ದರೂರ ಗ್ರಾಮ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ

0
ಅಥಣಿ: ತಾಲ್ಲೂಕಿನ ದರೂರ ಗ್ರಾಮ ಪಂಚಾಯತಿ ಬಿಜೆಪಿ ಬೆಂಬಲಿತ ಅಧ್ಯಕ್ಷ ರಾಗಿ ಮಹೇಶ್ ಬಾಬು ಕಾಂಬಳೆ ಹಾಗೂ ಉಪಾಧ್ಯಕ್ಷರಾಗಿ ತಂಗೆವ್ವ ಶಂಕರ್ ಐಗಳಿ ಅವಿರೋಧವಾಗಿ ಆಯ್ಕೆ ಆದರು.
ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷ
ಮಹೇಶ್ ಬಾಬು ಕಾಂಬಳೆ, ನಾವು ಗ್ರಾಮದ ಅಭಿವೃದ್ಧಿಗಾಗಿ ಪಕ್ಷದ ಬೇಧ ಮರೆತು ಜನರ ಹಿತದೃಷ್ಟಿಯಿಂದ ಗ್ರಾಮದ ಜನರ ಕಷ್ಟಗಳಿಗೆ ಸರ್ವ ಸದಸ್ಯರೆಲ್ಲರೂ ಕೂಡಿ ಸ್ಪಂದಿಸುತ್ತೇವೆ. ಸರ್ಕಾರದ ಯೋಜನೆಗಳನ್ನು ಪಕ್ಷಾತೀತವಾಗಿ ನೈಜ ಫಲಾನುಭವಿಗಳಿಗೆ ದೊರಕುವಂತೆ ಮಾಡುವದರ ಜೊತೆಗೆ ಗ್ರಾಮದಲ್ಲಿ ಮೂಲಭೂತ ಸೌಲಭ್ಯಗಳಾದ ಶುದ್ದ ಕುಡಿಯುವ ನೀರು,ಬೀದಿ ದೀಪ,ರಸ್ತೆ ಮತ್ತು ಚರಂಡಿ ವ್ಯವಸ್ಥೆಯ ಜೊತೆಗೆ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಿದ್ದೇವೆ ಎಂದು ಹೇಳಿದರಲ್ಲದೆ
ತಮ್ಮನ್ನು  ಅಧ್ಯಕ್ಷರು ಮತ್ತು ಉಪಾಧ್ಯಕ್ಷರಾಗಿ ಆಯ್ಕೆ ಮಾಡಿದ ಇನ್ನುಳಿದ ಸದಸ್ಯರಿಗೆ ಹಾಗೂ ಗ್ರಾಮದ ಜನತೆಗೆ ಕೃತಜ್ಞತೆ ಸಮರ್ಪಿಸಿದರು.
ಚುನಾವಣಾ ಅಧಿಕಾರಿ ಉದಯ್ ಪಾಟೀಲ್, ರವಿ ಬಂಗಾರಪ್ಪನವರ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಎಸ್. ಎಂ. ಬರಬರೇ, ಸದಸ್ಯರುಗಳಾದ ಮಹೇಶ್ ಡವಳೇಶ್ವರ್, ಶಾಂತಾ ಅಶೋಕ್ ಖುರ್ದ್, ಸುರೇಖಾ ಮಹೇಶ್ ಬೇನಾಡಿ, ವೃಷಭ ನಾಯಿಕ್, ಪ್ರೇಮಾ ಕಾಂಬಳೆ, ಸಿದ್ದಪ್ಪ ದಳವಾಯಿ, ಅಪ್ಪಸಾಬ ಸದಾಶಿವ ಹಳ್ಳೂರ್, ಶೋಭಾ ನೇಮಿನಾಥ್ ಅಸ್ಕಿ, ಹೌಸವ್ವ ಶಂಕರ್ ಕಾಂಬಳೆ,
ಅಸ್ಮಾ ಆರ್ ಬಿಜಾಪುರ್, ಆಯಿಷಾ ಮುಲ್ಲಾ, ರಾಜಶ್ರೀ ಎಮ್ ಬಾಳಿಗೇರಿ, ಮಹದೇವ್ ಮಲ್ಲಪ್ಪ ಕಲ್ಲೋಳಿ, ಮತ್ತು ಬಿಜೆಪಿ ಅಥಣಿ ಮಂಡಲ ಅಧ್ಯಕ್ಷ ಅಣ್ಣಾಸಾಬ ನಾಯಿಕ್, ಗ್ರಾಮದ ಹಿರಿಯರಾದ ಜಗದೀಶ್ ದಳವಾಯಿ, ಗುರುನಿಂಗ್ ಗುಮತಾಜ. ಗುರುರಾಜ ಗಳತಗಿ,ಪ್ರಕಾಶ ತೇಲಿ, ಪುಟ್ಟು ಹಿರೇಮಠ, ಧರಿಗೌಡ ಬಸಗೌಡರ್, ಅಮೂಲ ನಾಯಿಕ ,ಮಹಾತೇಶ ಕಾಂಬಳೆ, ಗುರುರಾಜ ಗಳತಗಿ, ಸುರೇಶ ಮಂಗಸೂಳಿ,ಅಬಿಜೀತ ದಳವಾಯಿ, ಮುರಗೇಶ ಸಿಂಗೆ, ಸೇರಿದಂತೆ ಹಲವರು ಉಪಸ್ಥಿತರಿದ್ದರು.
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');