ನದಿಯಲ್ಲಿ ಮುಳುಗಿ ಬನಸೋಡೆ ಸೋದರರ ಸಾವು : ಮನೆಗೆ ತೆರಳಿ ಸಾಂತ್ವನ ಹೇಳಿದ ಜಿಲ್ಲಾಧಿಕಾರಿ

0
🌐 Belgaum News :

ಬೆಳಗಾವಿ : ಅಥಣಿ ಸಮೀಪದ ಹಲ್ಯಾಳದ ಶಂಕರ ಬನಸೋಡೆ ಮತ್ತು ಅವರ ಮೂವರು ಸಹೋದರರು ಇತ್ತೀಚೆಗೆ ಕೃಷ್ಣಾ ನದಿಯಲ್ಲಿ ಆಕಸ್ಮಿಕವಾಗಿ ಮುಳುಗಿ ದಾರುಣವಾಗಿ ಸಾವಿಗೀಡಾದ ಘಟನೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಮೃತರ ಮನೆಗೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.

ಹಲ್ಯಾಳ ಗ್ರಾಮದಲ್ಲಿರುವ ಬನಸೋಡೆ ಅವರ ಮನೆಗೆ ಭಾನುವಾರ (ಜು.4) ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಮೃತರ ತಂದೆಯವರಾದ ಗೋಪಾಲ ಬನಸೋಡೆ ಅವರಿಗೆ ಸಾಂತ್ವನ ಹೇಳಿದರು.

ಸರ್ಕಾರದಿಂದ ದೊರಕುವ ಸೌಲಭ್ಯಗಳನ್ನು ಕುಟುಂಬಕ್ಕೆ ದೊರಕಿಸಿಕೊಡಲಾಗುವುದು ಎಂದು ಭರವಸೆಯನ್ನು ನೀಡಿದರು.
ಇದಲ್ಲದೇ ಕುಟುಂಬದಲ್ಲಿ ಇರುವ ಮಕ್ಕಳಿಗೆ ಸರಕಾರದ ವಸತಿಯುತ ಶಾಲೆಗಳಲ್ಲಿ ಪ್ರವೇಶ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಹೇಳಿದರು.

ಅಥಣಿ ತಹಶೀಲ್ದಾರ ಸೇರಿದಂತೆ ಸ್ಥಳೀಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು./////

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');