೌರವ ನೀಡುವಂತೆ ಸಂಗೊಳ್ಳಿ ರಾಯಣ್ಣ ಸೇನೆ ಸಂಘಟನೆ ವತಿಯಿಂದ ಮನವಿ

0

ಬೀದರ್ : ಜನೆವರಿ 26 ಮತ್ತು ಅಗಸ್ಟ್ 15 ರಂದು ಕ್ರಾಂತಿವೀರ ಸಂಗೋಳ್ಳಿ ರಾಯಣ್ಣನವರ ಭಾವಚಿತ್ರಕ್ಕೆ ಸರ್ಕಾರದಿಂದ ವಿಶೇಷ ಗೌರವ ನೀಡುವಂತೆ ಆದೇಶ ಹೊರಡಿಸಲು ಮಾನ್ಯ ಜಿಲ್ಲಾಧಿಕಾರಿಗಳ ಮುಖಾಂತರ, ಸನ್ಮಾನ್ಯ ಶ್ರೀಬಿ.ಎಸ್.ಯಡಿಯೂರಪ್ಪ ಮಾನ್ಯ ಮುಖ್ಯಮಂತ್ರಿಗಳಿಗೆ ಒತ್ತಾಯ ಮನವಿ ಪತ್ರ ಸಲ್ಲಿಸಿದರು

ಕ್ರಾಂತಿವೀರ ಸಂಗೋಳ್ಳಿ ರಾಯಣ್ಣನವರ ಜನ್ಮ ದಿನ 1796, ಅಗಸ್ಟ್ 15, ಸ್ವಾತಂತ್ರ್ಯ ಸಿಕ್ಕ ದಿನ ಹಾಗೂ ಗಲ್ಲಿಗೇರಿಸಿದ ದಿನ 1831 ಜನೆವರಿ 26 ಗಣರಾಜ್ಯೋತ್ಸವ ದಿನ ಎರಡು ದಿನಗಳು ಕ್ರಾಂತಿವೀರ ಸಂಗೋಳ್ಳಿ ರಾಯಣ್ಣನವರ ಜನ್ಮದಿನ ಮತ್ತು ಹುತಾತ್ಮ ದಿನಗಳಾಗಿದ್ದು, ಅವರ ಸ್ಮರಣಾರ್ಥವಾಗಿ ಈ ಎರಡು ದಿನದಂದು ಸರ್ಕಾರಿ ಹಾಗೂ ಎಲ್ಲಾ ಶಾಲಾ ಕಾಲೇಜು ಕಛೇರಿಗಳಲ್ಲಿ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವ ನೀಡುವಂತೆ ಸರ್ಕಾರ ಆದೇಶ ಹೊರಡಿಸಬೇಕೆಂದು ರಾಷ್ಟ್ರೀಯ ಸಂಗೋಳ್ಳಿ ರಾಯಣ್ಣ ಸೇನೆ ಕರ್ನಾಟಕ ರವರು ವಿನಂತಿಸಿದ್ದಾರೆ

ಈ ಮನವಿ ಸಲ್ಲಿಸುವ ಸಂದರ್ಭದಲ್ಲಿ ಸುಧಾಕರ ಪಾತರಪಳ್ಳಿ
ಜಿಲ್ಲಾಧ್ಯಕ್ಷರು
ರಾಷ್ಟ್ರೀಯ ಸಂಗೋಳ್ಳಿ ರಾಯಣ್ಣ ಸೇನೆ ಪ್ರಕಾಶ ಚರಪಳ್ಳಿ
ಉಪಾಧ್ಯಕ್ಷರು ರಾಷ್ಟ್ರೀಯ ಸಂಗೋಳ್ಳಿ ರಾಯಣ್ಣ ಸೇನೆ ಹಾಗೂ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');