ಕೃಷ್ಣಾ ನದಿ ನೀರಿಗೆ ಕೊಚ್ಚಿ ಹೋದವರ ಮನೆಗೆ ಶಾಸಕ ಮಹೇಶ ಕುಮಠಳ್ಳಿ ಭೇಟಿ ನೀಡಿ ಪರಿಹಾರ ವದಗಿಸುವ ಬರವಸೆ ನೀಡಿದರು

0
ಅಥಣಿ: ತಾಲೂಕಿನ ಹಲ್ಯಾಳ ಗ್ರಾಮದ ಒಂದೇ ಕುಟುಂಬದ ನಾಲ್ವರು ಸಹೋದರರು ಕೃಷ್ಣಾ ನದಿಯಲ್ಲಿ ಕೊಚ್ಚಿ ಹೋಗಿರುವುದು ದುರಂತದ ಸಂಗತಿಯಾಗಿದ್ದು ಇದು ನನಗೆ ತೀವ್ರ ತರಹ ನೋವನ್ನು ತಂದಿದೆ ಎಂದು ಶಾಸಕ ಮಹೇಶ ಕುಮಠಳ್ಳಿ ಸಂತಾಪ ವೇಕ್ತ ಪಡೆಸಿದರು.
 ಅವರು ಇಂದು ಮೃತ ಕುಟುಂಬದ ಹಲ್ಯಾಳ ಗ್ರಾಮದ ಮನೆಗೆ ಭೇಟಿ ಕೋಟ್ಟು ಮೃತ ಕುಟುಂಬಕ್ಕೆ ಸಾಂತ್ವನ ಹೇಳಿ,  ವಿಷಯ ತಿಳಿದ ತಕ್ಷಣ ಮನಸ್ಸಿಗೆ ನೋವಾಯಿತು, ಅದಕ್ಕಾಗಿ ದಾವಿಸಿ ಬಂದಿದ್ದು, ಮೃತ ಕುಟುಂಬಕ್ಕೆ ಸರಕಾರದ ಗೈಡಲೈನ್ಸದ ಪ್ರಕಾರ ಸಾಧ್ಯವಾದಷ್ಟು ಹೆಚ್ಚಿನ ಪರಿಹಾರದ ಕುರಿತು ತಹಶೀಲ್ದಾರ ಮತ್ತು ಸಮಾಜ ಇಲಾಖೆ ಅಧಿಕಾರಿ ಅವರೊಂದಿಗೆ ಚರ್ಚಿಸಿದ್ದು, ದುಃಖದಲ್ಲಿರು ಸಂತ್ರಸ್ತ ಕುಟುಂಬಕ್ಕೆ ನನ್ನ ಸಾಂತ್ವಾನವು ಮತ್ತು ಅವರಿಗೆ ತನು ಮನ ಧನದಿಂದ ಸಹಾಯ ನೀಡುವ ಬರವಸೆ ನೀಡಿದರಷ್ಟೆಲ್ಲದೆ  ಈಗಾಗಲೆ ಡಿಸಿಎಂ ಲಕ್ಷ್ಮಣ ಸವದಿಯವರೊಂದಿಗೆ ಮಾತನಾಡಿದ್ದು ಅವರ ಸಹಕಾರದಿಂದ ಮುಖ್ಯಮಂತ್ರಿ ವಿಪತ್ತು ನಿಧಿಯಿಂದ ಪರಿಹಾರ ಒದಗಿಸಲು ಪ್ರಯತ್ನಿಸುತ್ತೆವೆ  ಎಂದರು.
       ಇದೇ ವೇಳೆ ಗ್ರಾಮ ಪಂಚಾಯತಿ ಅಧ್ಯಕ್ಷ ಮುದಕ್ಕಣ ಶೇಗುಣಸಿ  ಮಾತನಾಡಿ, ಬನಸೋಡೆ ಕುಟುಂಬದ ನಾಲ್ವರು ಸಹೋದರರು ಕೃಷ್ಣಾ ನದಿಯಲ್ಲಿ ಕೊಚ್ಚಿ ಹೋಗಿ ಮೃತರಾದವರು ಮನೆಯ ಆದಾರವಾಗಿದ್ದರು ಅವರೆ ಇಲ್ಲದಾದಾಗ ಮನೆ ಸ್ಥಂಬವೆ ಕುಸಿದಂತಾಗಿದೆ ಅದಕ್ಕಾಗಿ ಸಂತ್ರಸ್ತ ಕುಟುಂಬಕ್ಕೆ ಸರಕಾರದ ಹೆಚ್ಚಿನ ಪರಿಹಾರ ಒದಗಿಸುವಂತೆ ಶಾಸಕರಲ್ಲಿ ವಿನಂತಿಸಿದರು.
ಗ್ರಾಮಸ್ಥರು ಮೃತ ಕುಟುಂಬಕ್ಕೆ ಹೆಚ್ಚಿನ ಪರಿಹಾರ ಒದಗಿಸುವಂತೆ ಆಗ್ರಹಿಸಿದರು.
    ಈ ವೇಳೆ ತಹಶೀಲ್ದಾರ ದುಂಡಪ್ಪಾ ಕೋಮ್ಮಾರ, ಸಮಾಜ ಕಲ್ಯಾಣ ಅಧಿಕಾರಿ ಪ್ರವೀಣ ಪಾಟೀಲ, ಡಿವೈಎಸ್ಪಿ ಎಸ್.ವಿ ಗಿರೀಶ, ಸಿಪಿಐ ಶಂಕರಗೌಡ ಬಸನಗೌಡರ, ಗ್ರಾ.ಪಂ.ಅಧ್ಯಕ್ಷ ಮುದಕ್ಕನ್ನ ಶೇಗುಣಸಿ, ಕುಮಾರ ಪಾಟೀಲ, ಮಹಾದೇವ ಮಡಿವಾಳ, ಸುರೇಶ ವಾಡೇದ, ಗೌತಮ ಬನಸೊಡೆ, ಸದಾಶಿವ ಬನಸೊಡೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');