ಬನಸೋಡೆ ಕುಟುಂಬಕ್ಕೆ ವೈಯುಕ್ತಿಕ ಪರಿಹಾರ ಕೊಟ್ಟ ಡಿಸಿಎಮ್ ಲಕ್ಷ್ಮಣ ಸವದಿ

0
🌐 Belgaum News :
ಅಥಣಿ: ತಾಲ್ಲೂಕಿನ ಹಲ್ಯಾಳ ಗ್ರಾಮದ ಕೃಷ್ಣಾ ನದಿಯಲ್ಲಿ ನಾಲ್ಕು ಜನ ಸಹೋದರರು ಆಕಸ್ಮಿಕವಾಗಿ ಮುಳುಗಿ ಮೃತಪಟ್ಟ ಹಿನ್ನೆಲೆಯಲ್ಲಿ ಹಲವು ಜನಪ್ರತಿನಿದಿಗಳು ಬನಸೋಡೆ ಕುಟುಂಬ ಸದಸ್ಯರನ್ನು ಭೇಟಿಯಾಗಿ ಸಂತಾಪ ವ್ಯಕ್ತಪಡಿಸುತ್ತಿದ್ದು ಇಂದು ಡಿಸಿಎಮ್ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಮತ್ತು ಅಥಣಿ ಶಾಸಕ ಮಹೇಶ ಕುಮಠಳ್ಳಿ ಬನಸೋಡೆ ಕುಟುಂಬಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದರು.
 ಈ ವೇಳೆ ಮೃತಪಟ್ಟ ಸಹೋದರರ ತಂದೆ ಗೋಪಾಲ ಅವರೊಂದಿಗೆ ಮಾತನಾಡಿ ಡಿಸಿಎಮ್ ಲಕ್ಷ್ಮಣ ಸವದಿ ವೈಯುಕ್ತಿಕವಾಗಿ ಎರಡು ಲಕ್ಷ ರೂಪಾಯಿ ಪರಿಹಾರ ನೀಡಿದರು.ಈ ವೇಳೆ ಸಂತಾಪ ಸೂಚಿಸಿ ಮಾಧ್ಯಮಗಳಿಗೆ  ಮಾತನಾಡಿದ ಡಿಸಿಎಮ್ ಲಕ್ಷ್ಮಣ ಸವದಿ ಪುತ್ರಶೋಕದಲ್ಲಿ ಇರುವ ವಯೋವೃದ್ದ ತಂದೆ ತಾಯಿಯ ದುಃಖ ದಲ್ಲಿ ನಾವು ಕೂಡ ಭಾಗಿಯಾಗಿದ್ದೇವೆ.
 ಕಾರಣಾಂತರಗಳಿಂದ ಹಲವು ಇಲಾಖೆಗಳ ಕಾರ್ಯ ನಿಮಿತ್ತವಾಗಿ ಬೆಂಗಳೂರಿನಲ್ಲಿ ಇದ್ದ ಸಮಯದಲ್ಲಿ ಘಟನೆ ನಡೆಯುತ್ತಿದ್ದಂತೆ ಹಲ್ಯಾಳ ಪಂಚಾಯತಿ ಅಧ್ಯಕ್ಷ ಮತ್ತು ಗ್ರಾಮದ ಹಿರಿಯರು ಪೋನ್ ಮೂಲಕ ತಿಳಿಸಿದ ವೇಳೆ ಜಿಲ್ಲಾಡಳಿತ, ಮತ್ತು ತಾಲೂಕು ಆಡಳಿತದೊಂದಿಗೆ ತಾವು ಹಾಗು ಶಾಸಕ ಮಹೇಶ ಕುಮಠಳ್ಳಿ ನಿರಂತರವಾಗಿ ಸಂಪರ್ಕದಲ್ಲಿ ಇದ್ದು
ಮಾಹಿತಿ ಪಡೆದಿದ್ದು ಮೊದಲು ಪರಶುರಾಮ ಗೋಪಾಲ ಬನಸೋಡೆ ನಂತರ ಉಳಿದ ಮೂರು ಜನರಾದ ಸದಾಶಿವ ಬನಸೋಡೆ, ಶಂಕರ ಬನಸೋಡೆ, ಧರೆಪ್ಪ ಬನಸೋಡೆ ಶವಗಳು ಮರುದಿನ ಪತ್ತೆಯಾಗಿದ್ದರಿಂದ ವೈಯುಕ್ತಿಕವಾಗಿ ಎರಡು ಲಕ್ಷ  ಶಾಸಕ ಮಹೇಶ ಕುಮಠಳ್ಳಿ 1 ಲಕ್ಷ ಮತ್ತು ತಾಲೂಕು ಆಡಳಿತದ ಅಧಿಕಾರಿಗಳು 4 ಲಕ್ಷ ರೂಪಾಯಿ ತಾತ್ಕಾಲಿಕವಾಗಿ ಪರಿಹಾರ ಕೊಟ್ಟಿದ್ದೇವೆ. ಸರ್ಕಾರದ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಿದ್ದೇವೆ ಎಂದರು.
ಮೃತ ಸಹೋದರರ ತಂದೆ ಗೋಪಾಲ ಬನಸೋಡೆ ಹಾಗೂ ತಾಯಿ ಶರಣವ್ವ ಬನಸೋಡೆ ಅವರಿಗೆ ಧೈರ್ಯ ತುಂಬಿದ ಡಿಸಿಎಮ್ ಲಕ್ಷ್ಮಣ ಸವದಿ ಬನಸೋಡೆ ಕುಟುಂಬದ ಉತ್ತಮ ನಡತೆ ಮತ್ತು ಕೌಟುಂಬಿಕ ಸ್ಥಿತಿಯನ್ನು ಆಧರಿಸಿ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ವೈಯುಕ್ತಿಕವಾಗಿ ಸಹಾಯಹಸ್ತ ಚಾಚುತ್ತಿರುವ ಬಗ್ಗೆ ಬನಸೋಡೆ ಕುಟುಂಬದ ಗೋಪಾಲ ಬನಸೋಡೆ ಅವರಿಗೆ ಮನವರಿಕೆ ಮಾಡಿದ್ದಲ್ಲದೆ ಸರ್ಕಾರದ ವಿಶೇಷ ಪರಿಹಾರಕ್ಕಾಗಿ ಪ್ರಯತ್ನಿಸುವ ಭರವಸೆ ನೀಡಿದರು.
ಈ ವೇಳೆ ಅಥಣಿ ಡಿವೈಎಸ್ಪಿ ಎಸ್. ವಿ ಗಿರೀಶ್, ತಾಲೂಕು ದಂಡಾಧಿಕಾರಿ ದುಂಡಪ್ಪ ಕೋಮಾರ, ತಾಲೂಕು ಪಂಚಾಯತಿ ಅಧಿಕಾರಿ ರವಿ ಬಂಗಾರಪ್ಪನವರ, ತಾಲೂಕು ವೈದ್ಯಾಧಿಕಾರಿ ಡಾ. ಬಿ.ಜಿ.ಕಾಗೆ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಪ್ರವೀಣ ಪಾಟೀಲ, ಉಪತಹಶಿಲ್ದಾರ ಮಹಾದೇವ ಬಿರಾದಾರ ಮತ್ತು ಪಂಚಾಯತಿ ಅಧ್ಯಕ್ಷ ಮುದಕಣ್ಣ ಶೇಗುಣಸಿ ಚಂದ್ರಕಾಂತ ಕಾಗವಾಡ, ಮಹಾದೇವ ಬಿಸಲನಾಯಕ, ಕುಮಾರಗೌಡ ಪಾಟೀಲ, ಬಾಳಪ್ಪ ಬಾಗಿ,ಅಣ್ಣಪ್ಪ ಬಾಗಿ,ಸಂಗಮೇಶ ಇಂಗಳಿ,ಸಿದ್ದಪ್ಪ ಲೋಕುರ, ಸಿದ್ದಪ್ಪ ಪಾಟೀಲ, ರಾಯಪ್ಪ ಬಾಗಿ, ಮುರಗೆಪ್ಪ ಜಾಬಗೌಡರ, ಸಂತೋಷ ಕಾಂಬಳೆ,ವಿಠ್ಠಲ ಕಾಂಬಳೆ ಮತ್ತು ಇತರರು ಉಪಸ್ಥಿತರಿದ್ದರು.
📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');