ಎರಡುವರೆ ಸಾವಿರ ಕಾರ್ಮಿಕರಿಗೆ ಉಚಿತ ಪಡಿತರ ಕಿಟ್ ವಿತರಣೆ ಮಾಡಿದ ಮಹೇಶ ಕುಮಠಳ್ಳಿ

0
ಅಥಣಿ: ತಾಲೂಕಿನ ಕಾರ್ಮಿಕರಿಗೆ ತಾಲೂಕು ಕಾರ್ಮಿಕ ಇಲಾಖೆ ವತಿಯಿಂದ ಪಡಿತರ ಕಿಟ್ ಗಳನ್ನು ಉಚಿತವಾಗಿ ವಿತರಿಸಲಾಯಿತು. ಕೊರೊನಾ ಸಂಕಷ್ಟದ ಸಮಯದಲ್ಲಿ ಉದ್ಯೋಗ ಇಲ್ಲದೆ ಆರ್ಥಿಕವಾಗಿ ಕುಸಿದ ಕಾರ್ಮಿಕ ಕುಟುಂಬಗಳಿಗೆ ಸರ್ಕಾರದಿಂದ ಬಂದ ಕಿಟ್ ಗಳನ್ನು ವಿತರಿಸಲಾಯಿತು. ಅಥಣಿ ಪಟ್ಟಣದ ಎ. ಪಿ. ಎಮ್. ಸಿ. ಆವರಣದಲ್ಲಿ ಸುಮಾರು ಎರಡು ಸಾವಿರಕ್ಕೂ ಅಧಿಕ ಕಾರ್ಮಿಕರಿಗೆ ಪಡಿತರ ಕಿಟ್ ವಿತರಣೆ ಮಾಡಲಾಯಿತು.
ಅಥಣಿ ಶಾಸಕ ಹಾಗೂ ಕೊಳಗೇರಿ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷ ಮಹೇಶ್ ಕುಮಠಳ್ಳಿ ವಿತರಣೆ ಮಾಡಿದರು ಪಡಿತರ ಕಿಟ್ ನಲ್ಲಿ ತಲಾ ಐದು ಕೆಜಿ ಅಕ್ಕಿ,ಒಂದು ಕೆಜಿ ಎಣ್ಣೆ, ಒಂದು ಕೇಜಿ ಅವಲಕ್ಕಿ, ಖಾರದ ಪುಡಿ, ಒಂದು ಕೇಜಿ ಬೇಳೆ,ಇಂದು ಕೆಜಿ ಸಕ್ಕರೆ, ಒಂದು ಕೆಜಿ ರವೆ, ಒಂದು ಕೆಜಿ ಉಪ್ಪು,ಒಟ್ಟು ಹದಿಮೂರು ವಸ್ತುಗಳ ಪಡಿತರ ಕಿಟ್ ವಿತರಣೆ ಮಾಡಲಾಯಿತು.
ಈ ವೇಳೆ ಮಾತನಾಡಿದ ಅಥಣಿ ಶಾಸಕ ಹಾಗೂ ಕೊಳಗೇರಿ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷ ಮಹೇಶ ಕುಮಠಳ್ಳಿ ಲಾಕ್ ಡೌನ ಸಮಯದಲ್ಲಿ ಉದ್ಯೋಗ ಇಲ್ಲದೆ ಬಡ ಕುಟುಂಬದ ಕಾರ್ಮಿಕರು ಪರದಾಡುವಂತಾಗಿದ್ದು ಸರ್ಕಾರದಿಂದ ಬಂದ ಮೂರು ಸಾವಿರ ರೂಪಾಯಿ ಅನುದಾನ ಸೇರಿದಂತೆ ಕಾರ್ಮಿಕ ಕುಟುಂಬದ ಸಹಾಯಕ್ಕೆ ಸರ್ಕಾರ ಬದ್ದವಾಗಿದ್ದು ರಾಜ್ಯದ ಲಕ್ಷಾಂತರ ಕುಟುಂಬಗಳಿಗೆ ಮುಖ್ಯಮಂತ್ರಿ ಬಿ ಎಸ್ ವೈ ನೇತೃತ್ವದ ಸರ್ಕಾರ ಆಸರೆಯಾಗಿದೆ ಅಥಣಿ ತಾಲೂಕಿನ ಸುಮಾರು ಎರಡು ಸಾವಿರದ ಐದನೂರು ಕಾರ್ಮಿಕರಿಗೆ ಸಹಾಯಧನ ಮತ್ತು ಪಡಿತರ ಕಿಟ್ ವಿತರಣೆ ಮಾಡಲಾಗಿದೆ ಎಂದರು.
ಈ ವೇಳೆ ಮಾತನಾಡಿದ ಕಾರ್ಮಿಕ ಇಲಾಖೆ ಅಧಿಕಾರಿ ವಿಲ್ಸನ್ ಡಿಸೋಜಾ ಅಥಣಿ ತಾಲ್ಲೂಕಿನಲ್ಲಿ ಸುಮಾರು ನಾಲ್ಕುವರೆ ಸಾವಿರ ಕಾರ್ಮಿಕರು ನೊಂದಾಯಿತರಾಗಿದ್ದು ಸರ್ಕಾರದಿಂದ ವಿತರಣೆ ಮಾಡಿದ ಎರಡುವರೆ ಸಾವಿರ ಪಡಿತರ ಕಿಟ್ ವಿತರಣೆ ಮಾಡಲಾಗಿದ್ದು ಮುಂಬರುವ ದಿನಗಳಲ್ಲಿ ಸರ್ಕಾರದ ಎಲ್ಲ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಲಾಗುವದು ಎಂದರು.
ಈ ವೇಳೆ ಅಥಣಿ ಶಾಸಕ ಮಹೇಶ್ ಕುಮಠಳ್ಳಿ, ತಹಶಿಲ್ದಾರ ದುಂಡಪ್ಪ ಕೋಮಾರ, ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ರವಿ ಬಂಗಾರಪ್ಪನವರ, ಮಹಾದೇವ ಬಿರಾದಾರ, ಪ್ರವೀಣ ಪಾಟೀಲ, ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');