ರಾಷ್ಟ್ರೀಯ ವೈದ್ಯರ ದಿನಾಚರಣೆ

0

ಇಂದಿನ ನಮ್ಮ ಯುವ ವೈದ್ಯರು ಆತ್ಮಾವಲೋಕನ ಹಾಗೂ ಸಮಯಪ್ರಜ್ಞೆಯಿಂದ ಕಾರ್ಯನಿರ್ವಹಿಸಬೇಕಿದೆ ಎಂದು ಯು ಎಸ್ ಎಮ್ ಕೆ ಎಲ್ ಇ ಯ ನಿರ್ದೇಶಕರಾದ ಡಾ. ಹೆಚ್ ಬಿ ರಾಜಶೇಖರ ಮಾತನಾಡುತ್ತಿದ್ದರು ಅವರು ಇಂದು ನಗರದ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಚರಕ ಸಭಾಭವನದಲ್ಲಿ ನಡೆದ ರಾಷ್ಟ್ರೀಯ ವೈದ್ಯರ ದಿನ ಆಚರನೆಯ ಅಂಗವಾಗಿ ಮಾತನಾಡುತ್ತಿದ್ದರು.ಪ್ರಸ್ತುತ ಕೊರೊನಾ ಸನ್ನಿವೇಶದಲ್ಲಿ ವೈದ್ಯ ವೃತ್ತಿಯು ವೈದ್ಯ ವೃತ್ತಿಯು ಸಂಜೀವಿಣಿಯಂತೆ ಕಾರ್ಯನಿರ್ವಹಿಸಲಾಗುತ್ತಿದೆ. ಇದರ ಜೊತೆಗೆ ನಮ್ಮ ನಾಗರಿಕರು ಕೂಡ ವೈದ್ಯರೂ ಕೂಡ ನಮ್ಮ ನಿಮ್ಮಂತೆ ಮನುಷ್ಯರು ಅವರ ಮಾನವೀಯ ಮೌಲ್ಯಗಳಿಂದ ವೈದ್ಯರನ್ನು ಆದರಿಸುವದು ನಾಗರಿಕರ ಆದ್ಯ ಕರ್ತವ್ಯವಾಗಿದೆ ಎಂದು ತಿಳುವಳಿಕೆ ನೀಡಿದರು.

ಇದೇ ಸಂದರ್ಬದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರೊಟರಿ ಕ್ಲಬ್ ಆಫ್ ಬೆಳಗಾವಿಯ ಮಾಜೀ ಅಧ್ಯಕ್ಷರಾದ ಶ್ರೀ ಶರದ ಪೈ ಅವರು ಮಾತನಾಡುತ್ತ ದೇವರು ಎಲ್ಲ ಕಡೆ ಇರಲು ಸಾಧ್ಯವಿಲ್ಲವೆಂದು ತಾಯಿಯನ್ನು ಸೃಷ್ಟಿಸಿದ ಅದೇ ರೀತಿ ಸರ್ವರಿಗೂ ಆರೊಗ್ಯವನ್ನು ಕಾಯ್ದುಕೊಳ್ಳಲು ವೈದ್ಯ ವೃತ್ತಿಯನ್ನು ಹಾಗೂ ಅದನ್ನು ನಿರ್ವಹಿಸಲು ವೈದ್ಯರನ್ನು ಸೃಷ್ಟಿಸಿದ್ದಾನೆ. ಪ್ರಸ್ತುತ ಕೊರೊನಾ ಸಮಯದಲ್ಲಿ ವೈದ್ಯರೆಂದರೆ ಹೆದರುತ್ತಿದ್ದ ಜನರು ಇಂದು ಅವರಲ್ಲಿ ನಿಜಕ್ಕೂ ದೇವರನ್ನು ಕಾಣುತ್ತಿದ್ದಾರೆ. ಕಳೆದ ಒಂದುವರೆ ವರ್ಷದಿಂದ ವೈದ್ಯಕೀಯ ವೃತ್ತಿಯು ನಾಗರಿಕ ಸಮಾಜದಮೇಲೆ ತನ್ನ ಋಣಭಾರವನ್ನು ಹೊರಿಸಿದೆ ಎಂದು ಅಭಿನಂದಿಸಿದರು.

ಇನ್ನೊಬ್ಬ ಅತಿಥಿಯಾಗಿ ಆಗಮಿಸಿದ್ದ ಕೆ ಎಲ್ ಇ ಹೊಮಿಯೊಪಾಥಿಕ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಮ್ ಎ ಉಡಚನಕರ ಅವರು ಸಾಂದರ್ಭಿಕವಾಗಿ ಮಾತನಾಡಿದರು. ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಸಾಂದರ್ಭಿಕ ನಿರ್ದೇಶಕರಾದ ಡಾ. ಬಿ ಎಸ್ ಮಹಾಂತಶೆಟ್ಟಿ ಸ್ವಾಗತಿಸಿದರು. ಸಾರ್ವಜನಿಕ ಸಂಪಕಾಧಿಕಾರಿ ಸಂತೋಷ ಇತಾಪೆ ನಿರೂಪಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ ವೈದ್ಯ ನಿಸ್ವಾರ್ಥ ಸೇವೆಯ ಕುರುಹಾಗಿ ಸಸಿಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ 80 ಕ್ಕೂ ಅಧಿಕ ವೈದ್ಯಕೀಯ ಸಿಬ್ಬಂದಿ ಮಾಸ್ಕ ಧರಿಸಿ ಅಂತರ ಕಾಯ್ದುಕೊಂಡು ಭಾಗವಹಿಸಿದ್ದರು.

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');