ಅಂಗಡಿ ತಾಂತ್ರಿಕ ಮತ್ತು ವ್ಯವಸ್ಥಾಪನಾ ಮಹಾವಿದ್ಯಾಲಯ, ಬೆಳಗಾವಿ ಅಂಗಡಿ ಮಹಾವಿದ್ಯಾಲಯದಲ್ಲಿ ಸಸಿ ನೆಡುವಕಾರ್ಯಕ್ರಮ

0
🌐 Belgaum News :

ಅಂಗಡಿ  ತಾಂತ್ರಿಕ ಮತ್ತು ವ್ಯವಸ್ಥಾಪನಾ ಮಹಾವಿದ್ಯಾಲಯ, ಬೆಳಗಾವಿ  ಅಂಗಡಿ   ಮಹಾವಿದ್ಯಾಲಯದಲ್ಲಿ  ಸಸಿ ನೆಡುವಕಾರ್ಯಕ್ರಮ

ಪರಿಸರ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರಕರ್ತವ್ಯ ಹಾಗೂ ಜವಾಬ್ದಾರಿಯಾಗಿದೆ. ಎಲ್ಲರೂ ಹೆಚ್ಚೆಚ್ಚು ಗಿಡಮರಗಳನ್ನು ಬೆಳೆಯಿಸಿ, ಉಳಿಸಿರಕ್ಷಿಸಬೇಕೆಂದುಗ್ರೀನ್ ಸೇವಿಯರ್ಸ್ ಸಂಸ್ಥಾಪಕ ಸಮೀರ ಮಜಲಿ ಹೇಳಿದರು.

ನಗರದಅಂಗಡಿತಾಂತ್ರಿಕ ಹಾಗೂ ವ್ಯವಸ್ಥಾಪನಾ ಮಹಾವಿದ್ಯಾಲಯದಲ್ಲಿ ಶುಕ್ರವಾರ, ದಿನಾಂಕ 02.07.2021ರಂದು ಸುರೇಶಅಂಗಡಿ ಶಿಕ್ಷಣ ಪ್ರತಿಷ್ಠಾಣ ಹಾಗೂ ಗ್ರೀನ್ ಸೇವಿಯರ್ಸ್ ಸಂಯೋಜನೆಯಡಿ ಮಹಾವಿದ್ಯಾಲಯದಕ್ಯಾಂಪಸ್‍ನÀಲ್ಲಿ ಸಸಿ ನೆಡುವಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈ ಸಸಿ ನೆಡುವಕಾರ್ಯಕ್ರಮದಲ್ಲಿ ಸಂಸದರು ಹಾಗೂ ಸುರೇಶಅಂಗಡಿ ಶಿಕ್ಷಣ ಪ್ರತಿಷ್ಠಾಣದಅಧ್ಯಕ್ಷರಾದ ಮಂಗಲ ಸುರೇಶಅಂಗಡಿ ಉಪಸ್ಥಿತರಿದ್ದರು.

ಸುರೇಶಅಂಗಡಿ ಶಿಕ್ಷಣ ಪ್ರತಿಷ್ಠಾಣದ ಸಂಸ್ಥಾಪಕ ದಿ.ಸುರೇಶಅಂಗಡಿಯವರು ಬೆಳಗಾವಿಯ ಜಿಲ್ಲೆಯ ಬೆನಕನಹಳ್ಳಿ, ಹಿಂಡಲಗಾ, ಮುತ್ನಾಳ, ತಾರಿಹಾಳ ಹಾಗೂ ಕೆ.ಕೆ. ಕೊಪ್ಪ ಎಂಬ 5 ಹಳ್ಳಿಗಳನ್ನು ಉನ್ನತ ಭಾರತಅಭಿಯಾನದಡಿದತ್ತುತೆಗೆದುಕೊಂಡಿದ್ದರು. ಒಂದು ಮಿಲಿಯನ್‍ಗ್ರೀನ್ಸ್‍ಯೋಜನೆ ಎಂಬ ಮಿನಿ ಪ್ರೊಜೆಕ್ಟ್‍ದಡಿ ಈ 5 ಹಳ್ಳಿಗಳಲ್ಲಿ ಚಿಕ್ಕ ಕಾಡುಗಳನ್ನು ನಿರ್ಮಿಸುವ ಪ್ರಯತ್ನದಡಿಗ್ರೀನ್ ಸೇವಿಯರ್ಸ್ ಸಂಸ್ಥಾಪಕ ಸಮೀರ ಮಜಲಿಯವರು ಸುರೇಶಅಂಗಡಿ ಶಿಕ್ಷಣ ಪ್ರತಿಷ್ಠಾಣದಜೊತೆಕಾರ್ಯ ನಿರ್ವಹಿಸಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಸುರೇಶಅಂಗಡಿ ಶಿಕ್ಷಣ ಪ್ರತಿಷ್ಠಾಣದ ನಿರ್ದೇಶಕಿಡಾ. ಸ್ಪೂರ್ತಿ ಪಾಟೀಲ, ಆಡಳಿತಾಧಿಕಾರಿ ರಾಜು ಜೋಶಿ, ಸಂತೋಷತುಬಚಿ, ಸ್ಕೂಲ ಆಪ್‍ಆರ್ಕಿಟೆಕ್ಚರ್ ಪ್ರಾಚಾರ್ಯಎಚ್.ಎಸ್. ಪಾಟೀಲ ಹಾಗೂ ಸುರೇಶಅಂಗಡಿ ಶಿಕ್ಷಣ ಪ್ರತಿಷ್ಠಾಣದಎಲ್ಲಶಿಕ್ಷಕ ಹಾಗೂ ಶಿಕ್ಷಕೇತರ ವೃಂದ ಹಾಗೂ ಎಚ್.ಡಿ.ಎಫ್.ಸಿ. ಬ್ಯಾಂಕಿನ ಪ್ರತಿನಿಧಿಗಳು, ರೋಟರಿಕ್ಲಬ್‍ಆಪ್ ವೇಣುಗ್ರಾಮದ ಸದಸ್ಯರು ಮುಂತಾದವರು ಉಪಸ್ಥಿತರಿದ್ದರು.

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');