ಬುದ್ದವಿಹಾರದಲ್ಲಿ ಸಸಿನೆಟ್ಟು ವನಮಹೋತ್ಸವ ಆಚರಣೆ

0
ಅಥಣಿ: ಪಟ್ಟಣದ ಕನಕನಗರದಲ್ಲಿ ಇರುವ ಬುದ್ದವಿಹಾರದಲ್ಲಿ ಸಸಿಗಳನ್ನು ನೆಡುವ ಮೂಲಕ ವನಮಹೋತ್ಸವ ದಿನಾಚರಣೆಯನ್ನು ಅರಣ್ಯ ಇಲಾಖೆ ಮತ್ತು ಬುದ್ದವಿಹಾರ ಕಮೀಟಿ ವತಿಯಿಂದ ಆಚರಿಸಲಾಯಿತು. ಗಿಡ ಮರಗಳು ಪರಿಸರದಲ್ಲಿ ಸಮತೋಲನ ಕಾಯ್ದುಕೊಳ್ಳಲು ಸಹಕಾರಿ ಆಗಿದ್ದು ಮನುಷ್ಯ ಬದುಕಲು ಬೇಕಾದ ಆಮ್ಲಜನಕ ಉತ್ಪಾದನೆ ಮಾಡುವ ಮೂಲಕ ಸಹಕಾರಿ ಆಗಿವೆ. ಇತ್ತೀಚಿನ ದಿನಗಳಲ್ಲಿ ಗಿಡಮರಗಳನ್ನು ಕಡಿದು ಕಾಡನ್ನು ನಾಶ ಮಾಡುವ ಮೂಲಕ ಭೂಕಂಪ,ಸುನಾಮಿ,ಬರಗಾಲ ಸೇರಿದಂತೆ ಹಲವು ಅನಾಹುತಗಳು ನಡೆಯಲು ಮನುಷ್ಯ ಕಾರಣವಾಗುತ್ತಿದ್ದು ಜಾಗತಿಕ ತಾಪಮಾನ ಏರಿಕೆಯ ಕಾರಣದಿಂದ ಹಿಮಪಾತ ಸೇರಿದಂತೆ ಹಲವು ಆಘಾತಕಾರಿ ಘಟನೆಗಳು ನಡೆಯಲು ಮನುಷ್ಯನ ಕೃತ್ಯಗಳು ಕಾರಣವಾಗಿವೆ ಎಂದು ಪರಸುರಾಮ ತುಬಚಿ ಹೇಳಿದರು.
ಅಥಣಿ ಪಟ್ಟಣದ ಕನಕ ನಗರದಲ್ಲಿ ಇರುವ ಬುದ್ದವಿಹಾರದಲ್ಲಿ ಇಪ್ಪತ್ತೈದು ಸಸಿಗಳನ್ನು ನೆಟ್ಟು ನೀರುಣಿಸುವ ಮೂಲಕ ವನಮಹೋತ್ಸವ ದಿನವನ್ನು ಆಚರಿಸಲಾಯಿತು ಈ ವೇಳೆ ಮಾತನಾಡಿದ ಚಿಕೋಡಿ ಅರಣ್ಯ ಇಲಾಖೆಯ ಅಧಿಕಾರಿ ಸಂದೀಪ್ ಅಭ್ಯಂಕರ ಅವರು ಅರಣ್ಯ ಇಲಾಖೆಯಿಂದ ಹಲವು ಸಸಿಗಳನ್ನು ಉಚಿತವಾಗಿ ಮತ್ತು ಕೆಲವು ಸಸಿಗಳನ್ನು ಸಬ್ಸಿಡಿ ದರದಲ್ಲಿ ಕೊಡಲಾಗುತ್ತಿದ್ದು ರೈತರು,ಸಾರ್ವಜನಿಕರು, ವಿದ್ಯಾರ್ಥಿಗಳು ಸಸಿಗಳನ್ನು ನೆಟ್ಟು ಪೋಷಣೆ ಮಾಡುವ ಮೂಲಕ ಸುಂದರ ಮತ್ತು ಸ್ವಸ್ಥ ಸಮಾಜಕ್ಕೆ ತಮ್ಮ ಕೊಡುಗೆಯನ್ನು ನೀಡಲು ಮುಂದಾಗಬೇಕಾಗಿದೆ.
ಕಾರ್ಖಾನೆಗಳು, ವಾಹನಗಳು ಹೊತಹಾಕುವ ತ್ಯಾಜ್ಯ ಮತ್ತು ಇಂಗಾಲದ ಡೈಆಕ್ಸೈಡ್ ಅಂತಹ ವಸ್ತುಗಳಿಂದ ಪರಿಸರದಲ್ಲಿ ತಾಪಮಾನ ಹೆಚ್ಚುವ ಮೂಲಕ ಮಳೆ ಬೆಳೆ ಸರಿಯಾಗಿ ಆಗದೆ ಜನರು ಸಂಕಷ್ಟಕ್ಕೆ ಸಿಲುಕುವ ಸ್ಥಿತಿ ಎದುರಾಗಿದ್ದು ಹೆಚ್ಚಿನ ಪ್ರಮಾಣದಲ್ಲಿ ಗಿಡಮರಗಳನ್ನು ಬೆಳೆಸುವ ಮೂಲಕ ಆಮ್ಲಜನಕದ ಕೊರತೆಯನ್ನು ನೀಗಿಸಬಹುದಾಗಿದೆ ಎಂದರು.
ಈ ವೇಳೆ ಅರಣ್ಯ ಇಲಾಖೆ ಅಧಿಕಾರಿ ಪ್ರಶಾಂತ ಗಾಂಣಗೇರ, ಅಶೋಕ ಕಾಂಬಳೆ, ಆರ್. ಎಪ್. ಒ ರಾಜು ಕಾಂಬಳೆ,  ಶಿವಾನಂದ ದೊಡ್ಡಮನಿ, ರಮೇಶ ದೊಡ್ಡಮನಿ, ಶೊಮನಿಂಗ ನಿಡೊಂನಿ, ಬಾಹು ದೊಡ್ಡಮನಿ,  ರೇಖಾ ಘಟಕಾಂಬಳೆ, ಅಜೀತ ಬನಸೊಡೆ, ಟಿ.ಎಲ್ ಕಾಂಬಳೆ, ಅಣ್ಣಪಾ ಭಜಂತ್ರಿ, ಮಹಾಂತೇಶ ಬಾಡಗಿ, ಶಾಮ್ ಕಾಂಬಳೆ, ಹಲವಾರು ಉಪಸ್ಥಿತರಿದ್ದರು.
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');