ಲಾಕ್ ಡೌನ್: ಸಾಂಬ್ರಾ ವಿಮಾನ ನಿಲ್ದಾಣದಿಂದ 492 ಲೋಹದ ಹಕ್ಕಿಗಳ ಹಾರಾಟ

0

ಬೆಳಗಾವಿ: ಲಾಕ್ಡೌನ್ ಸಂದರ್ಭದಲ್ಲಿ  ಸಾಂಬ್ರಾ ವಿಮಾನ ನಿಲ್ದಾಣದಿಂದ ಅತಿ ಹೆಚ್ಚು ಜನರು ಪ್ರಯಾಣ ಬೆಳೆಸಿದ್ದು, ಈ ಮೂಲಕ  ವಿಮಾನಗಳ ಹಾರಾಟದಲ್ಲಿ ಅಂತರಾಷ್ಟ್ರೀಯ  ಏರಪೋರ್ಟ್ ಗಳನ್ನೇ ಹಿಂದಿಕ್ಕಿ,  ಬೆಳಗಾವಿ ಏರಪೋರ್ಟ್ ದಾಪುಗಾಲು ಇಟ್ಟಿದೆ.

ಕರೋನಾ ಸಂಕಷ್ಟದಲೂ ಬೆಳಗಾವಿ ಲೋಹದ  ಹಕ್ಕಿಗಳು ಹೆಚ್ಚಿನ ಆದಾಯ ನೀಡಿದರಿಂದ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಮತ್ತಷ್ಟೂ ಬಲ ಬಂದತಾಗಿದೆ.   ಕರ್ನಾಟಕದಲ್ಲಿ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಹಿಂದಿಕ್ಕಿ ಈಗ ಎರಡನೇ ಸ್ಥಾನದಲ್ಲಿದ್ದು ಅತ್ಯಂತ ಬ್ಯುಸಿಯೆಸ್ಟ್  ಏರಪೋರ್ಟ್ ಎಂದು ತೋರಿಸಿಕೊಟ್ಟಿದೆ. ವಿಮಾನ ಹಾರಟದಲ್ಲಿ ಬೆಂಗಳೂರು ವಿಮಾನ ನಿಲ್ದಾಣ ಮೊದಲನೆಯ ಸ್ಥಾನದಲ್ಲಿದೆ ಕಾಯ್ದುಕೊಂಡಿದ್ದು,  ಬೆಳಗಾವಿಯು ಎರಡನೇ ಸ್ಥಾನವನ್ನು ಕಾಯ್ದುಕೊಂಡಿರುವುದು  ಹೆಮ್ಮೆಯ ಸಂಗತಿ.

ಸಾಂಬ್ರಾ ವಿಮಾನ ನಿಲ್ದಾಣದಿಂದ 492  ವಿಮಾನಗಳ ಹಾರಾಟ:-

ಮೇ ತಿಂಗಳಲ್ಲಿ  ಬೆಂಗಳೂರು ಅಂತರಾಷ್ಟ್ರಿಯ ವಿಮಾನ ನಿಲ್ದಾಣದಿಂದ 3,97,085 ಜನ ಪ್ರಯಾಣ ಬೆಳೆಸಿದರೆ, 6356 ವಿಮಾನಗಳು ಹಾರಾಟ ಆಗಿ, ಬೆಂಗಳೂರು ಮೊದಲ ಸ್ಥಾನದಲ್ಲಿದೆ.‌ ಅದೇ ರೀತಿ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಿಂದ 492  ವಿಮಾನಗಳ ಹಾರಾಟ ಆಗಿ ರಾಜ್ಯದಲ್ಲಿಯೇ ಎರಡನೆಯ ಸ್ಥಾನದಲ್ಲಿದೆ. ಸಾಂಬ್ರಾ ವಿಮಾನ ನಿಲ್ದಾಣದಿಂದ ಮೇ ತಿಂಗಳಲ್ಲಿ 11,271  ಜನರು ಪ್ರಯಾಣ ಬೆಳೆಸಿದ್ದಾರೆ. ‌ ಇನ್ನೂ ಮಂಗಳೂರು ಅಂತರಾಷ್ಟ್ರೀಯ ವಿಮಾನ  ನಿಲ್ದಾಣದಿಂದ 23,412 ಜನ ಪ್ರಯಾಣ ಬೆಳೆಸಿದ್ದು,  440 ವಿಮಾನಗಳ ಹಾರಾಟ ಆಗಿದೆ.‌
ಪ್ರಸ್ತುತ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಿಂದ ದೇಶದ 10 ನಗರಗಳಿಗೆ ವಿಮಾನ  ತೆರಳುತ್ತಿದ್ದು, ಮುಂದಿನ ದಿನಗಳಲ್ಲಿ ಪುಣೆಗೆ ಮತ್ತೆ ಬೆಳಗಾವಿಯಿಂದ ವಿಮಾನ ಹಾರಾಟ ನಡೆಯಲಿದೆ. ಜತೆ ನಾಸಿಕ್ ಗೆ ವಿಮಾನ ಸೇವೆ ಪ್ರಾರಂಭ ಆಗಲಿದೆ.////

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');