ಜನರ ಸಂಕಷ್ಟ ಆಲಿಸಿದ ಸಂಸದ ಅಣ್ಣಾಸಾಬ ಜೊಲ್ಲೆ. ಅಥಣಿ ಮತ್ತು ಕಾಗವಾಡ ಮತಕ್ಷೇತ್ರದಲ್ಲಿ ಜನಸ್ಪಂದನ

0
ಅಥಣಿ: ತಾಲ್ಲೂಕಿನ  ನಂದಗಾಂವ, ಹೊಸಟ್ಟಿ, ಮುರಗುಂಡಿ,ಬಡಚಿ,ಕಟಗೇರಿ ಮುಂತಾದ ಗ್ರಾಮಗಳಲ್ಲಿ ಸಂಸದ ಅಣ್ಣಾಸಾಹೇಬ ಜೊಲ್ಲೆಯವರ ನೇತೃತ್ವದಲ್ಲಿ ಜನಸ್ಪಂದನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಹಲವು ಗ್ರಾಮಗಳಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮ ವೇಳೆ ಸಾಧ್ಯವಾದಷ್ಟು ಪರಿಹಾರಗಳನ್ನು ಸಂಸದರು ಸ್ಥಳದಲ್ಲೇ ಘೋಷಿಸಿದರು. ಹಲವು ಗ್ರಾಮಗಳಲ್ಲಿ ಸಂಸದರ ಅನುದಾನದಲ್ಲಿ ಸಮುಧಾಯ ಭವನ,ಮತ್ತು ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ಗ್ರಾಮಸ್ಥರು ಮನವಿಗಳನ್ನು ಸಲ್ಲಿಸಿದರು.
ಈ ವೇಳೆ ಕೃಷ್ಣಾ ನದಿ ದುರಂತದಲ್ಲಿ ಮೃತಪಟ್ಟ ಹಲ್ಯಾಳ ಗ್ರಾಮದ ಬನಸೋಡೆ ಕುಟುಂಬಕ್ಕೆ ಭೇಟಿ ನೀಡಿದ ಸಂಸದ ಅಣ್ಣಾಸಾಬ ಜೊಲ್ಲೆ ಸರ್ಕಾರದ ಪರಿಹಾರ ಕೊಡಿಸುವ ಭರವಸೆ ನೀಡಿ ದರಲ್ಲದೆ ನಿಮ್ಮೊಂದಿಗೆ ನಾವಿದ್ದೇವೆ ಎಂದು ಧೈರ್ಯ ತುಂಬಿದರು.
ನಂದಗಾಂವ ಗ್ರಾಮದ ನಡೆದ ಸಾರ್ವಜನಿಕರ ಅಹವಾಲು ಸಭೆಯಲ್ಲಿ ನರೇಗಾ ಯೋಜನೆಯ ದುರುಪಯೋಗ ಸಂಬಂಧ ವಾಗ್ವಾದ ನಡೆದು ಕೆಲಹೊತ್ತು ಜನಸ್ಪಂದನ ಸಭೆ ಗೊಂದಲದ ಗೂಡಾದ ಘಟನೆ ನಡೆಯಿತು. ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರಿಗೆ ಗ್ರಾಮಸ್ಥರು ಸಮುದಾಯ ಭವನ, ಮತ್ತು ರಸ್ತೆ ನಿರ್ಮಿಸಿಕೊಡುವಂತೆ ಮನವಿ ನೀಡಿ ಒತ್ತಾಯಿಸಿದರು,
ಆಗ ಅವರು ಈ ರಸ್ತೆಗಳನ್ನು ಗ್ರಾಮ ಪಂಚಾಯತಿಯಿಂದ ನರೇಗಾ ಯೋಜನೆಯಡಿ ಕಾಮಗಾರಿ ಕೈಗೊಂಡು ರಸ್ತೆ ನಿರ್ಮಿಸಿಕೊಳ್ಳಿ ನಾನು ಹಾಗೂ ಶಾಸಕ ಮಹೇಶ ಕುಮಠಳ್ಳಿ ಮತ್ತು ಡಿಸಿಎಂ ಲಕ್ಷ್ಮಣ ಸವದಿಯವರು ಸೇರಿ ಮುಖ್ಯ ರಸ್ತೆಗಳನ್ನು ಡಾಂಬರಿಕರಣಗೊಳಿಸುತ್ತೇವೆ ಎಂದು ಗ್ರಾಮಸ್ಥರಿಗೆ ಹೇಳಿದರು. ಗ್ರಾಮಸ್ಥರು ಗ್ರಾಮ ಪಂಚಾಯತಿಯಿಂದ ಯಾವ ಕಾಮಗಾರಿ ಕೈಗೊಳ್ಳುವದಿಲ್ಲಾ, ತಮ್ಮಿಂದ ರಸ್ತೆ ನಿರ್ಮಿಸಿಕೊಡಲು ಆಗುತ್ತೋ ಇಲ್ಲವೋ ಎಂದು ಪ್ರಶ್ನಿಸಿದರು. ಆಗ ಕೆಲ ಹೊತ್ತು ಸದಸ್ಯರು ಮತ್ತು ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆಯಿತು,
ಈ ವೇಳೆ ಸಂಸದ ಜೊಲ್ಲೆಯವರು ಮದ್ಯ ಪ್ರವೇಶಿಸಿ ಪಿಡಿಓನಿಂದ ಮಾಹಿತಿ ಪಡೆದು ಗ್ರಾಮದ ಹಾಗೂ ಸುತ್ತಮುತ್ತಲಿನ ಕೆಟ್ಟ ಒಳ ರಸ್ತೆಗಳನ್ನು ನರೇಗಾ ಯೋಜನೆಯಡಿ ಕಾಮಗಾರಿ ಕೈಗೊಂಡು ರಸ್ತೆ ದುರಸ್ಥಿಗೊಳಿಸಬೇಕು ಎಂದು ಸೂಚಿಸಿದರು ಆಗ ಪರಿಸ್ಥಿತಿ ತಿಳಿಗೊಂಡಿತು, ನಂತರ ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ಗ್ರಾಮ ಪಂಚಾಯತಿ ಅಭಿವೃದ್ಧಿಗೆ ಕೋಟ್ಯಂತರ ರೂಪಾಯಿ ಅನುದಾನವಿದೆ, ಪಕ್ಷ ಭೇದ ಮರೆತು ಎಲ್ಲರೂ ಒಗ್ಗಟ್ಟಾಗಿ ಕಾಮಗಾರಿ ಕೈಗೊಂಡು ಗ್ರಾಮಗಳ ಅಭಿವೃದ್ಧಿ ಪಡಿಸಿಕೊಳ್ಳಬೇಕು ಎಂದರು.
ಈ ವೇಳೆ ಶಾಸಕ ಮಹೇಶ ಕುಮಠಳ್ಳಿ, ಗ್ರಾಪಂ ಅಧ್ಯಕ್ಷರಾದ ಕೀರ್ತಿ ಚವ್ಹಾಣ, ಸುರೇಖಾ ಹುಡೆದ, ಉಪಾಧ್ಯಕ್ಷರಾದ ರೋಹಿಣಿ ಮಾದರ, ಪ್ರಕಾಶ ಮೋಹಿತೆ, ತಾಪಂ ಸದಸ್ಯ ಜಯವಂತರಾವ್ ದೇಸಾಯಿ, ಅಶೋಕ ಮಗದುಮ್ಮ, ಶ್ರೀಶೈಲ ನಾಯಿಕ, ರವಿ ಪಾಟೀಲ, ಬಸಪ್ಪ ಗಣಿ, ಗುರುಪಾದ ಸವದಿ, ಪಿಡಿಓಗಳಾದ ವಿನೋದ ಪಾಯಕ, ಬಿ.ಎಚ್ ಬಳೋಜ, ಎಲ್.ಎಸ್. ಬಾಗೇಣ್ಣವರ, ಶಾಂತಿನಾಥ ನಂದೇಶ್ವರ, ಗುರಪ್ಪಾ ಸವದಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');