ಗುಡ್ ನ್ಯೂಸ್: ನಿಟ್ಟುಸಿರು ಬಿಟ್ಟ ಬೆಳಗಾವಿ ಜನತೆ: 28 ಸೋಂಕು ದೃಢ, ಓರ್ವ ಸಾವು

0
🌐 Belgaum News :

ಬೆಳಗಾವಿ: ಜಿಲ್ಲೆಯಲ್ಲಿ  78 ದಿನಗಳ ಬಳಿಕ ಸೋಂಕಿನ ಅಬ್ಬರ ತಗ್ಗಿದ್ದು, ಬೆಳಗಾವಿ ಜನತೆ ನಿಟ್ಟುಸಿರು ಬಿಡುವಂತಾಗಿದೆ.‌

ನಿತ್ಯವೂ ಭೀತಿ ಹುಟ್ಟಿಸುತ್ತಿದ್ದ ಕೊರೋನಾ ಏಕಾಏಕಿ ಇಳಿಕೆ ಕಂಡಿದೆ. ಸೋಮವಾರದಿಂದ ಮಾರುಕಟ್ಟೆ ಮುಕ್ತವಾಗಲಿದ್ದು, ಜಿಲ್ಲೆಯ ಜನತೆಗೆ ಆರೋಗ್ಯ ಇಲಾಖೆ ಬುಲೆಟಿನ್ ಈ ಮೂಲಕ ಸಿಹಿ ಸುದ್ದಿ ನೀಡಿದೆ.

ಶನಿವಾರ ಸೋಂಕಿನ ಅಬ್ಬರ ಶತಕದಂಚಿನಲ್ಲಿತ್ತು. ಆದರೆ, ಭಾನುವಾರ ಪೂರ್ಣ ಪ್ರಮಾಣದಲ್ಲಿ ತಗ್ಗಿದೆ. 28  ಪಾಸಿಟಿವ್ ಕೇಸಗಳು ಪತ್ತೆಯಾಗಿದ್ದು, ಓರ್ವ ವ್ಯಕ್ತಿ ಕೊರೋನಾಗೆ ಬಲಿಯಾಗಿದ್ದಾರೆ.

ಒಟ್ಟು ಸೋಂಕಿತರ ಸಂಖ್ಯೆ 76152 ಕ್ಕೆ ಏರಿಕೆಯಾಗಿದೆ. ಇಲ್ಲಿವರೆಗೂ ಕೊರೋನಾದಿಂದ 794 ಜನರು ಸಾವನ್ನಪ್ಪಿದ್ದಾರೆ. 73625 ಮಂದಿ ಗುಣಮುಖರಾಗಿದ್ದಾರೆ.‌ 1733 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಲೂಕುವಾರು  ಸೋಂಕಿತರ ವಿವರ:-  ಬೆಳಗಾವಿ ನಗರ ಮತ್ತು ತಾಲೂಕು 16,  ಚಿಕ್ಕೋಡಿ 6, ಗೋಕಾಕ 1, ಹುಕ್ಕೇರಿ-03, ಕೊರೊನಾ ಪ್ರಕರಣಗಳು ಇಂದು ದಾಖಲಾಗಿವೆ.////

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');