ಪೆಟ್ರೋಲ್ ಹಾಕಿಸಿಕೊಳ್ಳುವ ವಿಚಾರಕ್ಕೆ ಗಲಾಟೆ : ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಮೂವರು

0

ಚಾಮರಾಜನಗರ : ಪೆಟ್ರೋಲ್ ಹಾಕಿಸಿಕೊಳ್ಳುವ ವಿಚಾರಕ್ಕೆ ಬೈಕ್ ಸವಾರನನ್ನು ಮೂರು ಮಂದಿ ಹಿಗ್ಗಾಮುಗ್ಗಾ ಥಳಿಸಿದ ಘಟನೆ ನಡೆದಿದೆ.

ಯುವಕನ ತಲೆ ಹಿಡಿದು ಪೆಟ್ರೋಲ್ ಪಂಪ್​ಗೆ ಗುದ್ದಿಸಿ ಹಲ್ಲೆ ಮಾಡಲಾಗಿದೆ. ಅಲ್ಲದೇ ನೆಲಕ್ಕೆ ಕೆಡಿವಿಕೊಂಡು ತಲೆಯನ್ನು ನೆಲಕ್ಕೆ ಗುದ್ದಿಸಿ ಮನಬಂದಂತೆ ಥಳಿಸಲಾಗಿದೆ. ಹಲ್ಲೆ ನಡೆಸುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಪಟ್ಟಣದ ಧಾನ್ಯಲಕ್ಷ್ಮಿ ಪೆಟ್ರೋಲ್ ಬಂಕ್​ನಲ್ಲಿ ಮೂರು ದಿನಗಳ ಹಿಂದೆ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಯುವಕನಿಗೆ ಥಳಿಸಿದ್ದಷ್ಟೇ ಅಲ್ಲದೇ ಮೊಬೈಲ್ ಒಡೆದು ಹಾಕಿ ಸ್ಕೂಟರ್​ನ್ನು ನೆಲಕ್ಕೆ ಬೀಳಿಸಿ ಜಖಂ ಮಾಡಿದ್ದಾರೆ.

ಗುಂಡ್ಲುಪೇಟೆ ಪಟ್ಟಣದ ಸಂಜು, ವೇಣು ಹಾಗೂ ಸ್ನೇಹಿತರು ಈ ಪುಂಡಾಟ ಮೆರೆದಿದ್ದಾರೆ ಎನ್ನಲಾಗಿದೆ. ಗಾಯಗೊಂಡ ಖಲೀಂ ಎಂಬ ಯುವಕನಿಂದ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಆರೋಪಿಗಳ ವಿರುದ್ಧ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.////

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');