ವೈದ್ಯರು, ಪತ್ರಕರ್ತರ ಕಾಯಕ ಪವಿತ್ರವಾದುದು

0

ಬೆಳಗಾವಿ: ಸಕಾಲದಲ್ಲಿ ಜೀವದಾನ ನೀಡುವ ವೈದ್ಯ ವೃತ್ತಿ ಹಾಗೂ ಜಗತ್ತಿನ ಆಗುಹೋಗುಗಳ ಅರಿವು ನೀಡುವ ಪತ್ರಕರ್ತರ ಕಾಯಕ ಅತ್ಯಂತ ಪವಿತ್ರವಾದುದು ಎಂದು ಸಾಮಾಜಿಕ ಮುಖಂಡ ಬಾಹುಬಲಿ ಜನಗೌಡ ಹೇಳಿದರು..
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ.ಟ್ರಸ್ಟ್ ಖಾಸಬಾಗ ಘಟಕದ ವತಿಯಿಂದ ಅಲಾರವಾಡದ ಶ್ರೀ ಲಕ್ಷ್ಮೀದೇವಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ರಾಷ್ಟ್ರೀಯ ವೈದ್ಯರ ಹಾಗೂ ಪತ್ರಿಕಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವೃತ್ತಿಯ ಜತೆ ಜನಪರತೆಯ ಪ್ರವೃತ್ತಿಯನ್ನು ಕಾಯ್ದುಕೊಂಡು ಹೋದಾಗ ಮಾತ್ರ ಸಮಾಜದಲ್ಲಿ ವೃತ್ತಿ ಹಾಗೂ ವೈಯಕ್ತಿಕ ಗೌರವ ಲಭಿಸುತ್ತದೆ. ಶೀಲ, ಸೌಜನ್ಯ, ಪ್ರಾಮಾಣಿಕತೆಗಳು ವೃತ್ತಿ ಗೌರವವನ್ನು ಎತ್ತಿ ಹಿಡಿಯುತ್ತವೆ ಎಂದು ಅವರು ಹೇಳಿದರು.
ಡಾ. ಗೋಪಾಲ ಅಲಖನೂರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವೃತ್ತಿಯನ್ನು ಗೌರವಿಸುವವನಿಗೆ ಸಮಾಜ ಗೌರವಿಸುತ್ತದೆ. ನಾವು ಮಾಡುವ ವೃತ್ತಿಯಲ್ಲೇ ದೇವರನ್ನು ಕಾಣುವ ಸ್ವಭಾವ ಹೊಂದಿದ್ದರೆ ಜೀವನದಲ್ಲಿ ಧನ್ಯತಾ ಭಾವ ಪ್ರಾಪ್ತಿಯಾಗುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ಡಾ. ಜಗತ್ ಶಂಕರಗೌಡ, ಪತ್ರಕರ್ತರಾದ ರಮೇಶ ಮಗದುಮ್ಮ ಹಾಗೂ ಮನೋಹರ ಕಮ್ಮಾರ ಭಾಗವಹಿಸಿದ್ದರು.
ಸ್ಥಳೀಯ ಮುಖಂಡರಾದ ಸುನೀಲ ಜನಗೌಡ, ಜಗಪಾಲ ಜನಗೌಡ, ಅನಿತಾ ಜನಗೌಡ, ಆಶಾ ಜಿರಾಳೆ, ಆರ್ಥಿಕ ಸಾಕ್ಷರತಾ ಕೇಂದ್ರದ ಸಮಾಲೋಚಕ ಅನಿಲ ಚನ್ನಗೋಡಿ ಹಾಜರಿದ್ದರು.
ಕಾರ್ಯಕ್ರಮದಲ್ಲಿ ವೈದ್ಯರು ಹಾಗೂ ಪತ್ರಕರ್ತರನ್ನು ಸನ್ಮಾನಿಸಲಾಯಿತು. ಖಾಸಬಾಗ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜ್ಞಾನವಿಕಾಸ ಸಮನ್ವಯಾಕಾರಿ ಗಂಗೂಬಾಯಿ ಜಗತಾಪ ಪ್ರಾಸ್ತಾವಿಕ ಮಾತನಾಡಿ ನಿರೂಪಿಸಿದರು. ವಡಗಾಂವ ವಲಯ ಮೇಲ್ವಿಚಾರಕಿ ವನಿತಾ ನಾಯ್ಕ ಸ್ವಾಗತಿಸಿದರು. ಸೇವಾ ಪ್ರತಿನಿಧಿ ಭಾರತಿ ಜನಗೌಡ ವಂದಿಸಿದರು.

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');