ಎಸ್ಪಿ ಕಚೇರಿ ಮುಂದೆಯೇ ಕಾಮುಕನಿಗೆ ಮಹಿಳೆಯಿಂದ ಚಪ್ಪಲಿ ಏಟು

0
🌐 Belgaum News :

ಬೆಳಗಾವಿ : ತನ್ನನ್ನು ಚುಡಾಯಿಸಿ, ಹಿಂಬಾಲಿಸುತ್ತಿದ್ದ ಕಾಮುಕನಿಗೆ ಮಹಿಳೆ  ಚಪ್ಪಲಿ ಏಟು ನೀಡಿರುವ ಘಟನೆ ಇಲ್ಲಿನ ಎಸ್ಪಿ ಕಚೇರಿ ಮುಂದಿನ ರಸ್ತೆಯಲ್ಲಿ ಶನಿವಾರ ಸಂಜೆ ನಡೆದಿದೆ.

ಗೋಪಾಲ್ ಗುರನ್ನವರ ಮಹಿಳೆಯಿಂದ ಚಪ್ಪಲ್ಲಿ ಸೇವೆ ಮಾಡಿಸಿಕೊಂಡ ವ್ಯಕ್ತಿ.

ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮುಗಿಸಿ ಮನೆಗೆ ವಾಪಸ್ ಮರಳುವ ವೇಳೆಯಲ್ಲಿ ಕೆಲ ತಿಂಗಳಿಂದ ಹಿಂಬಾಗಲಿಸುತ್ತಿದ್ದನು. ಜತೆಗೆ ಸಿಳ್ಳೆ ಹೊಡೆಯುವ ಮೂಲಕ  ಚುಡಾಯಿಸುತ್ತಿದ್ದನು.

ಕೆಲವು ಬಾರಿ ಮನೆಯವರೆಗೂ ಸಹ ಬಂದು ಚುಡಾಯಿಸುತ್ತಿದ್ದು, ಹಲವು ಸಾರಿ ಎಚ್ಚರಿಕೆಯೂ ಸಹ ನೀಡಲಾಗಿದೆ. ಆದರೂ ಸಹ ತನ್ನ  ಹಿಂಬಾಲಿಸುವುದು ನಿಲ್ಲಿಸಿಲ್ಲ ಎಂದು ಮಹಿಳೆ ಆರೋಪಿಸಿ, ಚಪ್ಪಲಿ  ಏಟು ನೀಡಿದ್ದಾಳೆ.

ಮಹಿಳೆ ಹಾಗೂ ಆಕೆಯ ಪತಿ ಕಾಮುಕನಿಗೆ ನಡುರಸ್ತೆಯಲ್ಲೇ ಚಪ್ಪಲಿ ಸೇವೆ ಮಾಡಿದ್ದಾರೆ. ಬಳಿಕ ರಸ್ತೆ ಸವಾರರು ಸಹ ಮಹಿಳೆ ಆರೋಪಿಸಿರುವುದನ್ನು ಕಂಡು ವ್ಯಕ್ತಿಗೆ ಥಳಿಸಿದ್ದರು. ಯಾವಾಗ ಸಾರ್ವಜನಿಕರು  ಧರ್ಮದೇಟು ನೀಡುತ್ತಿದ್ದಂತೆ ಕಾಮುಕ ಅಲ್ಲಿಂದ ಕಾಲಿಕ್ಕಿತ್ತಿದ್ದಾನೆ.

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');