ವಿಷ ಕುಡಿಯುವ ನಾಟಕವಾಡಿದ ಜೋಡಿಗಳು : ದುರಾದೃಷ್ಟವಶಾತ್​ ಯುವತಿ ಸಾವು, ಯುವಕ ಸ್ಥಿತಿ ಗಂಭೀರ

0

ಲಿಂಗಂಪೇಟೆ(ಯೆಲ್ಲಾರೆಡ್ಡಿ): ಪೋಷಕರು ಮದುವೆಗೆ ಒಪ್ಪಲಿಲ್ಲ ಎಂದು ಯುವಜೋಡಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ತೆಲಂಗಾಣದ ಲಿಂಗಂಪೇಟೆಯಲ್ಲಿ ನಡೆದಿದೆ. ಆದರೆ ಘಟನೆಯಲ್ಲಿ ದುರಾದೃಷ್ಟವಶಾತ್​ ಯುವತಿ ಮೃತಪಟ್ಟಿದ್ದಾಳೆ.

ದಿವ್ಯಾ (17) ಮತ್ತು ರಾಜು (23) ಕಾಮರೆಡ್ಡಿ ಜಿಲ್ಲೆಯ ಲಿಂಗಂಪೇಟೆ ಮಂಡಲದ ಅಯಿಲಾಪುರ್​ ಗ್ರಾಮದವರು. ಇಬ್ಬರು ಒಂದು ವರ್ಷದಿಂದಲೂ ಪ್ರೀತಿಸುತ್ತಿದ್ದರು. ಆದರೆ, ಇಬ್ಬರ ಮದುವೆಗೆ ಹಿರಿಯರು ಒಪ್ಪಿರಲಿಲ್ಲ. ಇದರಿಂದ ಮನನೊಂದು ಗ್ರಾಮದ ಹೊರವಲಯದ ಜಮೀನಿಗೆ ತೆರಳಿ ಇಬ್ಬರು ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಈ ವಿಚಾರ ತಿಳಿದು ಕುಟುಂಬಸ್ಥರು ಜಮೀನಿಗೆ ಓಡಿ ಹೋಗಿದ್ದಾರೆ. ಈ ವೇಳೆ ಹೊಟ್ಟೆ ನೋವಿನಿಂದ ಒದ್ದಾಡುತ್ತಿದ್ದ ಇಬ್ಬರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಿಸದೇ ಮಾಧವಿ ಮೃತಪಟ್ಟರೆ, ರಾಜು ಸ್ಥಿತಿ ಗಂಭೀರವಾಗಿದೆ.

ಮಾಧವಿ 10ನೇ ತರಗತಿ ಪೂರ್ಣಗೊಳಿಸಿ ಮನೆಯಲ್ಲಿ ಉಳಿದಿದ್ದಳು. ರಾಜು 10ನೇ ತರಗತಿಯನ್ನು ಮುಗಿಸಿ ಕೆಲಸಕ್ಕಾಗಿ ದುಬೈಗೆ ಹೋಗಿದ್ದ. ಎರಡು ವರ್ಷಗಳ ಕಾಲ ದುಬೈನಲ್ಲಿದ್ದ. ಕೊರೊನಾ ಮೊದಲ ಅಲೆಯ ಲಾಕ್​ಡೌನ್​ ವೇಳೆ ಊರಿಗೆ ಹಿಂತಿರುಗಿದ್ದ. ಅಂದಿನಿಂದ ಮಾಧವಿ ಮತ್ತು ರಾಜು ಪ್ರೀತಿಸುತ್ತಿದ್ದರು ಎಂದು ಗ್ರಾಮಸ್ಥರು ಹೇಳಿದ್ದಾರೆ.////

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');