ರಾಷ್ಟ್ರೀಯ ಶಿಕ್ಷಣ ನೀತಿ 2020 ಕುರಿತು ಸಿದ್ಧೇಶ್ವರ ಶ್ರೀಗಳ ಜೊತೆಚರ್ಚೆ

0

 

ಸಮೀಪದ ಹಿರಾಶುಗರತಾಂತ್ರಿಕ ಮಹಾವಿದ್ಯಾಲಯದಲ್ಲಿಗುರುವಾರ ದಿನಾಂಕ: 01-07-2021 ಪರಮ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮಿಜಿಜ್ಞಾನಯೋಗಾಶ್ರಮ ವಿಜಯಪುರಅವರು ಬೇಟಿ ನೀಡಿದರು. ಇದೇ ಸಂದರ್ಭದಲ್ಲಿರಾಷ್ಟ್ರೀಯ ಶಿಕ್ಷಣ ನೀತಿ 2020ರ ಕುರಿತುಸಮಗ್ರಮಾಹಿತಿಯನ್ನುಕಾಲೇಜಿನ ಪ್ರಾಂಶುಪಾಲರಾದಡಾ|| ಎಸ್.ಸಿ.ಕಮತೆಯವರು ಶ್ರೀಗಳ ಹಾಗೂ ಉಪಸ್ಥಿತರಿದ್ದ ಎಲ್ಲಗಣ್ಯರಿಗೆ ಮಂಡಿಸಿ ಚರ್ಚೆಗೆಅನುವುಮಾಡಿಕೊಟ್ಟರು.

ತದನಂತರ ಶಿಕ್ಷಣ ನೀತಿಯಧ್ಯೇಯ ಮತ್ತು ಉದ್ದೇಶಗಳನ್ನು ಮುಕ್ತಕಂಠದಿಂದ ಶ್ಲಾಘಿಸಿದ ಶ್ರೀಗಳು ಈ ಶಿಕ್ಷಣ ನೀತಿಯ ಪ್ರತಿಫಲ ಸಮಾಜಕ್ಕೆದೊರಕಬೇಕಾದರೆ ಶಿಕ್ಷಕರು ಅತ್ಯಂತ ಪ್ರಾಮಾಣಿಕತೆ ಹಾಗೂ ಶ್ರದ್ಧೆಯಿಂದ ಕೆಲಸಮಾಡಬೇಕಾಗುವುದೆಂದುಅಭಿಪ್ರಾಯಪಟ್ಟರು. ಶ್ರೀಗಳು ಚರ್ಚೆಯನ್ನು ಮುಂದುವರೆಸುತ್ತಇತಿಹಾಸದ ತಕ್ಷಶಿಲಾ ಹಾಗೂ ನಾಳಂದಾ ವಿಶ್ವವಿದ್ಯಾಲಯಗಳನ್ನು ಹೋಲುವಂತ ಹೊಸ ವಿಶ್ವವಿದ್ಯಾಲಯಗಳು ಈ ಶತಮಾನದಲ್ಲಿ ಮರುಸ್ಥಾಪನೆಯಾಗಬೇಕೆಂದು ಆಶಿಸಿದರು.

ಇದೇ ಸಂದರ್ಭದಲ್ಲಿಚರ್ಚೆಯಲ್ಲಿ ಪಾಲ್ಗೊಂಡಿದ್ದಶ್ರೀ ಶಿವಲಿಂಗೇಶ್ವರ ಮಹಾಸ್ವಾಮಿಗಳು ಸಿದ್ಧಸಂಸ್ಥಾನ ಮಠ ನಿಡಸೋಸಿ,ಗಣ್ಯರಾದಶ್ರೀ ಎ.ಎಸ್. ಪಾಶ್ಚಾಪುರೆ ಹೈಕೋರ್ಟ ನ್ಯಾಯಾಧಿಶರು (ವಿಶ್ರಾಂತ), ಶ್ರೀ ಎ.ಬಿ. ಪಾಟೀಲ ಚೇರಮನ್ ಎಸ್.ಡಿ.ವ್ಹಿ.ಎಸ್. ಸಂಘ, ಸಂಕೇಶ್ವರ ಹಾಗೂ ಮಾಜಿ ಮಂತ್ರಿಗಳು ಕರ್ನಾಟಕ ಸರ್ಕಾರ ಹಾಗೂ ಇತರರು ಉಪಸ್ಥಿತರಿದ್ದು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');